
ಸಿರವಾರ.ಜ೧೯- ವಾರ್ಡಿನಲ್ಲಿ ಸಿಸಿ ರಸ್ತೆ, ಕುಡಿಯುವ ನೀರು ಒದಗಿಸುತ್ತೆನೆಂದು ಚುನಾವಣೆ ಸಂದರ್ಭದಲ್ಲಿ ಭರವಸೆ ನೀಡಿದಂತೆ ಕಾಮಗಾರಿಗೆ ಚಾಲನೆ ನೀಡಿದೆನೆ ಎಂದು ಪ.ಪಂಚಾಯತಿ ವಾರ್ಡ ೦೬ ಸದಸ್ಯ ಹಾಜಿಚೌದ್ರಿ ಹೇಳಿದರು. ಪಟ್ಟಣದ ತಮ್ಮ ವಾರ್ಡಿನಲ್ಲಿ ತಾಯಮ್ಮ ದೇವಸ್ಥಾನದ ಮುಂಭಾಗದಲ್ಲಿ ೨೦೨೨-೨೩ ಎಸ್.ಎಪ್.ಸಿ ೩.೬೦ ಲಕ್ಷ ರೂ ವೆಚ್ಚದಲ್ಲಿ ಸಿಸಿ ರಸ್ತೆ , ೧೫ ನೇ ಹಣಕಾಸು ೧.೬೦ ಲಕ್ಷ ವೆಚ್ಚದಲ್ಲಿ ಕುಡಿಯುವ ನೀರಿನ ಪೈಪ್ ಲೈನ್ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು ಮಳೆ ಬಂದರೆ ರಸ್ತೆ ಕೆಸರು ಗದ್ದೆಯಾಗುತ್ತದೆ, ಓಡಾಡಲು ತೊಂದರೆಯಾಗುತ್ತಿದೆ, ಬೇರೆ ಕಡೆಯಿಂದ ನೀರು ತರಬೇಕಾಗಿದೆ, ಅನೇಕ ವರ್ಷಗಳಿಂದ ಈ ಭಾಗದ ನಿವಾಸಿಗಳು ಸಿಸಿ ರಸ್ತೆ, ನೀರಿನ ಪೈಪ್ ಲೈನ್ ಮಾಡಿಸಬೇಕೆಂದು ಬೇಡಿಕೆ ಇಟ್ಟಿದರು. ಪ.ಪಂಚಾಯತಿ ಚುನಾವಣೆ ಸಂದರ್ಭದಲ್ಲಿ ಸಹ ಹೇಳಿದರು. ಅದರಂತೆ ಮೊದಲ ಅನುದಾನದಲ್ಲಿ ಸಿಸಿ ರಸ್ತೆ, ಕುಡಿಯುವ ನೀರಿನ ಪೈಪ್ ಲೈನ್ ಮಾಡಲಾಗುತ್ತದೆ, ಮಾತು ಕೊಟ್ಟಂತೆ ನಡೆದುಕೊಳುತ್ತಿರುವೆ. ಸಾರ್ವಜನಿಕರು ರಸ್ತೆ ಮಾಡುವಾಗಿ ವಿಕ್ಷಣೆ ಮಾಡುತ್ತಿರಬೇಕು. ಗುಣಮಟ್ಟದ ಕಾಮಗಾರಿ ಮಾಡಬೇಕು ಎಂದರು. ಈ ಸಂದರ್ಭದಲ್ಲಿ ಜೆ.ಇ. ಎಂ.ಎಸ್ ಹಸೇನ್ ಸಾಬ್, ಹಿರಿಯ ಮುಖಂಡ ಎಂ.ಡಿ ಹುಸೇನ್, ಎಮ.ಲತೀಪ್ ಸಾಬ್, ಮಲ್ಲಿಕಾರ್ಜುನ, ಉಮೇಶ ನಾಯಕ, ಶಾಬುದೀನ್ ಶರಣಬಸವ,ಪೂಜಾರಿ ಬಸವ,ಬಾವು ಸಾಬ, ಬಂದೆನವಾಜ್, ಹುಲಿಗೆಪ್ಪ, ಮೊಹನೂದಿನ್, ನಿಜಾಮುದಿನ್, ವಲಿ ಸೇರಿದಂತೆ ಇನ್ನಿತರರು ಇದರು.