ಚುನಾವಣೆ ಪ್ರಯುಕ್ತ ಬೆಂಗಳೂರು-ಬೀದರ ವಿಶೇಷ ರೈಲು

ಬೀದರ,ಮೇ 9: ರಾಜ್ಯ ವಿಧಾನಸಭಾ ಚುನಾವಣೆ ನಿಮಿತ್ಯ ಬೀದರ ಲೋಕಸಭಾ ಕ್ಷೇತ್ರದ ಜನತೆಯ ಅನುಕೂಲಕ್ಕಾಗಿ ರಾಜಧಾನಿ ಬೆಂಗಳೂರಿನಿಂದ ಬೀದರಗೆ ವಿಶೇಷ ರೈಲಿನ ವ್ಯವಸ್ಥೆ ಮಾಡಲಾಗಿದೆ. ಕ್ಷೇತ್ರದ
ಸಮಸ್ತ ಜನತೆ ಈ ವಿಶೇಷ ರೈಲಿನ ಸದುಪಯೋಗಪಡೆದುಕೊಳ್ಳಲು ಕೇಂದ್ರ ಸಚಿವ ಭಗವಂತ ಖೂಬಾ ಅವರು ಜನತೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಬೆಂಗಳೂರಿನಿಂದ ಬೀದರಗೆ ಮೇ 09 ರಂದು,(ರೈಲು ಸಂಖ್ಯೆ: 06597) ಸಂಜೆ 5 ಗಂಟೆಗೆ, ಎಸ್.ಬಿ.ಸಿ. ಬೆಂಗಳೂರಿನಿಂದ ಹೊರಟು ಯಶವಂತಪೂರ, ಯಲಹಂಕ, ಧರ್ಮಾವರಂ
ಜಂಕ್ಷನ್, ರಾಯಚೂರ, ಯಾದಗಿರ, ವಾಡಿ, ಕಲಬುರಗಿ ಮಾರ್ಗವಾಗಿ
ಹುಮನಾಬಾದಗೆ ಮರುದಿನ ಬೆ ಳಿಗ್ಗೆ 7.20 ಕ್ಕೆ ಬೀದರಗೆ ತಲುಪಲಿದೆ.
ಬೀದರ ನಿಂದ ಬೆಂಗಳೂರಿಗೆ ಮೇ.10 ರಂದು,
(ರೈಲು ಸಂಖ್ಯೆ: 06598) ರಾತ್ರಿ. 8 ಗಂಟೆಗೆ ಬೀದರನಿಂದ ಹೊರಟು
ಮರುದಿನ ಬೆ. 10 ಗಂಟೆಗೆ ಎಸ್.ಬಿ.ಸಿ. ಬೆಂಗಳೂರಿಗೆ ತಲುಪಲಿದೆ.
ಚುನಾವಣೆ ಘೋಷಣೆಯಾದ ದಿನದಿಂದ ಮತದಾನಕ್ಕೆ ವಿಶೇಷ
ರೈಲಿನ ವ್ಯವಸ್ಥೆ ಮಾಡಿಕೊಡಿ ಎಂದು ಕೇಂದ್ರ ಸಚಿವ ಭಗವಂತ
ಖೂಬಾರವರಿಗೆ ಕ್ಷೇತ್ರದ ಜನತೆ ಮನವಿ ಮಾಡುತ್ತಿದ್ದರು, ಈ ಹಿನ್ನೆಲೆಯಲ್ಲಿ ಕೇಂದ್ರ ಸಚಿವರು ರೈಲ್ವೆ ಸಚಿವರಿಗೆ ಮನವರಿಕೆ ಮಾಡಿಕೊಟ್ಟ ಹಿನ್ನಲೆಯಲ್ಲಿ
ವಿಶೇಷ ರೈಲಿನ ವ್ಯವಸ್ಥೆ ಮಾಡಲಾಗಿದೆ ಎಂದು ಸಚಿವ ಭಗವಂತ
ಖೂಬಾರ ಅವರು ತಿಳಿಸಿದ್ದಾರೆ.