ಚುನಾವಣೆ ಪ್ರತಿಜ್ಞಾವಿಧಿ ಬೋಧನೆ

ಸಿರವಾರ,ಏ.೧೧- ಮುಂದಿನ ತಿಂಗಳು ಜರಗುವ ಚುನಾವಣೆ ಹಿನ್ನೆಲೆಯಲ್ಲಿ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವಿಧಾನ ಸಭೆಯ ಚುನಾವಣೆಯ ಪ್ರಜ್ಞಾವಿಧಿ ಬೋಧನ ಹಾಗೂ ಪ್ರಧಾನ ಮಂತ್ರಿ ಮಾತೃತತ್ವ ಸುರಕ್ಷಾ ಅಭಿಯಾನ ಕಾರ್ಯಕ್ರಮ ಸೋಮವಾರ ಗರ್ಭಿಣಿಯರ ತಪಾಸಣೆ ನಡೆಯಿತು.
ತಾಯಿ-ಮಗು ಆರೋಗ್ಯದ ಬಗ್ಗೆ ಗಮನ ಹರಿಸಬೇಕು, ಮೇ.೧೦ರಂದು ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಎಲ್ಲರೂ ಕಡ್ಡಾಯವಾಗಿ ಭಾಗವಹಿಸಿ ಮತದಾನ ಮಾಡುವಂತೆ ಪ್ರತಿಜ್ಞಾವಿಧಿಯನ್ನು ಡಾ.ಸುನೀಲ್ ಭೋದಿಸಿದರು.
ಸಂದರ್ಭದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶ್ರೀದೇವಿ, ಹಿರಿಯ ಆರೋಗ್ಯ ಸಹಾಯಕ ಶರಣಬಸವ, ಆಸ್ಪತ್ರೆಯ ಸಿಬ್ಬಂದಿ ವರ್ಗದವರು, ಆಶಾ ಕಾರ್ಯಕರ್ತರು ಗರ್ಭಿಣಿ ತಾಯಂದಿರು ಹಾಗೂ ಇತರರು ಭಾಗವಹಿಸಿದ್ದರು.