ಸೊರಬ. ಮಾ.30: 2023ರ ಸಾರ್ವತ್ರಿಕ ಚುನಾವಣೆಯ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದ ನಿರ್ದೇಶನದಂತೆ ಪಟ್ಟಣದ ತಾಲೂಕು ಕಚೇರಿ ಸಭಾಂಗಣದ ಚುನಾವಣಾ ಅಧಿಕಾರಿಗಳ ಕಾರ್ಯಾಲಯದಲ್ಲಿ ಸುದ್ದಿಗಾರರೊಂದಿಗೆ ಹಾಗೂ ವಿವಿಧ ಪಕ್ಷಗಳ ರಾಜಕೀಯ ಮುಖಂಡರುಗಳಿಗೆ ಕರೆಯಲಾಗಿದ್ದ ಸಭೆಯಲ್ಲಿ ಚುನಾವಣಾ ರಿಟರ್ನಿಂಗ್ ಆಫೀಸರ್ ಪ್ರವೀಣ್ ಜೈನ್ ಮಾತನಾಡಿ ಸೊರಬ ತಾಲೂಕಿನಲ್ಲಿ 7 ಹೋಬಳಿಗಳಿದ್ದು. 239 ಮತಗಟ್ಟೆಗಳಿವೆ. ಒಟ್ಟು 1, 93.584 ಮತದಾರರಿದ್ದಾರೆ. 97,674 ಪುರುಷ ಮತದಾರರು. 95.910 ಮಹಿಳಾ ಮತದಾರರಿದ್ದಾರೆ. ಮತ್ತು ಸೂಕ್ಷ್ಮ ಮತಗಟ್ಟೆಗಳು. ಅತಿ ಸೂಕ್ಷ್ಮ ಮತಗಟ್ಟೆಗಳಿವೆ 21 ಸೆಕ್ಟರ್ ಆಫೀಸರ್ಗಳ ತಂಡವನ್ನು. ಏಳು ಪೋಲಿಂಗ್ ಸ್ಕ್ಯಾಡ್ ತಂಡವನ್ನು.4 ಚೆಕ್ ಪೋಸ್ಟ್ಗಳನ್ನು.7 ವಿ ಎಸ್ ಟಿ. ಒಂದು ಲೆಕ್ಕಪರಿಶೋಧನಾ ತಂಡ. ರಚಿಸಲಾಗಿದೆ ಎಂದು ಮಾಹಿತಿ ನೀಡಿದ ಅವರು ಚುನಾವಣೆ ಕ್ರಮಗಳಿಗೆ ಸಂಬಂಧಿಸಿದಂತೆ ಮಾಹಿತಿಯನ್ನು ನೀಡಲು ಏಕ ಗವಾಕ್ಷಿ ವ್ಯವಸ್ಥೆ ಮಾಡಲಾಗಿದೆ. ನೀತಿ ಸಂಹಿತೆಯನ್ನ ಉಲ್ಲಂಘಿಸಿ ನಡೆದರೆ ಇದಕ್ಕೆ ಸಂಬಂಧಿಸಿದಂತೆ ಪ್ರಕರಣವನ್ನು ದಾಖಲಿಸಲಾಗುವುದು ಎಂದರು.ಈ ಸಂದರ್ಭದಲ್ಲಿ ಪಿಎಸ್ಐ ನಾಗರಾಜ್, ಕಾರ್ಯ ನಿರ್ವಹಣಾ ಅಧಿಕಾರಿ ನಾಗರಾಜ್ ಅನ್ವೇಕರ್, ಶಿರಸ್ತೆದಾರ್ ನಾಗರಾಜ್, ಪುರಸಭೆಯ ಮುಖ್ಯ ಅಧಿಕಾರಿ ಗಿರೀಶ್, ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಅಕ್ಷತಾ, ವಿವಿಧ ರಾಜಕೀಯ ಪಕ್ಷದ ಮುಖಂಡರುಗಳಾದ. ಪ್ರಕಾಶ ತಲಕಾಲಕೊಪ್ಪ, ಅಬ್ದುಲ್ ರಸಿದ್ ಹಿರೇ ಕೌನ್ಸಿ, ಜಗದೀಶ್, ಪರಶುರಾಮ್, ಸುಜಾಾಯತ್, ಫಯಾಜ್, ಹುಚ್ಚಪ್ಪ, ಗಣಪತಿ, ಲಕ್ಷ್ಮಣಪ್ಪ, ರವಿ ತಾವರೆಕೊಪ್ಪ, ಮುಕ್ತಿಯರ್ ಭಾಷಾ, ಸೇರಿದಂತೆ ಹಲವರು ಭಾಗವಹಿಸಿದ್ದರು.