
ಅಥಣಿ : ಎ.2:ಪಟ್ಟಣದ ಪೆÇೀಲಿಸ್ ಸಮುದಾಯ ಭವನದಲ್ಲಿ ಮಹಾವೀರ ಜಯಂತಿ ಮತ್ತು ಹನುಮ ಜಯಂತಿ ಪೂರ್ವಭಾವಿ ಸಭೆಯನ್ನು ಅಥಣಿ ಡಿವೈಎಸ್ಪಿ ಶ್ರೀಪಾದ ಜಲ್ದೆ ಇವರ ಅಧ್ಯಕ್ಷತೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಈ ವೇಳೆ ಸಿಪಿಐ ರವೀಂದ್ರ ನಾಯ್ಕೋಡಿ ಮಾತನಾಡಿ ಸದ್ಯದ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿ ಇರುವದರಿಂದ ಧಾರ್ಮಿಕ ಆಚರಣೆಗೆ ಅಡ್ಡಿಯಾಗದಂತೆ ಮತ್ತು ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಆಗದಂತೆ ಜಯಂತಿಗಳನ್ನು ಆಚರಿಸುವಂತೆ ಸಾರ್ವಜನಿಕರಿಗೆ ಸಲಹೆ ನೀಡಿದರು. ಹೃದಯ ದೌರ್ಬಲ್ಯ ಉಳ್ಳವರು, ವಯೋವೃದ್ಧರು ಹಾಗೂ ಮಕ್ಕಳು ಮತ್ತು ಬಾಣಂತಿಯರಿಗೆ ತೊಂದರೆ ಉಂಟು ಮಾಡುವ ನಿಟ್ಟಿನಲ್ಲಿ ಅಬ್ಬರದ ಸಂಗೀತ ಹೊಮ್ಮಿಸುವ
ಡಾಲ್ಬಿಗಳನ್ನು ಬಳಸುವಂತಿಲ್ಲ, ಮೈಕ್ ಹಾಗೂ ಸೌಂಡ್ ಸ್ಪೀಕರ್ ಅಳವಡಿಕೆಗೆ ಚುನಾವಣಾ ಆಯೋಗ ಹಾಗೂ ಪೆÇೀಲೀಸ್ ಇಲಾಖೆಯ ಅನುಮತಿ ಕಡ್ಡಾಯ ಎಂದ ಅವರು ಶಾಂತ ರೀತಿಯಲ್ಲಿ ರಾಜಕೀಯ ಸಂಘರ್ಷಗಳು ಉಂಟಾಗದಂತೆ ಆಯೋಜಕರು ಜಯಂತಿಗಳನ್ನು ಆಚರಿಸುವಂತೆ ತಿಳಿಸಿದರು.
ಚುನಾವಣೆ ಸಮಯ ಇರುವುದರಿಂದ ಸಣ್ಣ ಪುಟ್ಟ ಘಟನೆಗಳು ಆಗುವ ಸಾಧ್ಯತೆ ಇರುವುದರಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ ಈ ಜಯಂತಿ ಕಾರ್ಯಕ್ರಮಗಳು ರಾಜಕೀಯ ಪ್ರೇರಿತವಾಗದಿರಲಿ ಎಂದರು
ಈ ವೇಳೆ ಡಿವೈಎಸ್ಪಿ ಶ್ರೀಪಾದ ಜಲ್ದೆ ಅವರು ಮಾತನಾಡಿ ಧಾರ್ಮಿಕ ಆಚರಣೆಗಳಲ್ಲಿ ರಾಜಕೀಯ ಬೆರೆತು ಶಾಂತಿ ಸುವ್ಯವಸ್ಥೆ ಭಂಗವಾಗುವ ಸಾಧ್ಯತೆ ಇರುವದರಿಂದ ಡಾಲ್ಬಿ ಹೊರತು ಪಡಿಸಿ ಧಾರ್ಮಿಕ ಆಚರಣೆ ಮಾಡುವಂತೆ ತಿಳಿಸಿದರಲ್ಲದೆ ಎಲ್ಲ ಗ್ರಾಮಗಳ ಹಿರಿಯರು, ರಾಜಕೀಯ ಮುಖಂಡರು, ತಮ್ಮ ತಮ್ಮ ಗ್ರಾಮಗಳಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸಹಕರಿಸಬೇಕು ಎಂದರು.
ಈ ಸಂದರ್ಭದಲ್ಲಿ ಜೈನ ಸಮಾಜದ ಮುಖಂಡರಾದ ಅರುಣ ಯಲಗುದ್ರಿ, ನೇಮಿನಾಥ ನಂದೇಶ್ವರ, ನ್ಯಾಯವಾದಿ ವಿನಯ ಪಾಟೀಲ, ಮುಖಂಡರಾದ ಅಜೀತ ಪವಾರ ಮಾತನಾಡಿದರು,
ಈ ವೇಳೆ ಶಾಂತಿಪಾಲನಾ ಸಭೆಯಲ್ಲಿ ಡಿವೈಎಸ್ಪಿ ಶ್ರೀಪಾದ ಜಲ್ದೆ, ಅಥಣಿ ಸಿಪಿಐ ರವೀಂದ್ರ ನಾಯ್ಕೋಡಿ, ಅಥಣಿ ಪಿಎಸ್ ಐ ಶಿವಶಂಕರ ಮುಕರಿ, ಹೆಚ್ಚುವರಿ. ಪಿಎಸ್ ಐಗಳಾದ ಚಂದ್ರಶೇಖರ ಸಾಗನೂರ, ಲಕ್ಷ್ಮಿ ಬಿರಾದಾರ, ಮತ್ತು ಅಥಣಿ ಪಟ್ಟಣದ ಗಣ್ಯರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು.