ಚುನಾವಣೆ ನಿಯೋಜನೆಗೂ ಮುನ್ನ ಖಾಕಿ ಖಾಕಿ ಕ್ರಿಕೆಟ್ ಪ್ರೆಂಡ್ಲಿ ಫೈಟ್.

ಕೂಡ್ಲಿಗಿ.ಡಿ. 26:- ತಾಲೂಕಿನ ಗ್ರಾಮ ಪಂಚಾಯತಿ ಚುನಾವಣೆ ಭಾನುವಾರ ನಡೆಯುತ್ತಿರುವ ಹಿನ್ನೆಲೆಯಲ್ಲಿ ಶನಿವಾರ ಬೆಳಿಗ್ಗೆ ಚುನಾವಣೆ ಕರ್ತವ್ಯಕ್ಕೆ ಹಾಜರಾಗಲು ಸ್ಥಳ ನಿಯೋಜನೆ ಮಾಡುವ ಮುನ್ನ ಪಟ್ಟಣದ ಮಹಾದೇವ ಮೈಲಾರ ಕ್ರೀಡಾಂಗಣದಲ್ಲಿ ಕೆ ಎಸ್ ಆರ್ ಟಿ ಸಿ ಮತ್ತು ಕೆ ಎಸ್ ಆರ್ ಪಿ ತುಕಡಿ ಸಿಬ್ಬಂದಿಗಳು ಪ್ರೆಂಡ್ಲಿ ಕ್ರಿಕೆಟ್ ಆಟದಲ್ಲಿ ತೊಡಗಿದ್ದರು. ಮಕ್ಕಳು ಕ್ರಿಕೆಟ್ ಆಟವಾಡುತ್ತಿರುವಾಗ ಅದೇ ಕ್ರೀಡಾಂಗಣದಲ್ಲಿ ಮಕ್ಕಳ ಆಟ ನೋಡುತ್ತಿದ್ದ ಎರಡು ಖಾಕಿ ಪಡೆ ಪ್ರೆಂಡ್ಲಿ ಕ್ರಿಕೆಟ್ ಆಟಕ್ಕೆ ಮುಂದಾಗಿ ಟಾಸ್ ಮಾಡುವ ಮೂಲಕ ಕೆ ಎಸ್ ಆರ್ ಟಿ ಸಿ ಮೊದಲ ಬ್ಯಾಟಿಂಗ್ ಶುರು ಮಾಡಿ ಆರು ಓವರ್ ಗೆ ಮೂರು ವಿಕೆಟ್ ಕಳೆದುಕೊಂಡು 46 ರನ್ನು ಗಳಿಸಿತು. ನಂತರ ಬ್ಯಾಟಿಂಗ್ ಮಾಡಿದ ಕೆ ಎಸ್ ಆರ್ ಪಿ ಪಡೆ ಸಿಬ್ಬಂದಿಗಳು ಆರು ಓವರ್ ಗಳಲ್ಲಿ ಮೂರು ವಿಕೆಟ್ ಕಳೆದುಕೊಂಡು 47ರನ್ನು ಗಳಿಸಿ ಜಯಗಳಿಸಿದರು.