ಇಂಡಿ:ಎ.8: 2023ರ ಚುನಾವಣೆ ನಿಮಿತ್ಯ ಪಟ್ಟಣದಲ್ಲಿ ಪ್ಯಾರ ಮಿಲ್ಟ್ರೀ ಹಾಗೂ ಪೊಲೀಸ್ ಇಲಾಖೆಯ ಸಿಬ್ಬಂದಿಗಳು ನಗರದ ಪ್ರಮುಖ ರಸ್ತೆಗಳಲ್ಲಿ ಡಿ.ವಾಯ್..ಎಸ್.ಪಿ ಚಂದ್ರಶೇಖರ ನಂದರೆಡ್ಡಿ, ಗ್ರಾಮೀಣ ಸಿ.ಪಿ.ಆಯ್ ಮಹಾದೇವಪ್ಪ ಶಿರಹಟ್ಟಿ, ನಗರ ಸಿ.ಪಿ.ಆಯ್ ಜೀರಗಾಳ ಹಾಗೂ ಗ್ರಾಮೀಣ ಪಿ.ಎಸ್.ಆಯ್. ಅಶೋಕ ನಾಯಕ ಇವರ ನೈತೃತ್ವದಲ್ಲಿ ಅತ್ಯೆಂತ ಶಿಸ್ತಿನ ಶಿಪಾಯಿಯಂತೆ ನಗರದಲ್ಲಿ ಪಥಸಂಚಲನ ಮಾಡಿದರು.
ಈ ಸಂದರ್ಬದಲ್ಲಿ ಸಿ.ಪಿ.ಆಯ್ ಮಹಾದೇವಪ್ಪ ಶಿರಹಟ್ಟಿ ಮಾತನಾಡಿ 2023ರ ಚುನಾವಣೆ ಸರಕಾರದ ನಿಯಾಮಾನುಸಾರ ಹಾಗೂ ಚುನಾವಣಾ ಆಯೋಗದ ನಿಯಮದಂತೆ ಅತ್ಯೆಂತ ಕಟ್ಟು ನಿಟ್ಟಿನಿಂದ ಚುನಾವಣೆ ನಡೆಯುತ್ತದೆ. ಈ ಭಾಗದ ಕರ್ನಾಟಕ ,ಮಹಾರಾಷ್ಟ್ರ ಗಡಿ ಭಾಗದಲ್ಲಿರುವದರಿಂದ ಸೈನಿಕರು ಹಾಗೂ ಪೊಲೀಸ್ ಸಿಬ್ಬಂದಿ ಬಹಳ ಎಚ್ಚರಿಕೆ ವಹಿಸುವ ಅಗತ್ಯೆವಿದೆ. ಚುನಾವಣೆಯ ಸಂಧರ್ಬದಲ್ಲಿ ಯಾವುದೇ ಅನಧಿಕೃತ ಚುಟುವಟಿಕೆ ನಡೆಯಕೂಡದು ಸಾರ್ವಜನಿಕರು ಸಹ ಸಹಕರಿಸಬೇಕು. ಚುನಾವಣೆ ಆಯೋಗದ ನಿಯಮಗಳು ಕಟ್ಟುನಿಟ್ಟಾಗಿ ಪಾಲನೆ ಮಾಡಿದರೆ ಒಳಿತು ಅಶಿಸ್ತು ಕಂಡು ಬಂದರೆ ಯಾವುದೇ ಮುಲಾಜೀಲ್ಲದೆ ಕ್ರಮಕೈಗೊಳ್ಳಲಾಗುವುದು ಎಂದರು.