ಚುನಾವಣೆ ನಿಮಿತ್ತ ಜನ ಜಾಗೃತಿ  


ಸಂಜೆವಾಣಿ ವಾರ್ತೆ
ಕುಕನೂರು, ಏ.05:  ಪಟ್ಟಣ ಪಂಚಾಯಿತಿಯ ಸಿಬ್ಬಂದಿಗಳಿಂದ  ಇಂದು ಬೆಳಗಿನ ಜಾವ ಎಲ್ಲ ಪೌರಕಾರ್ಮಿಕರಿಗೆ ಹಾಗೂ12ನೇ ವಾರ್ಡಿನ ನೂಲಿ ಚಂದಯ್ಯನ ದೇವಸ್ಥಾನದ ಹತ್ತಿರ ಎಲ್ಲಾ ಸಾರ್ವಜನಿಕರಿಗೆ  ಜನ ಜಾಗೃತಿ  ಹಮ್ಮಿಕೊಳ್ಳಲಾಯಿತು . ಮತವನ್ನು ಹೇಗೆ ಚಲಾಯಿಸಬೇಕು ಎಂಬುದರ ಕುರಿತು ಜನಜಾಗೃತಿ ಮೂಡಿಸಲಾಯಿತು ಉಪಸ್ಥಿತಿಯಲ್ಲಿ ಮಾನ್ಯ ಮುಖ್ಯ ಅಧಿಕಾರಿಗಳಾದ ಪ್ರಕಾಶ್ ಬಾಗಲೆ ಮತ್ತು ಕಿರಿಯ ಆರೋಗ್ಯ ನಿರೀಕ್ಷಕರಾದ ಶ್ರೀಮತಿ ರಾಜೇಶ್ವರಿ ಎಂ ಡಿ ಹಾಗು ಶಿವು ಉಮೇಶ್ ಸಚಿನ್ ಇತರ ಪಟ್ಟಣ ಪಂಚಾಯಿತಿ ಸಿಬ್ಬಂದಿಗಳು ಉಪಸ್ಥಿತರಿದ್ದರು.