
ಕೂಡ್ಲಿಗಿ.ಏ.9 :- ರಾಜ್ಯದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗವು ಚುನಾವಣೆ ಮಾದರಿ ನೀತಿ ಸಂಹಿತೆ ಕಟ್ಟು ನಿಟ್ಟಾಗಿ ಪಾಲಿಸಲು ಜಾರಿಗೆ ತಂದಿದ್ದು 96-ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ದೂರಗಳನ್ನು ಸಲ್ಲಿಸಲು 08391-297001ಗೆ ಕರೆ ಮಾಡಿ ಮಾಹಿತಿ ನೀಡಿ ದೂರು ಸಲ್ಲಿಸಬಹುದಾಗಿದೆ
ಕೂಡ್ಲಿಗಿ ತಾಲೂಕು ಆಡಳಿತ ಸೌಧದಲ್ಲಿ ಚುನಾವಣೆಗೆ ಸಂಬಂಧಿಸಿದಂತೆ ದೂರಿಗಾಗಿ ಕರೆ ಮಾಡುವ ಕಟ್ರೋಲ್ ರೂಂ ತೆರೆಯಲಾಗಿದ್ದು ದಿನದ 24*7 ಸೇವೆಯಲ್ಲಿ 8 ತಾಸಿಗೊಬ್ಬರಂತೆ 9 ಮಂದಿಯನ್ನು ನಿಯೋಜಿಸಲಾಗಿದ್ದು ಈ ಕರೆ ಸ್ವೀಕರಿಸಿ ಆ ದೂರನ್ನು ದಾಖಲಿಸಿಕೊಂಡು ಕ್ಷೇತ್ರದ ಚುನಾವಣಾಧಿಕಾರಿಗೆ ದೂರಿನ ಮಾಹಿತಿ ಸಲ್ಲಿಸಲಾಗುತ್ತದೆ ಎಂದು ಕೂಡ್ಲಿಗಿ ಚುನಾವಣಾ ಸಹಾಯಕ ಸಿಬ್ಬಂದಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.