
ಸೇಡಂ,ಎ,03: ತಾಲ್ಲೂಕಾ ಕೇಂದ್ರ ಚುನಾವಣೆ ಜಾಗೃತಿ ಅಭಿಯಾನ ಅಂಗವಾಗಿ ಬೈಕ್ ಜಾಥಾ ಆಯೋಜಿಸಲಾಗಿದ್ದು ಪಟ್ಟಣದ ಕೋತ್ತಲ ಬಸವೇಶ್ವರ ದೇವಾಸ್ಥಾನದಿಂದ ಬಸ್ ನಿಲ್ದಾಣದವರೆಗೆ ಬೈಕ ಜಾಥಾಕ್ಕೆ ಸಹಾಯಕ ಆಯುಕ್ತರಾದ ಕಾರ್ತಿಕ ಎಮ್ ಚಾಲನೆ ನೀಡಿ ಮಾತನಾಡಿದರು. ತಹಸಿಲ್ದಾರ್ ಶಿವರಾಜ್, ಕಾರ್ಯನಿರ್ವಾಹಕ ಅಧಿಕಾರಿಗಳಾದ ಶಂಕರ್ ರಾಥೋಡ್ ರವರು ಎಲ್ಲರಿಗೂ ಪ್ರತಿಜ್ಞಾ ವಿಧಿ ಬೋಧಿಸಿದರು, ನಂತರ ಬೈಕ್ ಜಾಥಾ ಆರಂಭಿಸಲಾಯಿತು. ಕಿರಣಾ ಬಜಾರ್,ರೈಲ್ವೆ ಸ್ಟೇಷನ್, ಬಸ್ಟ್ಯಾಂಡ್ ಒಳಗಡೆ, ಬಸವೇಶ್ವರ ಸರ್ಕಲ್ ದಿಂದ ಕೊನೆಗೆ ಬಸ್ ನಿಲ್ದಾಣ ಮುಂದುಗಡೆ ಕಡ್ಡಾಯ ಮತದಾನದ ಕುರಿತು ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು.
ಬೈಕ್ ಜಾಥ ವಿವಿಧ ಇಲಾಖೆಗಳಾದ
ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿ ವಿಜಯಕುಮಾರ,
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿಗಳಾದ ಶ್ರೀ ಗೌತಮ್ ಶಿಂದೆ, ಅನೀಲಕುಮಾರ್ ಮಾನ್ಪಡೆ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಿವಶಂಕರಯ್ಯ ಸ್ವಾಮಿ ಇಮಡಾಪೂರ, ರಾಜಶೇಖರ್ ರುದನೂರು, ಸೇರಿದಂತೆ ಆರೋಗ್ಯ ಇಲಾಖೆ, ತಾಲೂಕ ಪಂಚಾಯತ್ ಸಿಬ್ಬಂದಿಗಳು ಹಾಗೂ ಅಂಗನವಾಡಿ ಸುಪ್ರವೈಸರ್ ಮತ್ತು ಕಾರ್ಯಕರ್ತರು, ಇತರೆ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.