
ಕೋಲಾರ, ಮಾ. ೩- ತ್ರಿಪುರ ಹಾಗೂ ನಾಗಾಲ್ಯಾಂಡ್ ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ವಿಜಯ ಸಾಧಿಸಿದ್ದಕ್ಕೆ ಪಟಾಕಿ ಸಿಡಿಸಿ ಸಿಹಿ ಹಂಚುವ ಮೂಲಕ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ನಗರದ ಬಂಗಾರಪೇಟೆ ವೃತ್ತದಲ್ಲಿ ವಿಜಯೋತ್ಸವ ಆಚರಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ವೇಣುಗೋಪಾಲ್ ಮಾತನಾಡಿ, ದೇಶದ ಜನರ ಮನಸ್ಸಿನಲ್ಲಿ ನರೇಂದ್ರ ಮೋದಿ ಎಷ್ಟು ಗಟ್ಟಿಯಾಗಿ ಬೇರೂರಿದ್ದಾರೆ ಎಂಬುದನ್ನು ತ್ರಿಪುರ ಹಾಗೂ ನಾಗಾಲ್ಯಾಂಡ್ ವಿಧಾನಸಭಾ ಚುನಾವಣೆಯಲ್ಲಿ ತೋರಿಸಿಕೊಟ್ಟಿದ್ದಾರೆ ಅದೇ ರೀತಿ ಕಳೆದ ಬಾರಿ ನಾಲ್ಕು ಸ್ಥಾನ ಪಡೆದಿದ್ದ ಮೇಘಾಲಯ ವಿಧಾನಸಭಾ ಚುನಾವಣೆಯಲ್ಲಿ ಈಬಾರಿ ಎಂಟು ಸ್ಥಾನ ಪಡೆದು ನರೇಂದ್ರ ಮೋದಿ ಕೈ ಬಲಪಡಿಸಿದ್ದಾರೆ ಎಂದರು.
ಈ ಚುನಾವಣೆಯ ದಿಕ್ಸೂಚಿಯಾಗಿ ಮುಂದಿನ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಡಬಲ್ ಇಂಜನ್ ಸರಕಾರದ ಕಾರ್ಯಕ್ರಮ ಹಾಗೂ ಯೋಜನೆಗಳ ಮೂಲಕ ಮತದಾರರು ಕರ್ನಾಟಕದಲ್ಲಿ ಬಿಜೆಪಿ ಪಕ್ಷಕ್ಕೆ ಅಧಿಕಾರ ನೀಡಲಿದ್ದಾರೆ ಜೊತೆಗೆ ಈ ಫಲಿತಾಂಶವು ದೇಶಾದ್ಯಂತ ಬಿಜೆಪಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲ್ಲು ಕಾರ್ಯಕರ್ತರಿಗೆ, ಮತದಾರರಿಗೆ ಮತ್ತು ನಾಯಕರಿಗೆ ಇನ್ನಷ್ಟು ಶಕ್ತಿ ತಂದುಕೊಡಲಿದೆ ಎಂದು ಹೇಳಿದರು.
ಸಂಸದ ಎಸ್.ಮುನಿಸ್ವಾಮಿ, ಮಾಜಿ ಶಾಸಕರಾದ ಮಾಲೂರು ಕೆ.ಎಸ್.ಮಂಜುನಾಥ್ ಗೌಡ, ಶಿಡ್ಲಘಟ್ಟ ರಾಜಣ್ಣ, ಮಾವು ಅಭಿವೃದ್ಧಿ ನಿಗಮದ ಅಧ್ಯಕ್ಷ ವಾಸುದೇವ್, ಬಿಜೆಪಿ ಮುಖಂಡರಾದ ಕೆ.ಚಂದ್ರಾರೆಡ್ಡಿ, ಬಿ.ವಿ.ಮಹೇಶ್, ಎಸ್.ಬಿ.ಮುನಿವೆಂಕಟಪ್ಪ, ಪ್ರವೀಣ್ ಗೌಡ, ಬಾಲಾಜಿ, ಮಮತಮ್ಮ, ಸಾಮಾ ಬಾಬು, ಲಕ್ಷ್ಮಣಗೌಡ, ಮಂಜುನಾಥ್, ನವೀನ್, ಸೂರಿ ಇದ್ದರು.