ಚುನಾವಣೆ ಆಯೋಗದ ಮಾದರಿಯಲ್ಲಿ ತೋರಣಗಲ್ಲು ಸರಕಾರಿ ಪ್ರೌಢಶಾಲಾ ಸಂಸತ್ ಚುನಾವಣೆ,


ಸಂಜೆವಾಣಿ ವಾರ್ತೆ
 ಸಂಡೂರು :ಜು:24 ಸಂಡೂರು ತಾಲೂಕಿನ ತೋರಣಗಲ್ಲು ಸರ್ಕಾರಿ ಪ್ರೌಢಶಾಲೆಯಲ್ಲಿ  ದಿನಾಂಕ 22-07-2023 ರ ಶನಿವಾರ ಶಾಲೆಯ ಮತದಾರ ಸಾಕ್ಷರತಾ ಸಂಘದ ವತಿಯಿಂದ 2023-24ನೇ ಶೈಕ್ಷಣಿಕ ಸಾಲಿನಲ್ಲಿ ಶಾಲಾ ಸಂಸತ್ತು ಚುನಾವಣೆಯನ್ನು ಹಮ್ಮಿಕೊಳ್ಳಲಾಗಿತ್ತು.  ಚುನಾವಣಾ ಆಯೋಗದ ಮಾದರಿಯಲ್ಲಿಯೇ  ಶಾಲಾ ಸಂಸತ್ತಿನ 20 ಸದಸ್ಯರ ಆಯ್ಕೆಗಾಗಿ ಒಟ್ಟು 20 ಚುನಾವಣಾ ಕ್ಷೇತ್ರಗಳನ್ನಾಗಿ ಮಾಡಿ ಸುಮಾರು 30 ಟ್ಯಾಬ್ ಗಳಲ್ಲಿ ಬ್ಯಾಲೆಟ್ ಮಿಷನ್ ಮತ್ತು ಕಂಟ್ರೋಲ್ ಯೂನಿಟ್ ಗಳನ್ನು ಈ ಇನ್ಸ್ಟಾಲ್ ಮಾಡಿ ಮತಯಂತ್ರದ ಮೂಲಕ ಚುನಾವಣೆಯನ್ನು ನಡೆಸಲಾಯಿತು. ಈ ಚುನಾವಣೆಯಲ್ಲಿ 45 ವಿದ್ಯಾರ್ಥಿಗಳು ಅಭ್ಯರ್ಥಿಗಳಾಗಿ ಕಣಕ್ಕಿಳಿದಿದ್ದು 20 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಶಾಲೆಯ ಮುಖ್ಯ ಶಿಕ್ಷಕರು ಚುನಾವಣಾ ಆಯುಕ್ತರಾಗಿ, ತರಗತಿ ಶಿಕ್ಷಕರು ಚುನಾವಣಾ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಿದರು.  ಚುನಾವಣಾ ಕರ್ತವ್ಯದಲ್ಲಿ 55 ವಿದ್ಯಾರ್ಥಿಗಳು PRO, APRO ಪೋಲಿಂಗ್ ಆಫೀಸರ್ ಗಳಾಗಿ ಪೊಲೀಸ್ ಆಫೀಸರ್ ಗಳಾಗಿ ಕಾರ್ಯನಿರ್ವಹಿಸಿ  ಯಶಸ್ವಿಗೊಳಿಸಿದರು. ಎಲ್ಲಾ ವಿದ್ಯಾರ್ಥಿಗಳು ಚುನಾವಣೆಯ ಬಗ್ಗೆ ಈ ಮಾದರಿ ಚುನಾವಣೆ ಸಾಕ್ಷಿಯಾಯಿತು.
 ಈ ಸಂದರ್ಭದಲ್ಲಿ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ ಅನೀಸ್ ಫಾತಿಮಾ,ಸಹ ಶಿಕ್ಷಕರಾದ ಯರ್ರಿಸ್ವಾಮಿ, ಶಶಿಕಲಾ, ಸಾವಿತ್ರಿ, ಸ್ನೇಹಲತಾ, ಸರೋಜಾ,ಶಾಂತಲಾ, ಈರಣ್ಣ, ಜಬೀವುಲ್ಲಾ, ದೊಡ್ಡಬಸವ, ವಿಜಯ ಕುಮಾರ್,ಸುಹಾಸ್ ನಾಯಕ್, ವಿದ್ಯಾರ್ಥಿಗಳಾದ ಪ್ರಿಯಾ, ಚಯತ್ರ, ಸ್ನೇಹ, ಸಮೃತಾ, ಅರವಿಂದರೆಡ್ಡಿ, ಸಂಜಯ್, ಸುಶ್ಮಿತಾ, ಪೂರ್ಣಶ್ರೀ ಇತರೆ ಮಕ್ಕಳು ಹಾಜರಿದ್ದರು