ಚುನಾವಣೆ ಅಭಿಯಾನ


ಮುನವಳ್ಳಿ,ಏ.29: ಶಿಂದೋಗಿ ಗ್ರಾಮದ ಗ್ರಾಮ ಪಂಚಾಯತ್ ವತಿಯಿಂದ ಲೋಕಸಭಾ ಸಾರ್ವತ್ರಿಕ ಚುನಾವಣೆ ಅಂಗವಾಗಿ ನಮ್ಮ ನಡೆ ಮತಗಟ್ಟೆ ಕಡೆ ಅಭಿಯಾನದ ಮೂಲಕ ಮತದಾನದ ಜಾಗೃತಿ ಜಾತಾ ಕಾರ್ಯಕ್ರಮ ಜರುಗಿತು.
ಗ್ರಾಮದ ಪ್ರಮುಖ ಬೀದಿಗಳಲ್ಲಿ ಮನೆ ಮನೆಗೆ ಮತದಾನದ ಕರಪತ್ರಗಳನ್ನು ವಿತರಿಸಿ.
ಮತಗಟ್ಟೆ ಕೇಂದ್ರಗಳಲ್ಲಿ ಪಂಚಾಯತಿ ಅಭಿವೃದ್ದಿ ಅಧಿಕಾರಿ ರಮೇಶ ಬೆಡಸೂರ ಮತದಾನದ ದ್ವಜಾರೋಹಣ ಮಾಡಿದರು.
ಶ್ರೀಮತಿ ರಾಜೇಶ್ವರಿ ಬೋವಿ, ಮತಗಟ್ಟೆಯ ಬಿ.ಎಲ್.ಓ ಅಧಿಕಾರಿಗಳು, ಸ್ವಸಹಾಯ ಸಂಘದ ಸದಸ್ಯರು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಹಾಗೂ ಗ್ರಾಮ ಪಂಚಾಯತಿ ಸಿಬ್ಬಂದಿಗಳು ಇತರರು ಉಪಸ್ಥಿತರಿದ್ದರು