ಚುನಾವಣೆಯ ಮಹಾ ಸಮರಕ್ಕೆ ಕೋಲಾರ ಜಿಲ್ಲೆ ಸಜ್ಜು
ಕಾಂಗ್ರೆಸ್ ಪಕ್ಷದ ಪ್ರತಿಷ್ಠೆಯ ಕಣ

ಕೋಲಾರ, ಮಾ,೩೧- ೨೦೨೩ರ ವಿಧಾನ ಸಭಾ ಚುನಾವಣೆಯ ಮಹಾ ಸಮರಕ್ಕೆ ಕೋಲಾರ ಜಿಲ್ಲೆಯು ಸಜ್ಜಾಗುತ್ತಿದೆ. ಹಲವಾರು ದಿನಗಳಿಮದ ತೀವ್ರಕುತೂಹಲ ಕೆರಳಿಸಿತ್ತು.ರಾಜ್ಯದ ಮಾಜಿ ಮುಖ್ಯ ಮಂತ್ರಿ ಹಾಗೂ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ಅವರು ವರುಣಾ ಕ್ಷೇತ್ರದಲ್ಲಿ ಮತ್ತು ಕೋಲಾರ ವಿಧಾನ ಸಭಾ ಕ್ಷೇತ್ರಕ್ಕೂ ಸೇರಿದಂತೆ ಎರಡು ಕಡೆಯು ಸ್ವರ್ಧಿಸಲಿದ್ದಾರೆ.
ಸಿದ್ದರಾಮಯ್ಯ ಅವರು ಪ್ರಾರಂಭದಲ್ಲಿ ಕೋಲಾರದಿಂದಲೇ ಸ್ವರ್ಧಿಸಲು ನಿರ್ಧರಿಸಿ ಹಲವಾರು ಭಾರಿ ಭೇಟಿ ಬಹಿರಂಗ ಸಭೆಯಲ್ಲಿ ಕೋಲಾರದಿಂದಲೇ ಸ್ವರ್ಧಿಸುವುದಾಗಿ ಘೋಷಿಸಿದ್ದರು, ನಂತರದಲ್ಲಿ ಕೆಲವು ಖಾಸಗಿ ಏಜೆನ್ಸಿಗಳು ಮಾಡಿದ ಸರ್ವೆಯಿಂದಾಗಿ ತೀವ್ರಗೊಂದಲಕ್ಕೆ ಒಳಗಾಗಿದ್ದರೂ. ಈ ಕುರಿತು ಕಾಂಗ್ರೇಸ ಪಕ್ಷದ ಹೈಕಮಾಂಡ್ ವರುಣ ದಿಂದ ಸ್ವರ್ಧಿಸಲು ಸೂಚಿಸಿತ್ತು, ಚುನಾವಣೆಯಲ್ಲಿ ರಾಜ್ಯಾದಾದ್ಯಂತ ಸಿದ್ದರಾಮಯ್ಯ ಅವರು ಕಾಂಗ್ರೇಸ್ ಪರ ಪ್ರಚಾರದಲ್ಲಿ ತೊಡಗಿಸಿ ಕೊಳ್ಳ ಬೇಕಾಗಿರುವುದರಿಂದ ಸಿದ್ದರಾಮಯ್ಯ ಅವರು ಅವರು ಸ್ವರ್ಧಿಸುವ ಕ್ಷೇತ್ರದಲ್ಲಿ ಪ್ರಚಾರಕ್ಕೆ ಹೋಗದಿದ್ದರೂ ಸಹ ಸುರಕ್ಷಿತವಾಗಿರುವ ಕ್ಷೇತ್ರವನ್ನು ಆಯ್ಕೆ ಮಾಡಿ ಕೊಳ್ಳಲು ಸೂಚಿಸಿದ್ದು, ವರುಣಾ ಕ್ಷೇತ್ರದಲ್ಲಿ ಸ್ವರ್ಧಿಸಿದರೆ ಸಿದ್ದರಾಮಯ್ಯ ಅವರಿಗೆ ಶೇ ೧ ರಷ್ಟು ರಿಸ್ಕ್ ಇರುವುದಿಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತ ಪಡೆಸಿತ್ತು.
ಈ ವಿಷಯವು ಬಹಿರಂಗವಾಗುತ್ತಿದ್ದಂತೆ ಕಾಂಗ್ರೇಸ್ ಪಕ್ಷವು ಮೊದಲ ಪಟ್ಟಿ ಬಿಡುಗಡೆ ಮಾಡುವವರೆಗೂ ಸಿದ್ದರಾಮಯ್ಯ ಕೋಲಾರದಿಂದ ಸ್ವರ್ಧಿಸುವ ಕುರಿತು ವ್ಯಾಪಕವಾದ ಚರ್ಚೆಗಳು ರಾಜ್ಯ ಮಟ್ಟದಲ್ಲಿ ನಡೆಯಿತು, ವಿಪಕ್ಷಗಳು ಸಿದ್ದರಾಮಯ್ಯ ಅವರಿಗೆ ಕೋಲಾರದಲ್ಲಿ ಸ್ವರ್ಧಿಸಿದರೆ ಸೋಲನ್ನಾಪ್ಪುತ್ತಾರೆ. ಕೋಲಾರದಿಂದ ಪಲಾಯನಗೊಂಡಿದ್ದಾರೆ, ಕೋಲಾರದಲ್ಲೇ ಘೋಷಿಸಿ ಹಿಂಜರಿದಿದ್ದಾರೆ. ಅವರಿಗೆ ಬಿಜೆಪಿ ಅಭ್ಯರ್ತಿಯ ವಿರುದ್ದ ಸ್ವರ್ಧಿಸಲು ಧೆರ್ಯವಿಲ್ಲ ರಣ ಹೇಡಿಯಾಗಿದ್ದಾರೆ ಎಂಬ ಟೀಕೆಗಳು ವ್ಯಕ್ತವಾಯಿತು,
ಸಿದ್ದರಾಮಯ್ಯ ಅವರ ಲೆಕ್ಕಾಚಾರಗಳು ಜೆ.ಡಿ.ಎಸ್ ಹಾಗೂ ಬಿಜೆಪಿ ಪಕ್ಷಗಳು ದಿಕ್ಕು ತಪ್ಪುವಂತೆ ಮಾಡುವಲ್ಲಿ ಯಶಸ್ವಿಯಾದವು. ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರು ನಂಬಿದ್ದ ದಲಿತ ಸಮುದಾಯದ ಮತ್ತು ಅಲ್ಪಸಂಖ್ಯಾತರ ಮತಗಳು ಕಾಂಗ್ರೇಸ್ ಪಕ್ಷದಿಂದ ಶೇ ೫೦ಕ್ಕೂ ಹೆಚ್ಚು ವಿಭಜನೆಯಾಗಿ ಬೇರೆ ಪಕ್ಷಗಳ ಪಾಲಾಗುವುದೆಂಬ ಸಮೀಕ್ಷೆ ವರದಿಗಳು ಸ್ವರ್ಧೆಯಿಂದ ಹಿಂಜರಿಯುವಂತೆ ಮಾಡಿತ್ತು.
ನಂತರ ಕಾಂಗ್ರೇಸ್ ಪಕ್ಷದ ಮುಖಂಡರು ಸಿದ್ದರಾಮಯ್ಯ ಅವರ ಸ್ವರ್ಧೆಯನ್ನು ಪ್ರತಿಷ್ಠೆಯನ್ನಾಗಿ ಪರಿಗಣಿಸಿದ್ದು, ಸಿದ್ದರಾಮಯ್ಯ ಅವರ ಮೇಲೆ ಪ್ರಬಲವಾದ ಒತ್ತಡಗಳನ್ನು ಹೇರಿ ಸಿದ್ದರಾಮಯ್ಯ ಅವರ ಗೆಲುವಿನ ಹೊರೆಯನ್ನು ಘಟಬಂಧನ್ ನಾಯಕ ರಮೇಶ್ ಕುಮಾರ್, ಎಸ್.ಎನ್.ನಾರಾಯಣಸ್ವಾಮಿ, ನಂಜೇಗೌಡರು ಅವರು ಹೊತ್ತಿದ್ದರೂ, ಇವರು ಸಹ ಚುನಾವಣೆಯಲ್ಲಿ ಸ್ವರ್ಧಿಸಿರುವುದರಿಂದ ಸಿದ್ದರಾಮಯ್ಯ ಅವರ ಪರವಾಗಿ ಪೂರ್ಣವಾಗಿ ಚುನಾವಣಾ ಪ್ರಚಾರದಲ್ಲಿ ತೊಡಗಿಸಿ ಕೊಳ್ಳಲು ಕಾಲವಕಾಶ ಸಿಗುವುದು ವಿರಳ ಆಗಲಿದೆ. ಇದರ ಪೂರ್ಣ ಜವಾಬ್ದಾರಿಯನ್ನು ವಿಧಾನ ಪರಿಷತ್ ಸದಸ್ಯರಾದ ಎಂ.ಎಲ್.ಅನಿಲ್ ಕುಮಾರ್ ಮತ್ತು ನಸ್ಸೀರ್ ಅಹಮದ್ ಹೊತ್ತಿದ್ದಾರೆ.
ಅದರೆ ಪ್ರಸ್ತುತ ಚುನಾವಣಾ ಪ್ರಚಾರದಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ವರ್ತೂರು ಪ್ರಕಾಶ್, ಜೆ.ಡಿ.ಎಸ್ ಪಕ್ಷ ಸಿ.ಎಂ.ಆರ್. ಶ್ರೀನಾಥ್, ಮತ್ತು ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಸಿದ್ದರಾಮಯ್ಯ ಅವರ ಪರವಾಗಿ ಮುಖಂಡರು ಪ್ರಚಾರದಲ್ಲಿ ತೊಡಗಿಸಿ ಕೊಂಡಿದ್ದಾರೆ. ಬಿಜೆಪಿ ಪ್ರಥಮ, ಜೆ.ಡಿ.ಎಸ್. ದ್ವಿತೀಯ,ಹಾಗೂ ಕಾಂಗ್ರೇಸ್ ತೃತೀಯ ಸ್ಥಾನದಲ್ಲಿ ಕಂಡು ಬರುತ್ತಿದೆ. ಗ್ರಾಮೀಣ ಭಾಗದಲ್ಲಿ ಬಿಜೆಪಿ ಮತ್ತು ಜೆ.ಡಿ.ಎಸ್. ನಡುವೇ ನೇರ ಸ್ವರ್ಧೆ ಕಂಡು ಬಂದರೆ ನಗರದಲ್ಲಿ ಕಾಂಗ್ರೇಸ್ ಮತ್ತು ಜೆ.ಡಿ.ಎಸ್. ಪಕ್ಷದ ನಡುವೆ ಇದೆ ಎಂದು ಸಮೀಕ್ಷೆಗಳ ವರದಿಗಳಲ್ಲಿ ಕಂಡು ಬರುತ್ತಿದೆ.
ಕಾಂಗ್ರೇಸ್ ಪಕ್ಷದ ನಾಯಕರು ಮುಖ್ಯವಾಗಿ ಆಲ್ಪಸಂಖ್ಯಾತರ ಮತ್ತು ದಲಿತರ ಮತಗಳ ಮೇಲೆ ಅವಲಂಭಿತವಾಗಿದೆ. ದಿಕ್ಕು ತಪ್ಪಿರುವ ಮತಗಳನ್ನು ಕಾಂಗ್ರೇಸ್ ಪಕ್ಷವು ಮತ್ತೆ ತಮ್ಮತ್ತ ಸೆಳೆದಲ್ಲಿ ಮಾತ್ರ ಕಾಂಗ್ರೇಸ್ ಪಕ್ಷವು ಚುನಾವಣೆಯನ್ನು ಎದುರಿಸುವುದು ಸುಲಭಕಾರವಾಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ ಅದರೆ ಇದನ್ನು ಕಾಂಗ್ರೇಸ್ ಪಕ್ಷದ ಮುಖಂಡರು ಹೇಗೆ ನಿಭಾಯಿಸುತ್ತಾರೆ ಎಂಬುವುದು ಕಾಂಗ್ರೇಸ್ ಪಕ್ಷದಲ್ಲಿ ಸವಾಲ್ ಅಗಿ ಪರಿಣಾಮಿಸಿದೆ. ಕೆ.ಹೆಚ್. ಮುನಿಯಪ್ಪ ಅವರು ದೊಡ್ಡಬಳ್ಳಾಪುರದಲ್ಲಿ ಸ್ವರ್ಧಿಸುತ್ತಿರುವುದರಿಂದ ಅವರ ಬೆಂಬಲಿಗರ ಮತಗಳು ಸಿದ್ದರಾಮಯ್ಯ ಅವರಿಗೆ ಪರಿಪೂರ್ಣ ಸಿಗಲಿದೆಯೇ ಅಥಾವ ಚದುರಿ ಹೋಗಲಿದೆಯೋ ಕಾದು ನೋಡ ಬೇಕಾಗಿದೆ.