ಚುನಾವಣೆಯ ಭದ್ರತೆಯ ತರಬೇತಿ


ಸಂಜೆವಾಣಿ ವಾರ್ತೆ
ಸಿರುಗುಪ್ಪ, ಏ.01: ವಿಧಾನ ಸಭಾ ಚುನಾವಣೆ ಕುರಿತು ಎರಡು ದಿನಗಳ ತರಬೇತಿ ಕಾರ್ಯಾಗಾರ ಇಂದು ಮುಕ್ತಾಯ.
 ಸಿರುಗುಪ್ಪ, ತೆಕ್ಕಲಕೋಟೆ, ಕುರುಗೋಡು ಮೂರು ಗೃಹ ರಕ್ಷಕ ದಳದ ಘಟಕಗಳಿಂದ 156 ಗೃಹ ರಕ್ಷಕ ಸಿಬ್ಬಂದಿಗಳಿಗೆ ಚುನಾವಣೆಯ ಭದ್ರತೆಯ ಬೇಕಾದ ವಿವಿಧ ತರಬೇತಿಯನ್ನು ತೆಕ್ಕಲಕೋಟೆ ಪಟ್ಟಣದ ಟಿ.ಇ.ಎಸ್ ಶಾಲೆಯ ಮೈದಾನದಲ್ಲಿ ತರಭೇತಿಯನ್ನು ತುಮಕೂರು ಜಿಲ್ಲೆಯ ಸಹಾಯಕ ಬೋಧಕ ಕೆ.ಟಿ ಹನುಮಂತಯ್ಯ ನೀಡಿದರು.
 ಪಟ್ಟಣದ ಗ್ರಾಮ ಲೆಕ್ಕ ಅಧಿಕಾರಿ ಶಿವರಾಜ್, ತೆಕ್ಕಲಕೋಟೆ ಘಟಕ ವೆಂಕಟೇಶ, ಸಿರುಗುಪ್ಪ ಘಟಕ ಬಿ.ಆರ್ ತಿಮ್ಮಯ್ಯ, ಕುರುಗೋಡು ಘಟಕ ಲೋಕೇಶ್ ಬಿ. ಹಾಗೂ ಸಿಬ್ಬಂದಿಗಳು ಇದ್ದರು.

One attachment • Scanned by Gmail