ಚುನಾವಣೆಯ ಭದ್ರತೆಗಾಗಿ ಪೊಲೀಸರ ಪಥ ಸಂಚಲನ;

ಹರಿಹರ ಏ 7 : ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಿಗದಿಯಾಗಿದೆ. ವ್ಯವಸ್ಥಿತ ಹಾಗೂ ಶಾಂತಿಯುತ ಮತದಾನಕ್ಕಾಗಿ ಚುನಾವಣಾ ಆಯೋಗವು ಬಿಗಿ ಭದ್ರತೆಗಾಗಿ ಪ್ಯಾರಾ ಮಿಲಿಟರಿ ತುಕಡಿಗಳು, ಪೊಲೀಸರು, ಪೊಲೀಸರ ತಂಡ ನಗರದ ಪ್ರಮುಖ ಬೀದಿಗಳಲ್ಲಿ ಪಥ  ಸಂಚಲನ ನಡೆಯಿತು.ಚುನಾವಣೆಗೆ ರಾಜಕೀಯ ಪಕ್ಷಗಳು ತಯಾರಿಯಲ್ಲಿ ತೊಡಗಿದ್ದರೆ. ಪ್ರಜಾತಂತ್ರದ ಹಬ್ಬವನ್ನು ಸುಗಮ, ಶಾಂತಿಯುತವಾಗಿ ನಡೆಸಲು ಚುನಾವಣಾ ಆಯೋಗವು ಸಹ ಸಿದ್ದತೆ ಮಾಡಿಕೊಂಡಿದೆ. ಚುನಾವಣೆಯಲ್ಲಿ ಭದ್ರತೆಗಾಗಿ ಪ್ಯಾರಾ  ಮಿಲಿಟರಿ ತುಕಡಿಗಳು ಅಣೆಯಾಗಿವೆ.ನೂರಾರು ಭದ್ರತಾ ಸಿಬ್ಬಂದಿ ಸಶಸ್ತ್ರಗಳೊಂದಿಗೆ ಮಹಾತ್ಮ ಗಾಂಧಿ ಕ್ರೀಡಾಂಗಣ ಮೈದಾನದಿಂದ ಪ್ರಾರಂಭಗೊಂಡು ಶೋಭಾ ಟಾಕೀಸ್ ರಸ್ತೆ ಹೈ ಸ್ಕೂಲ್ ಬಡಾವಣೆ ಹಳ್ಳದಕೇರಿ ಹರಪನಹಳ್ಳಿ ಶಿವಮೊಗ್ಗ ಪಿಬಿ ರಸ್ತೆ ಸೇರಿದಂತೆ ನಗರದ ನಾನಾ ಬಡಾವಣೆಗಳಲ್ಲಿ ಪಥ  ಸಂಚಲನ  ಸಂಚರಿಸಿ ವಿಧಾನಸಭೆ ಸಾರ್ವತ್ರಿಕ ಚುನಾವಣೆಯು ಕಾನೂನು ಸುವ್ಯವಸ್ಥೆ ಕಾಪಾಡಲು ಚುನಾವಣೆ ಪ್ರಕ್ರಿಯೆಯು ನ್ಯಾಯ ಸಮ್ಮತ ಹಾಗೂ ಶಾಂತಿಯುತವಾಗಿ ನಡೆಯಲು ಜಿಲ್ಲಾ ಹಾಗೂ ಹರಿಹರ ಪೊಲೀಸ್ ಇಲಾಖೆಯೊಂದಿಗೆ ಪ್ರತಿಯೊಬ್ಬ ಮತದಾರರು ಜನಪ್ರತಿನಿಧಿಗಳು ಸಾರ್ವಜನಿಕರು ಸಹಕಾರ ಅಗತ್ಯ    ಜನರು ನಿರ್ಭೀತಿಯಿಂದ ಮತದಾನ ಮಾಡಿ ಎಂಬ ಸಂದೇಶ ಸಾರಿದರು.