ಚುನಾವಣೆಯಲ್ಲಿ ಮತದಾರರಿಗೆ ಆಮಿಷ ಸರಿಯಲ್ಲ

ಮುದ್ದೇಬಿಹಾಳ;ಡಿ.23: ದ್ವೇಷ ಪ್ರಚೋದನೆಯ ರಾಜಕಾರಣವನ್ನು ಯಾರು ಮಾಡದೇ ಆರೋಗ್ಯಕರ ಚುನಾವಣೆ ಎದುರಿಸಬೇಕು ಆದರೇ ಸಧ್ಯ ಶಾಸಕ ಎ ಎಸ್ ಪಾಟೀಲ(ನಡಹಳ್ಳಿ)ಯವರಿಂದ ತಾಲೂಕಿನೆಲ್ಲಡೆ ಹಣ ಹೆಂಡ ಹಂಚಿ ಮತದಾರರಿಗೆ ಆಮೀಷ ನೀಡಿ ಚುನಾವಣೆ ನಡೆಸುತ್ತಿರುವುದು ಇಡೀ ತಾಲೂಕಿನ ಜನರಿಗೆ ಗೊತ್ತಿದೆ. ಆದರೇ ಮಾಜಿ ಸಚೀವ ಸಿ ಎಸ್ ನಾಡಗೌಡ ಅವರು ಕಳೇದ 25 ವರ್ಷಗಳ ತಮ್ಮ ರಾಜಕೀಯ ಇತಿಹಾಸದಲ್ಲಿಯೇ ಯಾವತ್ತಿಗೂ ಇಂತಹ ಕೀಳುಮಟ್ಟದ ರಾಜಕಾರಣ ಮಾಡಿಲ್ಲ ಎಂದು ಎಪಿಎಂಸಿ ಸದಸ್ಯ ಹಾಗೂ ತಾಲೂಕಾ ಬ್ಲಾಕ್ ಕಾಂಗ್ರೇಸ್ ಕಾರ್ಯಾಧ್ಯಕ್ಷ ಗುರು ತಾರನಾಳ ಹೇಳಿದರು.

ತಾಲೂಕಿನ ಕೋಳೂರು ಗ್ರಾಮ ಪಂಚಾಯಿತಿ ಚುನಾವಣೆಗೆ ಸಂಬಂಧಿಸಿದಂತೆ ಸೋಮವಾರ ಸುದ್ದಿಗಾರರೋಂದಿಗೆ ಮಾತನಾಡಿದ ಅವರು ಕೋಳೂರ ಗ್ರಾಮದಲ್ಲಿ ಚುನಾವಣಾ ಪ್ರಚಾರಕ್ಕೆ ಆಗಮಿಸಿದ ಶಾಸಕ ಎ ಎಸ್ ಪಾಟೀಲ್ ನಡಹಳ್ಳಿ ಅವರ ಸಹೋದರ ಶಾಂತಗೌಡ ಪಾಟೀಲ್ ಅವರು ಭಾಷಣದಲ್ಲಿ ಕಳೇದ 25ವರ್ಷಗಳಿಂದ ತಾಲೂಕಿನಲ್ಲಿ ಯಾವ ಅಭಿವೃದ್ಧಿ ಕಾರ್ಯವನ್ನು ಈ ಹಿಂದಿನ ಶಾಸಕರು ಮನಸ್ಸು ಮಾಡಿಲ್ಲ ಎಂದು ಪ್ರಚೋದನೆ ಮಾತುಗಳನ್ನು ಹೇಳುವ ಮೂಲಕ ಜನರಲ್ಲಿ ತಪ್ಪು ದಾರಿ ತುಳಿಯುವಂತೆ ಮಾಡುತ್ತಿದ್ದಾರೆ.