ಚುನಾವಣೆಯಲ್ಲಿ ಪೊಲೀಸರು ಬ್ಯುಜಿ

ಅಕ್ರಮ ಮರಳು ಸಾಗಾಣಿಕೆ ಬಲು ಜೋರು
ಸಿಂಧನೂರು.ಡಿ.೨೨-ಇತ್ತ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಪೋಲಿಸರು ಬ್ಯುಜಿಯಾಗಿದ್ದರೆ ಅತ್ತ ಅಕ್ರಮ ಮರಳು ಸಾಗಣಿಕೆ ದಂದೆಕೋರರು ಅಕ್ರಮ ಮರಳು ಸಾಗಣಿಕೆಯಲ್ಲಿ ಫುಲ್ ಭಾಗಿಯಾಗಿದ್ದು ಕಂಡು ಬಂದಿದೆ.
ಇಂದು ಮೊದಲು ಹಂತದ ಗ್ರಾಮ ಪಂಚಾಯತ್ ಚುನಾವಣೆ ನಡೆಯಲಿದೆ ಚುನಾವಣೆಯ ಭದ್ರತೆಗಾಗಿ ತಾಲ್ಲೂಕಿನ ಪೊಲೀಸರು ಬೇರೆ ಕಡೆ ಹೋಗಿದ್ದಾರೆ. ಇದೆ ಚಾನ್ಸ ಎಂದು ಅಕ್ರಮ ದಂದೆಕೋರರು ಹಗಲು ರಾತ್ರಿ ಎನ್ನದೆ ರಾಜರೋಸವಾಗಿ ಅಕ್ರಮ ಮರಳು ಸಾಗಣಿಕೆಯಲ್ಲಿ ತೊಡಗಿದ್ದಾರೆ.
Pತಿಜ ಛಿoಠಿಚಿ ಮನ್ಸೂರ್‌ಪಾಷ ಮಹಿಬೂಬ ಬಂದೆನವಾಜ ಸೇರಿದಂತೆ ಇತರರು ಯಾರ ಅಂಜಿಕೆ ಇಲ್ಲದೆ ಹಗಲು ರಾತ್ರಿ ಅಕ್ರಮ ಮರಳು ಸಾಗಣಿಕೆಯಲ್ಲಿ ತೊಡಗಿದ್ದಾರೆ ಅಕ್ರಮ ಮರಳು ಸಾಗಣಿಕೆಯ ಟ್ರಾಕ್ಟರ್ ಹಾಗು ಲಾರಿಗಳ ಒಡಾಟಕೆ ಜನ ರಾತ್ರಿ ನಿದ್ದೆ ಇಲ್ಲದೆ ಜಾಗರಣೆ ಮಾಡುವ ಪರಿಸ್ಥಿತಿ ಒದಗಿ ಬಂದಿದೆ.
ಅಕ್ರಮ ಮರಳು ಸಾಗಣಿಕೆ ಟ್ರಾಕ್ಟರಗಳನ್ನು ಇಡಿದು ಅಕ್ರಮ ಮರಳು ಸಾಗಣಿಕೆಗೆ ಕಡಿವಾಣ ಹಾಕಿ ಎಂದು ಸಾರ್ವಜನಿಕರ ಪೊಲೀಸರಿಗೆ ಪೋನ್ ಮಾಡಿ ಮಾಹಿತಿ ನಿಡಿದರೆ. ಠಾಣೆಯಲ್ಲಿ ಪೊಲೀಸರಾರು ಇಲ್ಲ ಎಂದು ಸಬುಬ ಹೇಳುತ್ತಿದ್ದಾರೆ. ಎಂದು ಸಾರ್ವಜನಿಕರು ಪತ್ರಿಕೆಗೆ ತಿಳಿಸಿದರು.