ಚುನಾವಣೆಯಲ್ಲಿ ಪತ್ರಕರ್ತನಿಗೆ ಜಯ :ಸಂಘದಿಂದ ಅಭಿನಂದನೆ

ಜಗಳೂರು.ಜ.೧; :ತಾಲೂಕಿನ ಕೆಚ್ಚೇನಹಳ್ಳಿ ಗ್ರಾಮಪಂಚಾಯಿತಿಯ .ಚಿಕ್ಕಮ್ಮನಹಟ್ಟಿ ಗ್ರಾಮದಲ್ಲಿ ಪತ್ರಕರ್ತ ಮಂಜಣ್ಣ ಓ ಅವರು 
212 ಅಂತರದಿಂದ‌‌ ಜಯಗಳಿಸಿದ್ದು ತಾಲೂಕು ಪತ್ರಕರ್ತರ ಸಂಘದಿಂದ ಅಭಿನಂದನೆ ಸಲ್ಲಿಸಿದರು.ಈ ವೇಳೆ ಪತ್ರಕರ್ತರ ಸಂಘದ ತಾಲೂಕುಅಧ್ಯಕ್ಷ ಚಿದಾನಂದಪ್ಪ ಜಿ ಎಸ್ ಮಾತನಾಡಿಸಾಮಾಜಿಕ ಕಳಕಳಿ ಹೊಂದಿದ ಪತ್ರಕರ್ತರಿಗೆ ನ್ಯಾಯದೊರಕಿದೆ ಬದ್ದತೆಯಿಂದ ಕೆಲಸ ನಿರ್ವಹಿಸಲು ಸ್ಪೂರ್ತಿದಾಯಕವಾಗಿದ್ದು ಮತದಾರರ ನಿರೀಕ್ಷೆಗೆ ತಕ್ಕಂತೆ ಅಭಿವೃದ್ದಿಗೆ ಒತ್ತುಕೊಡಿ ಎಂದು ಸಲಹೆ ನೀಡಿದರು.ಸನ್ಮಾನ ಸ್ವೀಕರಿಸಿ ನೂತನ ಸದಸ್ಯ ಮಂಜಣ್ಣ ಓ ಮಾತನಾಡಿ,  ನನಗೆ ಉನ್ನತ ಅಧಿಕಾರಿಯಾಗುವ ಕನಸಿತ್ತು ಅನಿರೀಕ್ಷಿತವಾಗಿ ರಾಜಕೀಯ ಮೆಟ್ಟಿಲೇರಿದೆ. ನಾನು ಸತತ ಎರಡು ಬಾರಿ ಕೆಲವೇ ಮತಗಳಿಂದ ಸೋಲನುಭವಿಸಿ  ಪರಭಾವಗೊಂಡಿದ್ದೆ ಪುನಃ ಮತದಾರರು ಕೈಹಿಡಿದಿದ್ದಾರೆ ಗ್ರಾಮದ ಅಭಿವೃದ್ದಿಗೆ ಶ್ರಮಿಸುವೆ ಎಂದು ಅಭಿಪ್ರಾಯಿಸಿದರು.
ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳಾದ ಬಸವರಾಜ್ ಎಂ.ಸಿ ಲೊಕೇಶ್.ಎಂ ಐಹೊಳೆ ರಾಜಪ್ಪ ವ್ಯಾಸಗೊಂಡನಹಳ್ಳಿ ರವಿಕುಮಾರ್  ಮರೇನಹಳ್ಳಿ ಬಾಬು.ದನ್ಯಕುಮಾರ್. ಜಗದೀಶ್ ಮಾರುತಿ.ಮಾದಿಹಳ್ಳಿ ಕೆ.ಮಂಜಪ್ಪ ಮಾರಪ್ಪ ಮಾರುತಿ ರಕೀಬ್ ಸೇರಿದಂತೆ ಇದ್ದರು.