ಚುನಾವಣೆಯಲ್ಲಿ ಕುಕ್ಕರ್ ಹಂಚಿಕೆ; ದೂರು ದಾಖಲು

ಮುಳಬಾಗಿಲು.ಡಿ೨೮-ತಾಲ್ಲೂಕಿನ ತಾಯಲೂರು ಗ್ರಾಮದಲ್ಲಿ ಗ್ರಾ.ಪಂ. ಚುನಾವಣೆಗೆ ಕುಕ್ಕರ್ ಗಳನ್ನು ಹಂಚುತ್ತಿದ್ದ ಖಚಿತ ಮಾಹಿತಿ ಮೇರೆಗೆ ತಹಶೀಲ್ದಾರ್ ಕೆ.ಎನ್. ರಾಜಶೇಖರ್, ಉಪ ತಹಶೀಲ್ದಾರ್ ಕೆ.ಆರ್. ಮಂಜುನಾಥ್ ಮತ್ತು ಸಿಬ್ಬಂದಿ ದಾಳಿ ನಡೆಸಿ ೨ ಕಾಟನ್ ಬಾಕ್ಸ್‌ಗಳಲ್ಲಿ ಇದ್ದ ೪೮ ಕುಕ್ಕರ್ ಗಳನ್ನು ವಶ ಪಡಿಸಿಕೊಂಡು ಅಭ್ಯರ್ಥಿ ಗಳಾದ ಮುಸ್ತಾಕ್ ಅಹ್ಮದ್, ಫಯಾಜ್ ಪಾಷಾ, ಜಹೀರ್‌ಗೌರ್ ವಿರುದ್ದ ಗ್ರಾಮಾಂತರ ಠಾಣೆ ಪೋಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.