ಚುನಾವಣೆಯಲ್ಲಿ ಕಾಣದಾದ ಎಂಡಿಬಿ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಏ.27: ನಗರದಲ್ಲಿ ಕಾಂಗ್ರೆಸ್ ಕುಟುಂಬ ಎಂದೇ ಕರೆಯಲ್ಪಡುವ ಮುಂಡ್ಲೂರು ಮನೆತನದ ಮಾಜಿ ಶಾಸಕ ಎಂ.ದಿವಾಕರ ಬಾಬು, ಅವರ ಪುತ್ರ ಯುವ ಕಾಗ್ರೆಸ್ ನ ರಾಜ್ಯ ಕಾರ್ಯದರ್ಶಿ ಪ್ರಸಕ್ತ ಚುನಾವಣಾ ಕಾರ್ಯದಿಂದ ಅಂತರ ಕಾಯ್ದುಕೊಂಡಂತೆ ಇದೆ.
ನಗರದಲ್ಲಿ ಚುನಾವಣಾ ಕಾವು ದಿನೇ ದಿನೇ ಹೆಚ್ಚುತ್ತಿದೆ. ಸಭೆ, ಸಮಾರಂಭ, ಪ್ರಚಾರ ಭರ್ಜರಿಯಾಗಿ ನಡೆಯುತ್ತಿವೆ. ನಾಳೆ ಪಕ್ಷದ ನಾಯಕ ರಾಹುಲ್ ಅವರು ನಗರಕ್ಕೆ ಆಗಮಿಸುತ್ತಿದ್ದಾರೆ.
ಇಷ್ಟೆಲ್ಲ ಬೆಳವಣಿಗೆಗಳು ನಡೆಯುತ್ತಿವೆ. ಪಕ್ಷದ ಬಹುತೇಕ ಎಲ್ಲಾ ಮುಖಂಡರು ಈ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿರುವುದು ಕಂಡು ಬಂದರೂ, ಮಾಜಿ ಸಚಿವ ದಿವಾಕರ ಬಾಬು ಮತ್ತು ಅವರ ಪುತ್ರ ಹನುಮ‌ಕಿಶೋರ್ ಈವರಗೆ ಕಂಡು ಬಂದಿಲ್ಲ. ಅಷ್ಟೇ ಅಲ್ಲದೆ ಅವರ ಬೆಂಬಲಿಗರು ಕಾಣದೆ ಏನು ಮಾಡಬೇಕೆಂಬ ಗೊಂದಲದಲ್ಲಿ ಮುಳುಗಿದ್ದಾರೆ.
ನಾನು ಟಿಕೆಟ್ ಗೆ ಪ್ರಯತ್ನಿಸುತ್ತಿರುವೆ. ನನಗಾದರೂ ಬರಲಿ,  ಅಳಿಯ ಭರತ್ ಗಾದರೂ ಬರಲಿ ನಾನು ಆತನ ಬೆಂಬಲಕ್ಕೆ ನಿಂತು ಚುನಾವಣೆ ಎದುರಿಸುವ ಎಂದಿದ್ದರು ದಿವಾಕರ ಬಾಬು ಅವರು.
ಆದರೆ ಈ ವರಗೆ ಮಾತ್ರ ಅವರು ಚುನಾವಣಾ ಪ್ರಚಾರ, ಸಭೆಗಳಲ್ಲಿ ಕಾಣಸದೇ ಇರುವ ಬಗ್ಗೆ ಕೇಳಲು ಕರೆ ಮಾಡಿದರೆ. ಸಧ್ಯ ಮಾತನಾಡಲು ಆಗುತ್ತಿಲ್ಲ ಎಂಬ ಸಂದೇಶ ಕಳಿಸಿದ್ದಾರೆ.
ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ರಾಹುಲ್ ಜೊತೆ ಭಾರತ್ ಜೋಡೋ ಯಾತ್ರೆ ಮಾಡಿ ಗಮನ ಸೆಳೆದಿದ್ದ ಬಳ್ಳಾರಿ‌ ಜಿಲ್ಲೆಯ ಏಕೈಕ ಮುಖಂಡ ಹನುಮ ಕಿಶೋರ್ ಅವರನ್ನು ಕೇಳಿದರೆ ನನಗೆ ಕೊಪ್ಪಳ ಉಸ್ತುವಾರಿ ನೀಡಿದ್ದಾರೆ. ಜೊತೆಗೆ ಬೆಂಗಳೂರಿನಲ್ಲಿ ಬ್ಯಾಟರಾಯನಪುರ, ಶಿವಾಜಿನಗರ ಮೊದಲಾದ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿರುವೆ. ಹಾಗಾಗಿ ಬಳ್ಳಾರಿ ನಗರದಲ್ಲಿ ಕಾಣಿಸಿಕೊಂಡಿಲ್ಲ ಎಂದರು.
ಆದರೆ ವಾಸ್ತವದಲ್ಲಿ ಟಿಕೆಟ್ ಬಂದ ಮೇಲೆ ಕಾಂಗ್ರೆಸ್ ಅಭ್ಯರ್ಥಿ ಇವರನ್ನು ವಯಕ್ತಿಕವಾಗಿ ಅಲ್ಲಂ ಅವರ ಮನೆಗೆ ಹೋಗಿ ಆಹ್ವಾನಿಸಿ ದಂತೆ, ಆಹ್ವಾನಿಸದಿರುವುದೇ   ಚುನಾವಣೆಯಿಂದ ಅಂತರ ಕಾಯ್ದುಕೊಂಡಿದೆ ಎಂದು ಹೇಳಲಾಗುತ್ತಿದೆ.