ಚುನಾವಣೆಯನ್ನು ಪಾರದರ್ಶಕ, ಕಟ್ಟು ನಿಟ್ಟಿನಲ್ಲಿ ನಡೆಸಲು ಪ್ರಯತ್ನ


ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ. ಏ.13 ಕ್ಷೇತ್ರದಲ್ಲಿ ನಡೆಯುವ  ಚುನಾವಣೆಯಲ್ಲಿ ಅಕ್ರಮವನ್ನು ತಡೆಗಟ್ಟಲು ಸಿ  ವಿಜಲ್ ಆಪ್ ಬಳಸುವ ಮೂಲಕ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು ಎಂದು ಚುನಾವಣೆ ಅಧಿಕಾರಿ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ತೇಜ್  ಆನಂದ್ ರೆಡ್ಡಿ ತಿಳಿಸಿದರು.
 ಪಟ್ಟಣದ ತಾಲೂಕ ಕಚೇರಿ ಸಭಾಂಗಣದಲ್ಲಿ ಜರುಗಿದ ಪತ್ರಿಕಾಗೋಷ್ಠಿ ಉದ್ದೇಶಿಸಿ ಬುಧವಾರ ಮಾತನಾಡಿ ಚುನಾವಣೆಯ ನೋಟಿಫಿಕೇಶನ್ ಏ.13ರಂದು ಪ್ರಾರಂಭವಾಗಲಿದೆ ನಾಮಪತ್ರ ಸಲ್ಲಿಸುವ ಕೊನೆಯ ದಿನಾಂಕ ಏಪ್ರಿಲ್ 20 ಆಗಿರುತ್ತದೆ, ಏಪ್ರಿಲ್ 21ರಿಂದ ಪರಿಶೀಲನೆ 24ರಂದು ನಾಮಪತ್ರ ವಾಪಸ್ ಗೆ   ಅವಕಾಶವಿರುತ್ತದೆ. ಮತದಾನ ಮೇ 10ರಂದು ಫಲಿತಾಂಶ 13 ಆಗಿರುತ್ತದೆ. ಸಾರ್ವತ್ರಿಕ ರಜಾ ದಿನಗಳಲ್ಲಿ ನಾಮಪತ್ರ ಸಲ್ಲಿಸುವಲು ಅವಕಾಶವಿದೆ ಬೆಳಗ್ಗೆ 11 ರಿಂದ ಮಧ್ಯಾಹ್ನ 3:00 ವರೆಗೆ ನಾಮಪತ್ರ ಸಲ್ಲಿಸಲು ಸಮಯ ಇರುತ್ತದೆ.
 ಕ್ಷೇತ್ರದಲ್ಲಿ ಒಟ್ಟು ಮತದಾರರು 2,25,395 ಅದರಲ್ಲಿ ಪುರುಷ ಮತದಾರರು 1,12,518 ಮಹಿಳಾ ಮತದಾರರು 1,12,855 ಇತರೆ 22 ಮತದಾರರಿದ್ದಾರೆ. ಕ್ಷೇತ್ರದಲ್ಲಿ ನಾಲ್ಕು ಕಡೆ ಕಟುಲಿಟ್ಟಿನ ಚೆಕ್ ಪೋಸ್ಟ್ಗಳನ್ನು ನಿರ್ಮಿಸಲಾಗಿದೆ.
23 ಸೆಕ್ಟರ್ ಅಧಿಕಾರಿಗಳು ಐದು ಜನ ಮಾಸ್ಟರ್ ಟ್ರೈನರ್ ಸೇರಿದಂತೆ ಅನೇಕ ಅಧಿಕಾರಿಗಳು ಚುನಾವಣೆಯಲ್ಲಿ ಕಾರ್ಯನಿರ್ವಹಿಸುತ್ತಾರೆ. 80 ವರ್ಷದ ವೃದ್ಧರಿಗೆ ಹಾಗೂ ಅಂಗವಿಕಲರಿಗೆ ಮನೆಯಲ್ಲಿಯೇ ಮತದಾನ ಹಕ್ಕು ನೀಡಲಾಗಿದೆ. ಬಿಸಿಲು ಹೆಚ್ಚಾಗಿರುವುದರಿಂದ ಮತಗಟ್ಟೆಗಳಲ್ಲಿ ಕುಡಿಯುವ ನೀರು ಹಾಗೂ ನೆರಳನ್ನು ಕಲ್ಪಿಸಲಾಗುವುದು ಎಂದರು.
ಸಹಾಯಕ ಚುನಾವಣೆ ಅಧಿಕಾರಿ ತಹಶೀಲ್ದಾರಾದ ಚಂದ್ರಶೇಖರ್ ಶಂಬಣ್ಣ ಗಾಳಿ ಮಾತನಾಡಿ ಕ್ಷೇತ್ರದಲ್ಲಿ ಈಗಾಗಲೇ ಮತದಾನದ ಜಾಗೃತಿ ಮೂಡಿಸಲಾಗಿದೆ ಬೈಕ್ ರಾಲಿ ಅಂಜನ ಮೆರವಣಿಗೆ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಮತದಾರರನ್ನು ಜಾಗೃತೆ ಗೊಳಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಎಂಸಿಸಿ ನೋಡಲ್ ಅಧಿಕಾರಿ ತಾ ಪಂ ಇ ಒ ಜಿ.ಪರಮೇಶ್ವರಪ್ಪ, ಟಿವಿ ನೋಡಲ್ ಅಧಿಕಾರಿ ಕಿರಣ್ ಕುಮಾರ್ ಇವಿಎಂ ನೋಡಲ್ ಅಧಿಕಾರಿ ಶಶಿಕುಮಾರ್ ಹಾಗೂ ಇತರ ಸಿಬ್ಬಂದಿಗಳು ಇದ್ದರು