ಚುನಾವಣೆನಿಮಿತ್ತ ಮ.ಮ.ಹಳ್ಳಿಯಲ್ಲಿ ಸಿಆರ್‌ಪಿಎಫ್ ಯೋಧರ ಪಥಸಂಚಲನ


ಸಂಜೆವಾಣಿ ವಾರ್ತೆ,
ಮರಿಯಮ್ಮನಹಳ್ಳಿ, ಏ.23: ವಿಧಾನ ಸಭೆ ಚುನಾವಣೆ ಹಿನ್ನೆಲೆಯಲ್ಲಿ, ಮರಿಯಮ್ಮನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಪ್ರಮುಖ ರಸ್ತೆಗಳಲ್ಲಿ ಪೊಲೀಸರು ಮತ್ತು ಸಿಆರ್‌ ಪಿಎಫ್ ಯೋಧರು ಶನಿವಾರ ಪಥಸಂಚಲನ ನಡೆಸಿದರು.
ಚುನಾವಣೆ ಸಂದರ್ಭದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡುವಂತೆ ಮತ್ತು ಧೈರ್ಯವಾಗಿ ಬಂದು ಮತ ಚಲಾಯಿಸುವಂತೆ ಸಾರ್ವಜನಿಕರಿಗೆ ಸಂದೇಶ  ರವಾನಿಸಿದರು.
ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಮುಂಭಾಗದಿಂದ ಆರಂಭವಾದ ಪಥಸಂಚಲನವು ಮುಖ್ಯ ಬೀದಿಯ ಮೂಲಕ, ನಾಣಿಕೆರೆ ವೃತ್ತದ ಮಾರ್ಗವಾಗಿ ಪಟ್ಟಣ ಪೊಲೀಸ್ ಠಾಣೆವರೆಗೆ ಪಥಸಂಚಲನ ಸಾಗಿತು.
ಪಥಸಂಚಲನದಲ್ಲಿ ಸಿಆರ್‌ಪಿಎಫ್‌ನ ಒಬ್ಬ ಕಮ್ಯಾಂಡೋ, 75 ಯೋಧರು,  ಪೊಲೀಸ್ ಇಲಾಖೆಯ ಒಬ್ಬರು ಸಿಪಿಐ, 4 ಪಿಎಸ್ಐಗಳು ಹಾಗೂ 25 ಜನ ಪೊಲೀಸ್ ಸಿಬ್ಬಂದಿ, ಪ.ಪಂ.ನ ಮುಖ್ಯಾಧಿಕಾರಿ, ಮುಖ್ಯ ಅಭಿಯಂತರ ಸೇರಿದಂತೆ ಇತರೆ ಸಿಬ್ಬಂದಿಗಳು ಭಾಗವಹಿಸಿದ್ದರು.
ಪಥಸಂಚಲನದ ಸಾರಥ್ಯವಹಿಸಿದ್ದ ಹ.ಬೊ.ಹಳ್ಳಿ ಸಿಪಿಐ ಮಂಜಣ್ಣರ ಜೊತೆ ಪಟ್ಟಣದ ಪಿಎಸ್‌ಐ ಹನುಮಂತಪ್ಪ, ಅಪರಾಧ ವಿಭಾಗದ ಪಿಎಸ್‌ಐ ಪಕೀರಮ್ಮ, ತಂಬ್ರಹಳ್ಳಿ ಪಿಎಸ್ಐ ನಾರಾಯಣ,  ಹಬೊಹಳ್ಳಿ ಪಿಎಸ್ಐ ಗಂಗಪ್ಪ ಬುರ್ಲಿ ಸೇರಿದಂತೆ ಇತರೆ ಸಿಬ್ಬಂದಿಗಳು ಉಪಸ್ಥಿತರಿದ್ದರು.