ಚುನಾವಣೆಗೆ ಸ್ವಾಭಿಮಾನಿ ಅಭ್ಯರ್ಥಿಗಳು ಕಣಕ್ಕೆ

ಕೆಆರ್ ಪುರ,ಮಾ.೧೬- ಲೋಕಸಭಾ ಚುನಾವಣೆಗೆ ದಿನಗಣನೆ ಶುರುವಾಗಿದ್ದು ರಾಷ್ಟ್ರೀಯ ಪಕ್ಷಗಳಿಂದ ಟಿಕಿಟ್ ದೊರೆಯದ ಹಿನ್ನೆಲೆಯಲ್ಲಿ ಹಲವು ಕ್ಷೇತ್ರಗಳಲ್ಲಿ ಬಂಡಾಯದ ಬಿಸಿ ಹೆಚ್ಚಿದ್ದು,ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಸ್ವಾಭಿಮಾನಿ ಬಣ ಕಣಕ್ಕೆ ಇಳಿದಿದೆ.
ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಸ್ವಾಭಿಮಾನಿ ಬಣದ ಕೇಂದ್ರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಮಹದೇವಪುರ ಕ್ಷೇತ್ರದ ವರ್ತೂರು ನಿವಾಸಿ ಕುಪ್ಪಿ ಮಂಜುನಾಥ ಸ್ವರ್ಧಿಸುವುದಾಗಿ ಘೋಷಿಸಿದ್ದಾರೆ.
ವರ್ತೂರಿನಲ್ಲಿ ಅನೇಕ ವರ್ಷಗಳಿಂದ ಬಿಜೆಪಿ ಪಕ್ಷದ ಪರ ನಿಂತು ಜನಪರ ಕಾರ್ಯಗಳನ್ನು ಮಾಡಿರುವ ಮಂಜುನಾಥ್ ,ಈ ಭಾರಿ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರಕ್ಕೆ ಸ್ವರ್ಧೆ ಮಾಡುತ್ತಿದ್ದೆನೆ ಕ್ಷೇತ್ರದ ಸಮಗ್ರ ಅಭಿವೃದ್ಧಿ ನನ್ನ ಗುರಿ ಎಂದು ನುಡಿದರು.
ಬೆಂಗಳೂರಿನ ಕೆಲ ಸರ್ಕಾರಿ ಸ್ವತ್ತು , ಅಧಿಕಾರಗಳ ಶಾಮೀಲಿನಿಂದ ಒತ್ತುವರಿಯಾಗಿದೆ, ಈ ಬಗ್ಗೆ ಅಧಿಕಾರಿಗಳು ಜನಪ್ರತಿನಿಧಿಗಳು ಗಮನಹರಿಸಬೇಕಿದೆ ಈ ನಿಟ್ಟಿನಲ್ಲಿ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಮಹದೇವಪುರ , ಶಾಂತಿನಗರ . ಸರ್ವಜ್ಞ ನಗರ ರಾರಾಜಿನಗರ ಸೇರಿದಂತೆ ಕೆಲ ಕ್ಷೇತ್ರಗಳಲ್ಲಿ ಮೂಲಭೂತ ಸಮಸ್ಯೆಗಳಿದ್ದು,
ಮುಖ್ಯವಾಗಿ ಮಹದೇವಪುರ ಕ್ಷೇತ್ರದಲ್ಲಿ ಕೆರೆಗಳ ಅಭಿವೃದ್ಧಿಯಾಗಿಲ್ಲ ಇದರ ಬಗ್ಗೆ ಗಮನಹರಿಸುವುದಾಗಿ ಹೇಳಿದರು.
ಜನರು ಆಶೀರ್ವಾದಿಸಿದರೆ ರಾಜಕಾಲುವೆಗಳು , ಬಸ್ ನಿಲ್ದಾಣ ಯುವಕರಿಗೆ ಕ್ರೀಡಾಂಗಣ, ಭ್ರಷ್ಟಾಚಾರ ಮುಕ್ತ ಸರ್ಕಾರಿ ಸೇವೆಗೆ ಒತ್ತು ನೀಡುವುದಾಗಿ ಭರವಸೆ ನೀಡಿದರು.
ಮುಖಂಡರಾದ ಎಂ. ವೇಣುಗೋಪಾಲ್, ಎಚ್.ಸುಬ್ಬಣ, ರವಿಶಂಕರ್, ವಿಜಯಕುಮಾರ್, ಜೆ.ಶ್ರೀನಿವಾಸ್, ಬಸವರಾಜು, ಕೆ. ತಿಮ್ಮರಾಜು, ಸೂಚಂದ್ರಶೇಖರ್ ಅಚಾರಿ, ವಿ.ಎಸ್. ಗೋಪಾಲ್ ರಾವ್ , ವರಪುರಿ ನಾರಾಯಣಸ್ವಾಮಿ, ಮೊಹಮ್ಮದ್ ಪೀರ್, ಮುಂತಾದವರು ಉಪಸ್ಥಿತರಿದ್ದರು.