ಚುನಾವಣೆಗೆ ಸಿಬ್ಬಂದಿಗಳ ನಿಯೋಜನೆ

ಲಕ್ಷ್ಮೇಶ್ವರ ಡಿ 21 : ನಾಳೆ ನಡೆಯಲಿರುವ ತಾಲೂಕಿನ 13 ಗ್ರಾಮ ಪಂಚಾಯತಿಗಳ ಚುನಾವಣೆಗೆ ನಿಯೋಜನೆಗೊಂಡಿರುವ ಸಿಬ್ಬಂದಿಗಳು ಮುನ್ನಾ ದಿನವಾದ ಇಂದು ಚುನಾವಣಾ ಸಾಮಾಗ್ರಿಗಳನ್ನು ಕೊಂಡೊಯ್ಯಲು ಪುರಸಭೆ ಕಲಾ ಮಹಾವಿದ್ಯಾಲಯದಲ್ಲಿ ನಿಯೋಜನೆಗೊಂಡ ಸಿಬ್ಬಂದಿಗಳು ಸಾಮಾಗ್ರಿಗಳನ್ನು ಕೊಂಡೊಯ್ದರು.
13 ಗ್ರಾಮ ಪಂಚಾಯತ ವ್ಯಾಪ್ತಿಯ 81 ಮತಗಟ್ಟೆಗಳಿಗೆ 360 ಚುನಾವಣಾ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.
ಕರ್ತವ್ಯಕ್ಕೆ ಹಾಜರಾಗಿರುವ ಎಲ್ಲಾ ಸಿಬ್ಬಂದಿಗಳಿಗೆ ಕೋವಿಡ್ ಮಾರ್ಗಸೂಚಿ ಅನ್ವಯ ಕೋವಿಡ್ ತಪಾಸಣೆ ಮಾಡಲಾಗಿದೆ.
ನಿಯೋಜನೆಗೊಂಡಿರುವ ಎಲ್ಲಾ ಸಿಬ್ಬಂದಿ ಪೆÇಲೀಸರು, ಹೋಂಗಾರ್ಡಗಳನ್ನು ಅವರವರ ಮತಗಟ್ಟೆ ಕೇಂದ್ರಗಳಿಗೆ ತಲುಪಿಸಲು ಬಸ್ಸಿನ ವ್ಯವಸ್ಥೆ ಕೂಡಾ ಮಾಡಲಾಗಿದೆ ಎಂದು ತಾಲೂಕು ಚುನಾವಣಾ ಅಧಿಕಾರಿಗಳಾದ ತಹಶಿಲ್ದಾರ ಭ್ರಮರಾಂಭ ಗುಬ್ವಿಶೆಟ್ಟಿ, ಉಪತಶೀಲ್ದಾರ ಎಂ.ಜಿ. ದಾಸಪ್ಪನವರ ತಿಳಿಸಿದ್ದಾರೆ.