
ಹುಬ್ಬಳ್ಳಿ,ಏ.1: ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನಸಭಾ ಮತಕ್ಷೇತ್ರದಲ್ಲಿ ವಿಧಾನಸಭಾ ಚುನಾವಣೆ -2023 ಕ್ಕೆ ಸಕಲ ರೀತಿಯ ಸಿದ್ಧತೆ ಮಾಡಿಕೊಂಡಿದ್ದು, ಒಟ್ಟು 211 ಮತಗಟ್ಟೆಗಳಲ್ಲಿ 2,07,577 ಮತದಾರರಿದ್ದಾರೆಂದು ಪೂರ್ವ ಕ್ಷೇತ್ರದ ಚುನಾವಣೆ ಅಧಿಕಾರಿ ವಿನೋದ ಹೆಗ್ಗಳಗಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕ್ಷೇತ್ರದಲ್ಲಿ 1,03,295 ಪುರುಷರು, 1,04,268 ಮಹಿಳೆಯರು, 14 ಇತರೆ ಮತದಾರರು ನೊಂದಣಿಯಾಗಿದ್ದಾರೆ. ಈ ಬಾರಿ 80 ವರ್ಷ ಮಲ್ಪಟ್ಟವರಿಗೆ ಮನೆಯಿಂದಲೇ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದ್ದು, ಪೂರ್ವ ಕ್ಷೇತ್ರದಲ್ಲಿ 4080 ಮತದಾರರಿದ್ದಾರೆ. ವಿಕಲಚೇತನರು 1621 ಹಾಗೂ ಸರ್ಕಾರಿ ಸೇವೆಯಲ್ಲಿರುವ 16 ಮತದಾರರು ಇದ್ದಾರೆ ಎಂದರು.
ಒಟ್ಟು 211 ಮತಗಟ್ಟೆಗಳ ಪೈಕಿ, ಇದರಲ್ಲಿ 30 ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದೆ. ಚುನಾವಣೆ ಅಕ್ರಮಗಳನ್ನು ತಡೆಗಟ್ಟಲು ಗಬ್ಬೂರು, ಕಾರವಾರ ರಸ್ತೆ, ಸೋನಿಯಾಗಾಂಧಿ ನಗರದಲ್ಲಿ ಚೆಕ್ ಪೆÇೀಸ್ಟ್ ನಿರ್ಮಾಣ ಮಾಡಲಾಗಿದೆ. 3 ಪ್ಲೈಯಿಂಗ್ ಸ್ಕ್ತಾಡ್ ತಂಡ ಕಾರ್ಯನಿರ್ವಹಿಸಲಿದೆ. 2 ವಿಡಿಯೋ ಚಿತ್ರೀಕರಣ ತಂಡ ಮಾಡಲಾಗಿದೆ. ಒಂದು ವಿವಿಟಿ, ಅಕೌಂಟಿಂಗ್, ಲೆಕ್ಕ ಪತ್ರ ಪರಿಶೀಲನೆಗೆ ಹಾಗೂ ಎಮ್.ಸಿ.ಸಿ ನೋಡಲ್ ಅಧಿಕಾರಿ ತಲಾ ಒಂದು ತಂಡ ಮಾಡಲಾಗಿದೆ. ಇದರೊಂದಿಗೆ 18 ಸೆಕ್ಟರ್ ಆಫೀಸರ್ ಗಳನ್ನು ನೇಮಕ ಮಾಡಲಾಗಿದೆ. ಒಬ್ಬರಿಗೆ 14 ಮತಗಟ್ಟೆಗಳ ಮೇಲ್ವಿಚಾರಣೆಗೆ ನೀಡಲಾಗಿದೆ ಎಂದು ತಿಳಿಸಿದರು.
80 ವರ್ಷಕ್ಕಿಂತ ಮೇಲ್ಪಟ್ಟ 4080 ಮತದಾರರ ಪೈಕಿ ಎಲ್ಲರಿಗೂ 12 ಡಿ ಪಾರಂ ನೀಡಲಾಗುವುದು, ಯಾರು ಮನೆಯಿಂದಲೇ ಮತದಾನ ಮಾಡಲು ಇಚ್ಚೆಯುಳ್ಳವರಿಗೆ ಅಧಿಕಾರಿಗಳ ತಂಡ ಪೆÇೀಸ್ಟಲ್ ಮೂಲಕ ಗೌಪ್ಯಮತದಾನ ಮಾಡಿಸುವರು. ಮದುವೆ, ಜಾತ್ರೆ, ರ್ಯಾಲಿ ಸೇರಿದಂತೆ ಇನ್ನಿತರ ಬೃಹತ್ ಕಾರ್ಯಕ್ರಮಗಳಿಗೆ ಅನುಮತಿ ಕಡ್ಡಾಯವಾಗಿದೆ. ಇದಕ್ಕಾಗಿ ವಿಧಾನಸಭಾವಾರು ಏಕಗವಾಕ್ಷಿ ವ್ಯವಸ್ಥೆ ಜಾರಿ ಮಾಡಿ, ಸುವಿದಾ ಪೆÇೀರ್ಟಲ್ ನಲ್ಲಿ ಸಾರ್ವಜನಿಕರು ಅರ್ಜಿ ಸಲ್ಲಿಸಿ ಅನುಮತಿ ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 0836-2358035 ಗೆ ಸಂಪರ್ಕಿಸಬಹುದು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಹುಬ್ಬಳ್ಳಿ ನಗರ ತಹಶಿಲ್ದಾರ ಹಾಗೂ ಪೂರ್ವ ಸಹಾಯಕ ಚುನಾವಣೆ ಅಧಿಕಾರಿ ಕಲಗೌಡ ಪಾಟೀಲ್ ಇದ್ದರು.