ಚುನಾವಣೆಗೆ ಮುನ್ನ ಸಾಮಾನ್ಯ ಸಭೆ ಕರೆಯಲುಕುರುಬರ ಸಂಘದ ಮುಖಂಡರ ಮನವಿ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಸೆ.27:  ಜಿಲ್ಲಾ ಕುರುಬರ ಸಂಘದ ಆಡಳಿತ ಮಂಡಳಿ ನಿರ್ದೇಶಕರ ಚುನಾವಣಾ ಸಂಬಂಧ ಚುನಾವಣೆ ನಡೆಸುವ ಮುನ್ನ ಸಂಘದ ಅಜೀವ ಸದಸ್ಯರ ಸಾಮಾನ್ಯ ಸಭೆಯನ್ನು ಕರೆಯಬೇಕೆಂದು ಸಂಘದ ಮಾಜಿ ಖಜಾಂಚಿ ಅಲ್ಲಿಪುರ ಕೆ.ಮೋಹನ್ ಆಡಳಿತಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.
ಕಳೆದ 4-5 ತಿಂಗಳುಗಳ ಹಿಂದೆ  ಸಂಘಕ್ಕೆ ನಿಮ್ಮನ್ನು ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಿದೆ.  5 ತಿಂಗಳ ಒಳಗಡೆ ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆ ಮಾಡಬೇಕಿದೆ.
ಬರುವ ಅ 15 ರಂದು ಚುನಾವಣೆ ನಡೆಸುವುದಕ್ಕಾಗಿ ತಾವು ತಯಾರಿ ಮಾಡಿಕೊಂಡಿರುವುದಾಗಿ ತಿಳಿದು ಬಂದಿದ್ದು,  ಸಂಘಕ್ಕೆ ಚುನಾವಣೆಯನ್ನು ಘೋಷಿಸುವ ಮೊದಲು  ಸಂಘದ ಅಜೀವ ಸದಸ್ಯರ ಸಾಮಾನ್ಯ ಸಭೆಯನ್ನು ಕರೆಯಬೇಕು ಇಲ್ಲದಿದ್ದರೆ.  ಕರ್ನಾಟಕ ಸಂಘಗಳ ನೋಂದಣಿ ಅಧಿನಿಯಮ 1960 ರ ಕಾಯ್ದೆ ಕಲಂಗಳನ್ನು ಉಲ್ಲಂಘನೆ ಮಾಡಿದಂತಾಗಲಿದೆ.
 ಸಂಘದ ಸಾಮಾನ್ಯ ಸಭೆಯಲ್ಲಿ ಸರ್ವ ಸದಸ್ಯರ ಅನುಮೋದನೆಯನ್ನು ತೆಗೆದುಕೊಂಡು ಚುನಾವಣೆಯನ್ನು ಘೋಷಿಸಲು ಮನವಿ. ತಾವುಗಳು ಹಾಗೇನಾದರೂ ಸಾಮಾನ್ಯ ಸಭೆಯನ್ನು ಕರೆಯದೆ ಚುನಾವಣೆಯನ್ನು ನಡೆಸಲು ಮುಂದಾದರೆ ನಿಯಮಗಳ ಉಲ್ಕಂಘನೆಗೆ  ತಮ್ಮನ್ನು ಜವಾಬ್ದಾರರನ್ನಾಗಿ ಮಾಡಲಾಗುವುದೆಂದು ಹೇಳಿದ್ದಾರೆ‌