
ವಿಜಯಪುರ:ಎ.26: ಚುನಾವಣೆ ಕರ್ತವ್ಯಕ್ಕೆ ನಿಯೋಜಿತ ಸಿಬ್ಬಂದಿಗಳಿಗೆ ಅಂಚೆ ಮತ ಪತ್ರದ ಮೂಲಕ ಮತದಾನ ಮಾಡಲು ಜಿಲ್ಲೆಯ 8 ವಿಧಾನಸಭಾ ಕ್ಷೇತ್ರವಾರು ಮತದಾನ ಸೌಲಭ್ಯ ಕೇಂದ್ರಗಳನ್ನು ತೆರೆಯಲಾಗಿದ್ದು, ಆಯಾ ವಿಧಾನಸಭಾ ಮತಕ್ಷೇತ್ರದ ಸಿಬ್ಬಂದಿಗಳು ಕೇಂದ್ರಗಳಿಗೆ ಖುದ್ದಾಗಿ ಹಾಜರಾಗಿ ಅಂಚೆ ಮತಪತ್ರ ಪಡೆದುಕೊಂಡು ಸ್ಥಳದಲ್ಲಿಯೇ ಮತ ಚಲಾವಣೆ ಮಾಡಲು ಅವಕಾಶ ಕಲ್ಪಿಸಲಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಈ ಕೇಂದ್ರಗಳಿಗೆ ನೊಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳಾದ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಅವರು ತಿಳಿಸಿದ್ದಾರೆ.
ಚುನಾವಣೆಗೆ ನಿಯೋಜಿತ ಸಿಬ್ಬಂದಿಗಳಿಗೆ ದಿನಾಂಕ : 02-05-2023 ರಂದು ಬೆಳಿಗ್ಗೆ 8 ಗಂಟೆಯಿಂದ ಸಂಜೆ 6 ಗಂಟೆವರೆಗೆ ತರಬೇತಿ ಕೇಂದ್ರಗಳಲ್ಲಿ ಅಂಚೆ ಮತ ಪತ್ರದ ಮೂಲಕ ಮತದಾನ ಮಾಡಲು ಮತದಾನ ಸೌಲಭ್ಯಕೇಂದ್ರಗಳಲ್ಲಿ ಮತದಾನಕ್ಕೆ ಅವಕಾಶ ಕಲ್ಪಿಸಿದ್ದು, ಅಂಚೆ ಮತದಾನಕ್ಕೆ ಅರ್ಜಿ ನಮೂನೆ-12ರಲ್ಲಿ ಚುನಾವಣೆ ಮಾಹಿತಿಯನ್ನು ಭರ್ತಿ ಮಾಡಿ ಅರ್ಜಿಗಳನ್ನು ಮರಳಿ ಪಡೆದು ಕರ್ನಾಟಕ ರಾಜ್ಯದೊಳಗಿನ ಬೇರೆ ವಿಧಾನಸಭಾ ಮತಕ್ಷೇತ್ರಗಳಿಗೆ ಸಂಬಂಧಪಟ್ಟ ನಮೂನೆ-12ರ ಅರ್ಜಿಗಳನ್ನು ಆಯಾ ವಿಧಾನಸಭಾ ಮತಕ್ಷೇತ್ರದ ಚುನಾವಣಾಧಿಕಾರಿಗಳಿಗೆ ಅಂಚೆ ಮತಪತ್ರ ನೀಡುವ ಸಲುವಾಗಿ ಅರ್ಜಿಗಳನ್ನು ರವಾನಿಸಲಾಗಿದೆ.
ಜಿಲ್ಲೆಯ 26-ಮುದ್ದೇಬಿಹಾಳ ಮತಕ್ಷೇತ್ರಕ್ಕೆ ಸಂಬಂಧಿಸಿದಂತೆ ಮುದ್ದೇಬಿಹಾಳದ ಎಂ.ಜಿ.ವ್ಹಿ.ಸಿ. ಕಾಲೇಜ್‍ನಲ್ಲಿ ಮತದಾನ ಸೌಲಭ್ಯ ಕೇಂದ್ರ ತೆರೆಯಲಾಗಿದ್ದು, ನೋಡಲ್ ಅಧಿಕಾರಿಗಳಾಗಿ ಜಿ.ಎನ್.ಕಟ್ಟಿ ಮೊ: 9438635181 ಇವರನ್ನು ನೇಮಕ ಮಾಡಲಾಗಿದೆ.
27-ದೇವರಹಿಪ್ಪರಗಿ ಮತಕ್ಷೇತ್ರಕ್ಕೆ ಸಂಬಂಧಿಸಿದಂತೆ ದೇವರಹಿಪ್ಪರಗಿಯ ಶ್ರೀ ಸಿದ್ದೇಶ್ವರ ಸ್ವಾಮೀಜಿ ಇಂಗ್ಲೀಷ್ ಮಿಡಿಯಂ ಹೈಸ್ಕೂಲ್‍ನಲ್ಲಿ ಮತದಾನ ಸೌಲಭ್ಯ ಕೇಂದ್ರ ತೆರೆಯಲಾಗಿದ್ದು, ನೋಡಲ್ ಅಧಿಕಾರಿಗಳಾಗಿ ಶ್ರೀನಿವಾಸ ಪವಾರ ಮೊ: 9731485402 ಇವರನ್ನು ನೇಮಕ ಮಾಡಲಾಗಿದೆ.
28-ಬಸವನಬಾಗೇವಾಡಿ ಮತಕ್ಷೇತ್ರಕ್ಕೆ ಸಂಬಂಧಿಸಿದಂತೆ ಬಸವನಬಾಗೇವಾಡಿಯ ಶ್ರೀ ಬಸವೇಶ್ವರ ಸರಕಾರಿ ಪದವಿ ಪೂರ್ವ ಕಾಲೇಜ್‍ನಲ್ಲಿ ಮತದಾನ ಸೌಲಭ್ಯ ಕೇಂದ್ರ ತೆರೆಯಲಾಗಿದ್ದು, ನೋಡಲ್ ಅಧಿಕಾರಿಗಳಾಗಿ ಜಿ.ಎಸ್.ನಾಯಕ ಮೊ: 9319540231 ಇವರನ್ನು ನೇಮಕ ಮಾಡಲಾಗಿದೆ.
29-ಬಬಲೇಶ್ವರ ಮತಕ್ಷೇತ್ರಕ್ಕೆ ಸಂಬಂಧಿಸಿದಂತೆ ಬಬಲೇಶ್ವರದ ಶ್ರೀ ಶಾಂತವೀರ ಪದವಿಪೂರ್ವ ಕಾಲೇಜ್‍ನಲ್ಲಿ ಮತದಾನ ಸೌಲಭ್ಯ ಕೇಂದ್ರ ತೆರೆಯಲಾಗಿದ್ದು, ನೋಡಲ್ ಅಧಿಕಾರಿಗಳಾಗಿ ಎಸ್.ಎಚ್.ಅರಕೇರಿ ಮೊ:9036069684 ಇವರನ್ನು ನೇಮಕ ಮಾಡಲಾಗಿದೆ.
30-ವಿಜಯಪುರ ನಗರ ಮತಕ್ಷೇತ್ರಕ್ಕೆ ಸಂಬಂಧಿಸಿದಂತೆ ವಿಜಯಪುರ ನಗರದ ವಿ.ಬಿ.ದರಬಾರ ಪದವಿಪೂರ್ವ ಮತ್ತು ಪ್ರೌಡಶಾಲೆಯಲ್ಲಿ ಮತದಾನ ಸೌಲಭ್ಯ ಕೇಂದ್ರ ತೆರೆಯಲಾಗಿದ್ದು, ನೋಡಲ್ ಅಧಿಕಾರಿಗಳಾಗಿ ಸಿ.ಎ.ಗುಡದಿನ್ನಿ ಮೊ: 8123123194 ಇವರನ್ನು ನೇಮಕ ಮಾಡಲಾಗಿದೆ.
31-ನಾಗಠಾಣ ಮತಕ್ಷೇತ್ರಕ್ಕೆ ಸಂಬಂಧಿಸಿದಂತೆ ವಿಜಯಪುರ ನಗರದ ಪಿ.ಡಿ.ಜೆ. ಪದವಿ ಪೂರ್ವ ಮತ್ತು ಪ್ರೌಢಶಾಲೆಯಲ್ಲಿ ಮತದಾನ ಸೌಲಭ್ಯ ಕೇಂದ್ರ ತೆರೆಯಲಾಗಿದ್ದು, ನೋಡಲ್ ಅಧಿಕಾರಿಗಳಾಗಿ ಐ.ಎಚ್.ತುಂಬಗಿ ಮೊ: 9008460577 ಇವರನ್ನು ನೇಮಕ ಮಾಡಲಾಗಿದೆ.
32-ಇಂಡಿ ಮತಕ್ಷೇತ್ರಕ್ಕೆ ಸಂಬಂಧಿಸಿದಂತೆ ಇಂಡಿಯ ಸರ್ಕಾರಿ ಆದರ್ಶ ಮಹಾವಿದ್ಯಾಲಯದಲ್ಲಿ ಮತದಾನ ಸೌಲಭ್ಯ ಕೇಂದ್ರ ತೆರೆಯಲಾಗಿದ್ದು, ನೋಡಲ್ ಅಧಿಕಾರಿಗಳಾಗಿ ಕು.ಎಸ್.ಕೆ.ಭಾಗ್ಯಶ್ರೀ ಮೊ: 7795387217 ಇವರನ್ನು ನೇಮಕ ಮಾಡಲಾಗಿದೆ.
33-ಸಿಂದಗಿ ಮತಕ್ಷೇತ್ರಕ್ಕೆ ಸಂಬಂಧಿಸಿದಂತೆ ಸಿಂದಗಿಯ ಆರ್.ಡಿ.ಪಾಟೀಲ ಮತ್ತು ಪಿ.ಬಿ.ಪೋರವಾಲ್ ಕಾಲೇಜ್‍ನಲ್ಲಿ ಮತದಾನ ಸೌಲಭ್ಯ ಕೇಂದ್ರ ತೆರೆಯಲಾಗಿದ್ದು, ನೋಡಲ್ ಅಧಿಕಾರಿಗಳಾಗಿ ಪ್ರಕಾಶ ಸಿಂದಗಿ ಮೊ: 9945856274 ಇವರನ್ನು ನೇಮಕ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.