ಚುನಾವಣೆಗೆ ನಿಯೋಜಿತ ವಿವಿಧ ತಂಡದ ಅಧಿಕಾರಿಗಳ ಸಭೆ ನಡೆಸಿದ ಚುನಾವಣಾಧಿಕಾರಿ ಕ್ಯಾಪ್ಟನ್ ಮಹೇಶ್

ವಿಜಯಪುರ, ಏ.6:ಕರ್ನಾಟಕ ವಿಧಾನಸಭಾ ಚುನಾವಣೆ ಇದೆ ಮೇ 10 ರಂದು ಜರುಗಲಿದೆ. ಚುನಾವಣಾ ಸಿದ್ದತಾ ಹಿನ್ನೆಲೆಯಲ್ಲಿ 30-ಬಿಜಾಪುರ ನಗರ ಮತಕ್ಷೇತ್ರದ ಚುನಾವಣಾಧಿಕಾರಿಗಳು ಆದ ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ್ ಮಾಲಗಿತ್ತಿ ಅವರು ಬುಧವಾರ ನಗರದ ತಹಶೀಲ್ದಾರ್ ಕಚೇರಿಯಲ್ಲಿ ಸ್ಥಾಪಿಸಿರುವ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಬಿಜಾಪೂರ ನಗರ ವಿಧಾನ ಸಭಾ ಮತಕ್ಷೇತ್ರಕ್ಕೆ ಸಂಬಂಧಿಸಿದ ನಿಯೋಜಿತ ವಿವಿಧ ತಂಡದ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ನಿಯೋಜಿತ ಸೆಕ್ಟರ್ ಅಧಿಕಾರಿಗಳು, ಎಫ್ ಎಸ್ ಟಿ ವಿ ವಿ ಟಿ, ವಿಎಸ್ ಟಿ, ಅಕೌಂಟಿಂಗ್ ಸಹಾಯಕ ಚುನಾವಣಾ ವೀಕ್ಷಕರ, ಪೆÇಲೀಸ್ ಸೆಕ್ಟರ್ ಅಧಿಕಾರಿಗಳ ಸಭೆ ಜರುಗಿಸಿ, ಚುನಾವಣೆಯನ್ನು ಪಾರದರ್ಶಕ ಮತ್ತು ಸುಸೂತ್ರವಾಗಿ ನಡೆಸುವ ನಿಟ್ಟಿನಲ್ಲಿ ವಹಿಸಿಕೊಟ್ಟ ಕಾರ್ಯವನ್ನು ಅತ್ಯಂತ ಜವಾಬ್ದಾರಿಯಿಂದ ನಿರ್ವಹಿಸಬೇಕು. ಈಗಾಗಲೇ ಗುರುತಿಸಿರುವ ದುರ್ಬಲ ಮತದಾರರಿಗೆ ಮತದಾನ ಮಾಡಲು ತಿಳಿ ಹೇಳಬೇಕು ಎಂದು ಹೇಳಿದರು. ಈ ಸಭೆಯಲ್ಲಿ ನಗರದ
ಡಿವೈಎಸ್ ಪಿ ಸಿದ್ದೇಶ್ವರ ಸಹಾಯಕ ಚುನಾವಣಾಧಿಕಾರಿ ಹಾಗೂ ವಿಜಯಪೂರ ತಹಶೀಲ್ದಾರ್ ಸುರೇಶ್ ಮುಂಜೆ ಉಪಸ್ಥಿತರಿದ್ದರು.