ಚುನಾವಣೆಗೆ ನಿಯೋಜನೆ ಆಕ್ಷೇಪಿಸಿ ಮನವಿ

(ಸಂಜೆವಾಣಿ ವಾರ್ತೆ)
ಲಕ್ಷ್ಮೇಶ್ವರ,ಜು21: ಮುಂಬರುವ ತಾಲೂಕ ಪಂಚಾಯಿತಿ ಜಿಲ್ಲಾ ಪಂಚಾಯಿತಿ ಮತ್ತು ಲೋಕಸಭಾ ಚುನಾವಣೆಗಳಿಗೆ ಗ್ರಾಮ ಪಂಚಾಯಿತಿಗಳ ಸಿಬ್ಬಂದಿಯನ್ನು ನಿಯೋಜನೆ ಮಾಡಿರುವುದನ್ನು ಆಕ್ಷೇಪಿಸಿ ಗ್ರಾಮ ಪಂಚಾಯಿತಿಯ ಬಿಲ್ ಕಲೆಕ್ಟರ್‍ಗಳು ತಾಲೂಕ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.
ಮನವಿ ಪತ್ರದಲ್ಲಿ ಗ್ರಾಮ ಪಂಚಾಯಿತಿ ನೌಕರರ ಸಂಘ ವು ಗ್ರಾಮ ಪಂಚಾಯಿತಿಗಳಲ್ಲಿಯೇ ಅನೇಕ ಕೆಲಸ ಕಾರ್ಯಗಳ ಒತ್ತಡವಿದೆ ಮೇಲಾಗಿ ಸರ್ಕಾರದ ಯಾವುದೇ ಹೊಸ ಯೋಜನೆಗಳು ಜಾರಿಯಾದರೆ ಅವುಗಳನ್ನು ಸಹ ನಿಭಾಯಿಸಬೇಕಾಗಿದೆ ಮತ್ತು ಪ್ರತಿದಿನ ಕರ ವಸುಲಿಗೆ ಕೂಡ ಸಿಬ್ಬಂದಿ ಹೋಗಬೇಕಾಗಿದೆ ಇಷ್ಟೆಲ್ಲ ಕಾರ್ಯ ಒತ್ತಡಗಳ ಮಧ್ಯ ಗ್ರಾಮ ಪಂಚಾಯತಿ ಸಿಬ್ಬಂದಿಯನ್ನು ನಿಯೋಜನೆ ಮಾಡುವುದು ಸಮಾಜಸವಲ್ಲ.
ಆದ್ದರಿಂದ ಹಿರಿಯ ಅಧಿಕಾರಿಗಳು ಗ್ರಾಮ ಪಂಚಾಯಿತಿಯ ನೌಕರರು ಎದುರಿಸುತ್ತಿರುವ ಅನೇಕ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಚುನಾವಣೆಗೆ ನಿಯೋಜನೆ ಮಾಡದಂತೆ ಕ್ರಮ ಕೈಗೊಳ್ಳಬೇಕು ಎಂದು ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ನೌಕರರ ಸಂಘದ ಅಧ್ಯಕ್ಷರಾದ ಬಸವರಾಜ ಅರ್ಕಸಾಲಿ ಹೇಳಿದರು.
ತಾಲೂಕ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಪ್ಪ ಧರ್ಮರ್ ಮನವಿ ಪತ್ರ ಸ್ವೀಕರಿಸಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸಲ್ಲಿಸಿ ನಂತರ ಜಿಲ್ಲಾಧಿಕಾರಿಗಳ ಮುಖಾಂತರ ಸಮಸ್ಯೆಯನ್ನು ಗಮನಕ್ಕೆ ತರಲಾಗುವುದು ಎಂದು ಹೇಳಿದರು.
ಮನವಿ ಪತ್ರ ಸಲ್ಲಿಸುವ ಸಂದರ್ಭದಲ್ಲಿ ಮಹಾಂತೇಶ ಸುಣಗಾರ ಶಂಕರಪ್ಪ ಗೋಣಪ್ಪನವರ ಮಲ್ಲಿಕಾರ್ಜುನ್ ಸಾಸಲವಾಡ ಶ್ರೀಶೈಲಪ್ಪ ಕಮ್ಮಾರ ಸವಿತಾ ಹುನಗುಂದ ಪಿಡಿಒ ಕವಿತಾ ಸೇರಿದಂತೆ ತಾಲೂಕ ಪಂಚಾಯತಿಯ ಸಿಬ್ಬಂದಿಗಳು ಹಾಜರಿದ್ದರು.