ಚುನಾವಣಾ ಹರಕೆ ಇತ್ಯರ್ಥ.ಡಾ.ಶ್ರೀನಿವಾಸ ಅಭಿಮಾನಿ ದಂಪತಿಗಳಿಂದ  ಜಟಿಂಗ ರಾಮೇಶ್ವರಗೆ ವಿಶೇಷ ಪೂಜೆ.


ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಮೇ 22 :- ಚುನಾವಣಾ ಸಂದರ್ಭದಲ್ಲಿ ಕೂಡ್ಲಿಗಿ ಕ್ಷೇತ್ರದಲ್ಲಿ ಕಾಂಗ್ರೇಸ್ ಅಭ್ಯರ್ಥಿ ಡಾ ಶ್ರೀನಿವಾಸ ಗೆಲುವು ಸಾಧಿಸಬೇಕು ಎಂದು ಹರಕೆ ಹೊತ್ತ ಅಭಿಮಾನಿಗಳ ದಂಪತಿ ಕುಟುಂಬಗಳು ಹರಕೆ ಇತ್ಯಾರ್ಥವಾಗಿದ್ದರಿಂದ ಇಂದು ಮೊಳಕಾಲ್ಮುರು ತಾಲೂಕಿನ ಜಟಿಂಗ ರಾಮೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಹರಕೆ ತೀರಿಸಿದರು.
ಕೂಡ್ಲಿಗಿ ಕ್ಷೇತ್ರದಲ್ಲಿ ಕಾಂಗ್ರೇಸ್ ಅಭ್ಯರ್ಥಿ ಡಾ ಶ್ರೀನಿವಾಸ ಸ್ಪರ್ಧೆಗಿಳಿದಿದ್ದು ಪ್ರತಿಸ್ಪರ್ದಿ ಬಿಜೆಪಿ  ಲೋಕೇಶ ವಿ ನಾಯಕ ಸ್ಪರ್ಧೆಗಿಳಿದು ಜಿದ್ದಾಜಿದ್ದಿ ಕ್ಷೇತ್ರದಲ್ಲಿತ್ತು ಕ್ಷೇತ್ರದಲ್ಲಿ ಕಾಂಗ್ರೇಸ್ ಅಭ್ಯರ್ಥಿ ಪರ ಪ್ರಚಾರ ಕಾರ್ಯದಲ್ಲಿ ತೊಡಗಿದ್ದ ಎಕ್ಕೆಗುಂದಿ ನಾಗರಾಜ ಸೇರಿದಂತೆ ಚಂದ್ರಗೌಡ, ಬಸವರಾಜ, ತಿಮ್ಮಾರೆಡ್ಡಿ ಹಾಗೂ ಬನ್ನಿ ರಾಘು ಇತರರು ಸೇರಿ ಈ ಬಾರಿ ಕೂಡ್ಲಿಗಿ ಕ್ಷೇತ್ರದಲ್ಲಿ ಕಾಂಗ್ರೇಸ್ ಅಭ್ಯರ್ಥಿ ಡಾ ಶ್ರೀನಿವಾಸ ಗೆಲುವು ಪಡೆಯಬೇಕು ಎಂದು ಶ್ರೀ ಜಟಿಂಗ ರಾಮೇಶ್ವರ ದೇವರಿಗೆ ಹರಕೆ ಹೊತ್ತು ಚುನಾವಣಾ ಪ್ರಚಾರದಲ್ಲಿ ತೊಡಗಿದ್ದೆವು ದೇವರಿಗೆ ಹೊತ್ತ ಹರಕೆಗೆ ರಾಮೇಶ್ವರ ಆಶೀರ್ವದಿಸಿ ಕೂಡ್ಲಿಗಿ ಕ್ಷೇತ್ರಕ್ಕೆ  ಕಾಂಗ್ರೇಸ್ ಅಭ್ಯರ್ಥಿ ಡಾ ಶ್ರೀನಿವಾಸ ಅತ್ಯಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿ ನೂತನ ಶಾಸಕರಾಗಿ ಆಯ್ಕೆಯಾಗಿದ್ದು ಅಲ್ಲದೆ ಇಂದು ಶಾಸಕರಾಗಿ ಪ್ರಮಾಣವಚನ ಸ್ವೀಕರಿಸುವವರಿದ್ದು ಅವರ ಸೇವೆ ಕ್ಷೇತ್ರದ ಅಭಿವೃದ್ಧಿ ಗಟ್ಟಿಯಾಗಲಿ ಎಂದು ಡಾ ಶ್ರೀನಿವಾಸ ಅಭಿಮಾನಿ ಬಳಗದವರು ಚುನಾವಣಾ ಸಂದರ್ಭದಲ್ಲಿ ಹರಕೆ ಹೊತ್ತಾದ್ದು ಇತ್ಯಾರ್ಥವಾಗಿದ್ದರಿಂದ ಇಂದು ಬೆಳಿಗ್ಗೆ ಮೊಳಕಾಲ್ಮುರು ತಾಲೂಕಿನ ಜಟಿಂಗ ರಾಮೇಶ್ವರ ಬೆಟ್ಟ ಏರಿ ಎಕ್ಕೆಗುಂದಿ ನಾಗರಾಜ, ಚಂದ್ರಗೌಡ, ಬನ್ನಿರಾಘು ತಿಮ್ಮಾರೆಡ್ಡಿ ದಂಪತಿ ಸಮೇತರಾಗಿ ಕೂಡ್ಲಿಗಿ ನೂತನ ಶಾಸಕ ಡಾ ಶ್ರೀನಿವಾಸ ಹೆಸರಿನಲ್ಲಿ ರುದ್ರಾಭಿಷೇಕ ಸೇರಿದಂತೆ ವಿಶೇಷ ಪೂಜೆ ನೆರವೇರಿಸಿ  ಹಾಗೂ ಅನ್ನ ಸಂತರ್ಪಣೆ ಸಹ ಮಾಡಲಾಯಿತು.