ಚುನಾವಣಾ ಸೋಲಿನ ಭೀತಿಯಲ್ಲಿ ಕೃಷಿ ಕಾಯ್ದೆ ಹಿಂಪಡೆದ ಮೋದಿ ಸರ್ಕಾರ

 

ದಾವಣಗೆರೆ.ನ.೨೯; ಐದು ರಾಜ್ಯಗಳ ಚುನಾವಣೆ ಉದ್ದೇಶದಿಂದ ಕೃಷಿ ಕಾಯ್ದೆಗಳನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಕೈಬಿಟ್ಟಿದ್ದಾರೆಯೇ ಹೊರತು ರೈತರ ಮೇಲಿನ ಗೌರದಿಂದಲ್ಲಾ,ಕೃಷಿ ಕಾಯ್ದೆಗಳು ಹಿಂದಿ ಭಾಷಿಕರ ರಾಜ್ಯಗಳ ಚುನಾವಣೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯನ್ನು ಗುಪ್ತಚರ ಇಲಾಖೆಗಳ ವರದಿಯಿಂದ ಮನಗಂಡ ನಂತರ ಇದೀಗ ಕೃಷಿ ಕಾಯ್ದೆಗಳನ್ನು ಕೈಬಿಡುವ ನಿರ್ಧಾರ ಪ್ರಕಟಿಸಿದ್ದಾರೆಂದು ಕೆಪಿಸಿಸಿ ವಕ್ತಾರ ಡಿ.ಬಸವರಾಜ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು
ಕಳೆದ ಒಂದು ವರ್ಷಕ್ಕೂ ಅಧಿಕ ದಿನಗಳಿಂದ ಅನ್ನದಾತರು ಮಳೆ, ಚಳಿ, ಬಿಸಿಲು ಎನ್ನದೇ ತಮ್ಮ ಹಕ್ಕುಗಳಿಗಾಗಿ ಬೀದಿಗೆ ಬಿದ್ದು ಹೋರಾಟ ನಡೆಸಿದರು. ಮುಷ್ಕರ ನಿರತ ರೈತರನ್ನು ಖಲಿಸ್ತಾನಿ ಉಗ್ರರು – ದೇಶದ್ರೋಹಿಗಳು-ನಕಲಿ ರೈತರು – ಲಾಬಿ ಗುಂಪುಗಳ ಏಜೆಂಟರು ಎಂದು ಕರೆದಿದ್ದ ಬಿಜೆಪಿ ನಾಯಕರು ಪಂಚರಾಜ್ಯಗಳ ಚುನಾವಣಾ ಸೋಲಿನ ಭೀತಿಯಲ್ಲಿ ಕೃಷಿ ಕಾಯ್ದೆ ಹಿಂಪಡೆದ ಮೋದಿ ಸರ್ಕಾರದ ನಾಟಕವಾಗಿದೆ. ಚಳುವಳಿ ನಿರತ 700ಕ್ಕೂ ಅಧಿಕ ಹುತ್ಮಾತ ರೈತರ ಬಲಿದಾನ ಹೊಣೆಯನ್ನು ಮೋದಿ ಸರ್ಕಾರ ಹೋರಲೇ ಬೇಕು. ಕೃಷಿ ಹಂಗಾಮಿನಲ್ಲಿ ರೈತರ ಬೆಳೆಗಳು ಕಟಾವಿಗೆ ಬರುವ ಮುನ್ನ ಕನಿಷ್ಟ ಬೆಂಬಲ ಬೆಲೆಯನ್ನು ಎಲ್ಲಾ ರೀತಿಯ ಬೆಳೆಗಳಿಗೆ ದೇಶಾದ್ಯಂತ ಘೋಷಿಸಬೇಕು.
ದೇಶದಲ್ಲಿ ಜಾರಿಗೆ ಬಂದಿರುವ ಜಿ.ಎಸ್.ಟಿ. ಕಾಯ್ದೆಯು ಅವೈಜ್ಞಾನಿಕವಾಗಿದೆ ಇದನ್ನು ಸರಿಪಡಿಸಬೇಕು ಜೊತೆಗೆ ಜೆಎಸ್‌ಟಿಯಿಂದ ಸಂಗ್ರಹವಾದ ಹಣವನ್ನು ನ್ಯಾಯಸಮ್ಮತವಾಗಿ ರಾಜ್ಯಗಳಿಗೆ ಒಕ್ಕೂಟ ಸರ್ಕಾರ ನೀಡಬೇಕು ಹೆಚ್ಚು ಜಿಎಸ್‌ಟಿ ನೀಡುವ ರಾಜ್ಯಗಳಿಗೆ ಹೆಚ್ಚಿನ ಹಣವನ್ನು ನೀಡಬೇಕು. ತಾರತಮ್ಯ ನೀತಿ ಅನುಸರಿಸಿದರೆ ಒಕ್ಕೂಟ ವ್ಯವಸ್ಥೆಗೆ ಧಕ್ಕೆಯಾಗಲಿದೆ ಎಂದಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಪಾಲಿಕೆ ಸದಸ್ಯರಾದ ಕೆ.ಚಮನ್ ಸಾಬ್,ಮಂಜುನಾಥ್ ಗಡಿಗುಡಾಳ್ ,ಜಗದೀಶ್, ಆರ್ ಬಿಝಡ್ ಬಾಷಾ,ದಾದಾಪೀರ್ ಇದ್ದರು.
Attachments area