ಚುನಾವಣಾ ಸಿಬ್ಬಂದಿಗೆ ತರಬೇತಿ

ಕೊಟ್ಟೂರು ಡಿ 23:ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಇಂದು ಗ್ರಾ.ಪಂ. ಚುನಾವಣಾ ಕಾರ್ಯಕ್ಕೆ ನಿಯೋಜಿಸಿದ ಪಿ.ಆರ್.ಒ & ಎ.ಪಿ.ಆರ್.ಒ ರವರಿಗೆ ಚುನಾವಣಾ ತರಬೇತಿಯನ್ನು ನೀಡಲಾಯಿತು. ಹಾಲೀ ಚುನಾವಣೆ ನಡೆಯುವ 81 ಮತಗಟ್ಟೆಗಳ ಸಿಬ್ಬಂದಿ ಹಾಗು 8 ಕಾಯ್ದಿರಿಸಿದ ಸಿಬ್ಬಂದಿ ಸೇರಿ 89 ಪಿ.ಆರ್.ಒ.& 89 ಎ.ಪಿ.ಆರ್.ಒ ಸೇರಿ 178 ಸಿಬ್ಬಂದಿಯವರಿಗೆ 3 ಕೊಠಡಿಯಲ್ಲಿ ತಲಾ 60 ಸಿಬ್ಬಂದಿಯಂತೆ ಮಾಸ್ಟರ್ ಟ್ರೈನರ್ಸ್ ಗಳಾದ ಎಸ್.ಎಂ.ಮರುಳಸಿದ್ದಯ್ಯ, ಜಿ.ರೇವಣ್ಣ ಹಾಗು ಮನೋಹರಸ್ವಾಮಿ ತರಬೇತಿಯನ್ನು ನೀಡಿದರು. ಎಲ್ಲಾ ಸಿಬ್ಬಂದಿಯನ್ನು ಕೋವಿಡ್-19 ಸುರಕ್ಷತೆಯ ದೃಷ್ಟಿಯಿಂದ ಸಮುದಾಯ ಆರೋಗ್ಯ ಕೇಂದ್ರ, ಕೊಟ್ಟೂರಿನ ಸಿಬ್ಬಂದಿ ಥರ್ಮಲ್ ಸ್ಕ್ಯಾನಿಂಗ್ ಮಾಡಿದರು.