ಚುನಾವಣಾ ವೆಚ್ಚ ವೀಕ್ಷಕರ ಆಗಮನ:ವೆಚ್ಚಕ್ಕೆ ಸಂಬಂಧಿಸಿದಂತೆ ದೂರು ಸಲ್ಲಿಸಬಹುದು

ಕಲಬುರಗಿ,ಏ.16:ವಿಧಾನಸಭೆ ಚುನಾವಣೆಯನ್ನು ಮುಕ್ತ ಹಾಗೂ ನ್ಯಾಯ ಸಮ್ಮತವಾಗಿ ನಡೆಸಲು ಜಿಲ್ಲೆಯ 9 ವಿಧಾನಸಭಾ ಕ್ಷೇತ್ರಗಳಿಗೆ ಭಾರತ ಚುನಾವಣಾ ಆಯೋಗವು 6 ಜನ ಐ.ಆರ್.ಎಸ್./ ಐ.ಡಿ.ಎ.ಎಸ್. ಅಧಿಕಾರಿಗಳನ್ನು ಚುನಾವಣಾ ವೆಚ್ಚ ವೀಕ್ಷಕರನ್ನು ನೇಮಿಸಿದ್ದು, ವೀಕ್ಷಕರು ಈಗಾಗಲೆ ಜಿಲ್ಲೆಗೆ ಆಗಮಿಸಿದ್ದಾರೆ. ಚುನಾವಣಾ ವೆಚ್ಚಕ್ಕೆ ಸಂಬಂಧಿಸಿದಂತೆ ಏನೇ ದೂರುಗಳಿದಲ್ಲಿ ಇವರನ್ನು ಸಂಪರ್ಕಿಸಿ ದೂರು ಸಲ್ಲಿಸಬಹುದಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಯಶವಂತ ವಿ. ಗುರುಕರ್ ಅವರು ತಿಳಿಸಿದ್ದಾರೆ.
ವೆಚ್ಚ ವೀಕ್ಷಕರಿಗೆ ಹಂಚಿಕೆ ಮಾಡಿದ ವಿಧಾನಸಭಾ ಮತಕ್ಷೇತ್ರ,ವಾಸಸ್ಥಳ ಹಾಗೂ ಮೊಬೈಲ್ ಸಂಖ್ಯೆ ವಿವರ ಇಂತಿದೆ. 34-ಅಫಜಲಪುರ ವಿಧಾನಸಭಾ ಕ್ಷೇತ್ರ: ರಾಜಕುಮಾರ ವಿ. ಕೇಂದ್ರೇ, ಗುಲಬರ್ಗಾ ವಿಶ್ವವಿದ್ಯಾಲಯ ಅತಿಥಿ ಗೃಹ ಕಲಬುರಗಿ ಹಾಗೂ ಮೊಬೈಲ್ ಸಂಖ್ಯೆ 9869731517. 35-ಜೇವರ್ಗಿ ವಿಧಾನಸಭಾ ಕ್ಷೇತ್ರ: ವಿಪುಲ್ ಚೌಡಾ, ಗುಲಬರ್ಗಾ ವಿಶ್ವವಿದ್ಯಾಲಯ ಅತಿಥಿ ಗೃಹ ಕಲಬುರಗಿ ಹಾಗೂ ಮೊಬೈಲ್ ಸಂಖ್ಯೆ 9408790771. 40-ಚಿತ್ತಾಪುರ ಹಾಗೂ 43-ಗುಲಬರ್ಗಾ ಗ್ರಾಮೀಣ ವಿಧಾನಸಭಾ ಕ್ಷೇತ್ರ: ಶಂಕರ ಚಕ್ರಬರ್ಟಿ, ಗುಲಬರ್ಗಾ ವಿಶ್ವವಿದ್ಯಾಲಯ ಅತಿಥಿ ಗೃಹ ಕಲಬುರಗಿ ಹಾಗೂ ಮೊಬೈಲ್ ಸಂಖ್ಯೆ 9477330213. 41-ಸೇಡಂ ಹಾಗೂ 42-ಚಿಂಚೋಳಿ ವಿಧಾನಸಭಾ ಕ್ಷೇತ್ರ: ಪಿ. ಕೀರ್ತಿನಾರಾಯಣ, ವಿ.ಟಿ.ಯು. ಅತಿಥಿ ಗೃಹ ಕಲಬುರಗಿ ಹಾಗೂ ಮೊಬೈಲ್ ಸಂಖ್ಯೆ 8610226005. 44-ಗುಲಬರ್ಗಾ ದಕ್ಷಿಣ ಹಾಗೂ 45-ಗುಲಬರ್ಗಾ ಉತ್ತರ ವಿಧಾನಸಭಾ ಕ್ಷೇತ್ರ: ಜ್ಯೋತೀಸ್ ಕೆ.ಎ., ಗ್ರ್ಯಾಂಡ್ ಹೊಟೇಲ್ ಕಲಬುರಗಿ ಹಾಗೂ ಮೊಬೈಲ್ ಸಂಖ್ಯೆ 9605002559. 46-ಆಳಂದ ವಿಧಾನಸಭಾ ಕ್ಷೇತ್ರ: ರೇಜಾಯ್ ಕೃಷ್ಣನ್, ಗ್ರ್ಯಾಂಡ್ ಹೊಟೇಲ್ ಕಲಬುರಗಿ ಹಾಗೂ ಮೊಬೈಲ್ ಸಂಖ್ಯೆ 8156908967.