ಚುನಾವಣಾ ವೆಚ್ಚದ ಬಿಲ್‌ಗಳಿಗೆ ಜಿಎಸ್‌ಟಿ ಕಡ್ಡಾಯ

ಕೋಲಾರ,ನ,೨೯-ಜಿಲ್ಲಾಧಿಕಾರಿಗಳ ಕಚೇರಿಯ, ನ್ಯಾಯಾಂಗ ಸಭಾಂಗಣದಲ್ಲಿ ೨೦೨೪ರ ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಕರಡು ದರಪಟ್ಟಿಗೆ ಸಂಬಂಧಿಸಿದಂತೆ ಜಿಲ್ಲಾ ಚುನಾವಣಾ ವೆಚ್ಚ ಸಮಿತಿಯೊಂದಿಗೆ ರಾಜಕೀಯ ಪಕ್ಷಗಳ ಜೊತೆ ಸಭೆಯನ್ನು ನಡೆಸಿದರು.
ಚುನಾವಣಾ ವೆಚ್ಚಕ್ಕೆ ಸಂಬಂಧಿಸಿದಂತೆ ಯಾವುದೇ ಬಿಲ್ ನೀಡಬೇಕಾದರು ಜಿ.ಎಸ್.ಟಿ. ಬಿಲ್ ಕಡ್ಡಾಯವಾಗಿ ನೀಡಬೇಕು, ಹಾಗೂ ವಾಹನಗಳ ಬಳಕೆಗೆ ಆರ್.ಟಿ.ಓ ಅಧಿಕಾರಿ ಮಾರ್ಗಸೂಚಿಯನ್ನು ಅನುಸರಿಸಬೇಕು ಸಭೆಯ ಅಧ್ಯಕ್ಷತೆ ವಹಿಸಿ ಜಿಲ್ಲಾಧಿಕಾರಿ ಅಕ್ರಂ ಪಾಷ ಅವರು ಹೇಳಿದರು.
ಸಭೆಯಲ್ಲಿ ಜಿಲ್ಲಾ ಚುನಾವಣಾ ವೆಚ್ಚದ ನೋಡಲ್ ಅಧಿಕಾರಿಯಾದ ಮುರುಗೇಶ್, ಉಪ ವಿಭಾಗ ಅಧಿಕಾರಿಯಾದ ವೆಂಕಟಲಕ್ಷ್ಮಿ, ರಾಜಕೀಯ ಪಕ್ಷಗಳು ಸದಸ್ಯರು, ಎಲ್ಲಾ ತಾಲೂಕುಗಳ ಇಓ,ಗಳು, ಪಿ.ಡಬ್ಲ್ಯೂ.ಡಿ, ಹಾಗೂ ಹಿರಿಯ ಅಧಿಕಾರಿಗಳು ಸೇರಿದಂತೆ ಉಪಸ್ಥಿತರಿದ್ದರು.