ಚುನಾವಣಾ ವೀಕ್ಷಕರ ಆಗಮನ: ಚುನಾವಣಾದೂರುಗಳಿದ್ದಲ್ಲಿ ಸಂಪರ್ಕಿಸಲು ಮನವಿ

ಕಲಬುರಗಿ:ಏ.20:ಲೋಕಸಭಾ ಚುನಾವಣೆಯನ್ನು ಮುಕ್ತ ಹಾಗೂ ನ್ಯಾಯ ಸಮ್ಮತವಾಗಿ ನಡೆಸಲು ಭಾರತ ಚುನಾವಣಾ ಆಯೋಗವು 05-ಗುಲಬರ್ಗಾ (ಪ.ಜಾ.) ಮೀಸಲು ಲೋಕಸಭಾ ಕ್ಷೇತ್ರಕ್ಕೆ ಐಎಎಸ್ ಅಧಿಕಾರಿಯಾದ ದೀಪನ್‍ಕರ್ ಸಿನ್ಹಾ ಇವರನ್ನು ಸಾಮಾನ್ಯ ವೀಕ್ಷಕರಾಗಿ, ಭಾರತೀಯ ಕಂದಾಯ ಸೇವೆ (ಐ.ಆರ್.ಎಸ್.) ಅಧಿಕಾರಿಯಾದ ಸಿ. ಧರಣಿನಾಥ ವಿ.ಎಸ್. ಅವರನ್ನು ವೆಚ್ಚ ವೀಕ್ಷಕರನ್ನಾಗಿ ಹಾಗೂ ಐ.ಪಿ.ಎಸ್ ಅಧಿಕಾರಿಯಾದ ಜೆ.ಎಸ್. ರಜಪೂತ್ ಇವರನ್ನು ಪೊಲೀಸ್ ವೀಕ್ಷಕರನ್ನಾಗಿ ನೇಮಿಸಿದ್ದು, ಈಗಾಗಲೇ ಕ್ಷೇತ್ರಕ್ಕೆ ಆಗಮಿಸಿದ್ದಾರೆ ಎಂದು ಕಲಬುರಗಿ ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳಾದ ಬಿ. ಫೌಜಿಯಾ ತರನ್ನುಮ್ ಅವರು ತಿಳಿಸಿದ್ದಾರೆ.
ಸಾಮಾನ್ಯ ವೀಕ್ಷಕರಾದ ದೀಪನ್‍ಕರ್ ಸಿನ್ಹಾ-9380501489 ಅವರು ಕಲಬುರಗಿ ನಗರದ ಐವಾನ್ ಶಾಹಿ ಅತಿಥಿ ಗೃಹದ ಸೂಟ್ ನಂ. 2ರಲ್ಲಿ ತಂಗಿದ್ದು, ಚುನಾವಣೆಗೆ ಸಂಬಂಧಿಸಿದಂತೆ ಏನಾದರೂ ಸಾಮಾನ್ಯ ದೂರುಗಳಿದ್ದಲ್ಲಿ ಇವರನ್ನು ಪ್ರತಿದಿನ ಬೆಳಿಗ್ಗೆ 9 ರಿಂದ 10 ಗಂಟೆಯೊಳಗಾಗಿ ಸಂಪರ್ಕಿಸಿ ದೂರು ಸಲ್ಲಿಸಬಹುದಾಗಿದೆ.
ಚುನಾವಣಾ ವೆಚ್ಚ ವೀಕ್ಷಕರಾದ ಸಿ. ಧರಣಿನಾಥ ವಿ.ಎಸ್.-7483760308 ಅವರು ಕಲಬುರಗಿ ನಗರದ ಐವಾನ್ ಶಾಹಿ ಅತಿಥಿ ಗೃಹದ ಸೂಟ್ ನಂ. 4ರಲ್ಲಿ ತಂಗಿದ್ದು, ಚುನಾವಣಾ ವೆಚ್ಚಕ್ಕೆ ಸಂಬಂಧಿಸಿದಂತೆ ಏನೆ ಅಹವಾಲುಗಳಿದ್ದಲ್ಲಿ ಪ್ರತಿದಿನ ಸಂಜೆ 5 ರಿಂದ 6 ಗಂಟೆಯವರೆಗೆ ಸಲ್ಲಿಸಬಹುದಾಗಿದೆ.
ಪೊಲೀಸ್ ವೀಕ್ಷಕರಾದ ಜೆ.ಎಸ್. ರಜಪೂತ್- 6363312584 ನಗರದ ಐವಾನ್ ಶಾಹಿ ಅತಿಥಿ ಗೃಹದ ಸೂಟ್ ನಂ. 3ರಲ್ಲಿ ತಂಗಿದ್ದು, ಚುನಾವಣೆಯ ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿದಂತೆ ದೂರುಗಳಿದ್ದಲ್ಲಿ ಇವರನ್ನು ಬೆಳಿಗ್ಗೆ 9 ರಿಂದ 10 ಗಂಟೆಯವರೆಗೆ ಸಂಪರ್ಕಿಸಿ ದೂರು ಸಲ್ಲಿಸಬಹುದಾಗಿದೆ.