ಚುನಾವಣಾ ವೀಕ್ಷಕರು ಚುನಾವಣೆಯ ಕಣ್ಣುಗಳಿದಂತೆ: ಥೈತುಯಿಂಗ್ ಫಮೈ

ಬೀದರ್: ಮೇ.1:ವೀಕ್ಷಕರು ಚುನಾವಣೆಯ ಕಣ್ಣುಗಳಿದಂತೆ ತಾವುಗಳು ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸಿದ್ದಲ್ಲಿ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಲು ಹಾಗೂ ಚುನಾವಣೆಯು ಸುಸೂತ್ರವಾಗಿ ನಡೆಸಲು ಸಾಧ್ಯ ಎಂದು ಸಾಮಾನ್ಯ ಚುನಾವಣಾ ವೀಕ್ಷಕ ಥೈತುಯಿಂಗ್ ಫಮೈ ಹೇಳಿದರು.
ಅವರು ರವಿವಾರ ನಗರದ ಚನ್ನಬಸವ ಪಟ್ಟದೇವರು ರಂಗಮಂದಿರದಲ್ಲಿ ಮತದಗಟ್ಟೆಯ ಸೂಕ್ಷ?? ವೀಕ್ಷಕರಿಗಾಗಿ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಗಾರದಲ್ಲಿ ಭಾಗವಹಿಸಿ ಮಾತನಾಡಿದರು.
ಚುನಾವಣೆ ಸೂಕ್ಷ?? ವೀಕ್ಷಕರು ಮತಗಟ್ಟೆಗೆ ನೇಮಿಸಲಾದ ಸಿಬ್ಬಂದಿಗಳ ಕಾರ್ಯದಲ್ಲಿ ಹಸ್ತಕ್ಷೇಪ ಮಾಡದೇ ಕೇವಲ ನೀಗಾ ಇಡಬೇಕು. ಯಾವುದೇ ಮತಗಟ್ಟೆಯಲ್ಲಿ ಸಮಸ್ಯೆಯಾದಲ್ಲಿ ನನ್ನ ಗಮನಕ್ಕೆ ತರಬೇಕು. ತಾವೆಲ್ಲರೂ ಸರಿಯಾದ ರೀತಿಯಲ್ಲಿ ಕೈಜೋಡಿಸಿ ಕೆಲಸ ಮಾಡಿದಲ್ಲಿ ಚುನಾವಣೆಯನ್ನು ನಿಸ್ಪಕ್ಷಪಾತ ಹಾಗೂ ನಿರ್ಭಿತಿಯಿಂದ ನಡೆಸಬಹುದು ಎಂದು ಹೇಳಿದರು.
ಎಲ್ಲಾ ಚುನಾವಣಾ ಸೂಕ್ಷ?? ವೀಕ್ಷಕರು ತಮಗೆ ವಹಿಸಿ ಕೆಲಸವನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸಬೇಕು. ತಾವು ನೀಡುವ ವರದಿಯು ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ಕ್ರಮ ತೆಗೆದುಕೊಳ್ಳಲು ಸಹಕಾರಿ ಆಗುವದರಿಂದ ಮತಗಟ್ಟೆಗೆ ನೇಮಿಸಿದ ಸಿಬ್ಬಂದಿಯ ನಕಲಿನಂತೆ ವರದಿ ನೀಡದೆ ಸರಿಯಾದ ರೀತಿಯಲ್ಲಿ ಮಾಹಿತಿ ನೀಡಬೇಕು ಎಂದರು.
ಜಿಲ್ಲಾ ಚುನಾವಣಾಧಿಕಾರಿ ಗೋವಿಂದರೆಡ್ಡಿ ಮಾತನಾಡಿ. ಯಾರನ್ನು ಚುನಾವಣಾ ವೀಕ್ಷಕರಾಗಿ ನೇಮಿಸಲಾಗುತ್ತದೆಯೋ ಅವರಿಗೆ ಎಸ್.ಎಮ್.ಎಸ್ ಮೂಲಕ ಮಾಹಿತಿ ನೀಡಲಾಗುವುದು. ಯಾರನ್ನು ನೇಮಿಸಲಾಗುತ್ತದೆಯೋ ಅವರು ತಮಗೆ ನಿಯೋಜಿಸಿದ ಮತಗಟ್ಟೆಗೆ ತೆರಳಿ ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
ಚುನಾವಣೆ ದಿನದಂದು ಎಲ್ಲಾ ಸೂಕ್ಷ?? ವೀಕ್ಷಕರು ಅಣಕು ಮತದಾನ ಸರಿಯಾದ ರೀತಿಯಲ್ಲಿ ನಡೆಯುವಂತೆ ನೋಡಿಕೊಳ್ಳಬೇಕು. ಮತ್ತು ಮತಗಟ್ಟೆಯ ಮೂಲಭೂತ ಸೌಕರ್ಯದ ಬಗ್ಗೆ ಮಾಹಿತಿ ಪಡೆಯಬೇಕು. ಎಂದ ಅವರು ಇದೆ ವೀಕ್ಷಕರಿಗೆ ಮೇ 13 ರಂದು ಮತದಾನ ಏಣಿಕೆ ದಿನದಂದು ಏಣಿಕೆ ಕೇಂದ್ರದಲ್ಲಿ ವಿವಿಧ ಕಾರ್ಯಗಳಿಗೆ ನಿಯೋಜಿಸಲಾಗುವುದು ಹಾಗೂ ತರಬೇತಿ ನೀಡಲಾಗುವುದು ಎಂದರು.
ರಾಜ್ಯ ಮಟ್ಟದ ಚುನಾವಣಾ ತರಬೇತಿದಾರ ಡಾ.ಗೌತಮ ಅರಳಿ ಅವರು ಚುನಾವಣಾ ಸೂಕ್ಷ?? ವೀಕ್ಷಕರ ಕಾರ್ಯಚಟುವಟಿಕೆಗಳ ಕುರಿತು ತರಬೇತಿ ನೀಡಿದರು.
ಈ ಸಂದರ್ಭದಲ್ಲಿ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ.ಎಂ, ಅಪರ ಜಿಲ್ಲಾ ಚುನಾವಣಾಧಿಕಾರಿ ಶಿವಕುಮಾರ ಶೀಲವಂತ ಚುನಾವಣಾ ಸೂಕ್ಷ?? ವೀಕ್ಷಕ ತರಬೇತಿಗೆ ಹಾಜರಾದ ಕೇಂದ್ರ ಸರ್ಕಾರದ ವಿವಿಧ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಮತಗಟ್ಟೆಯಲ್ಲಿ ಯಾವುದೇ ಸಮಸ್ಯೆ ಕಂಡುಬಂದಲ್ಲಿ ಚುನಾವಣಾ ಸೂಕ್ಷ?? ವೀಕ್ಷಕರುಗಳು ಸಂಪಕಿರ್Àಸಿಬೇಕಾದ ಸಾಮಾನ್ಯ ವೀಕ್ಷಕರ ಮೊಬೈಲ್ ಸಂಖ್ಯೆಗಳು 47-ಬಸವಕಲ್ಯಾಣ ಹಾಗೂ 48-ಹುಮನ್ನಾಬಾದ ವೀಕ್ಷಕರ ಮೊ.9972980564, 49-ಬೀದರ ದಕ್ಷಿಣ ಹಾಗೂ 50- ಬೀದರ ವೀಕ್ಷಕರ ಮೊ.6366907754, 51-ಭಾಲ್ಕಿ ಹಾಗೂ 52-ಔರಾದ ವೀಕ್ಷಕರ ಮೊ.6366846743 ಗೆ ಸಂಪರ್ಕಿಸುವಂತೆ ಹೇಳಿದರು.