ಚುನಾವಣಾ ಮತಗಟ್ಟೆಯಲ್ಲಿ ಅಂಗವಿಕಲರಿಗೆ ಮೂಲಭೂತ ಸೌಲಭ್ಯ ಒದಗಿಸಿ

ಮುದಗಲ್,ಏ.೨೦- ಲಿಂಗಸುಗೂರು ವಿಧಾನಸಭಾ ಕ್ಷೇತ್ರದ ಚುನಾವಣಾಯ ಅಂಗವಾಗಿ ಲಿಂಗಸೂರು ತಾಲೂಕಿನ ಮುದಗಲ್ ಪಟ್ಟಣದಲ್ಲಿ ಪುರಸಭೆ ನಾಡ ಕಚೇರಿ ಅಂಗನವಾಡಿ ಕೇಂದ್ರ ಹಾಗೂ ವಿವಿಧ ಶಾಲಾ ಕಾಲೇಜುಗಳಲ್ಲಿ ಗುರುತಿಸಲಾದ ಸುಮಾರು ೧೭ ಮತಗಟ್ಟೆ ಕೇಂದ್ರಗಳಿಗೆ ಕರ್ನಾಟಕ ರಾಜ್ಯ ಅಂಗವಿಕಲರ ಆರ್.ಪಿ.ಡಿ. ಟಾಸ್ಕ್ ಪೋರ್ಸ ಸಮಿತಿಯ ವತಿಯಿಂದ ಭೇಟಿ ನೀಡಿದ ಸಂದರ್ಭದಲ್ಲಿ ಹಲವಾರು ಮತಗಟ್ಟೆ ಕೇಂದ್ರಗಳಿಗೆ ನಿರ್ಮಿಸಲಾದ ರಾಂಪಗಳು ದುರಸ್ತಿ ಸ್ಥಿತಿಯಲ್ಲಿರುವುದು ಅವೈಜ್ಞಾನಿಕವಾಗಿರುದು.
ಸುಲಭವಾಗಿ ಮತಗಟ್ಟೆ ಯೊಳಗಡೆ ವೀಲ್ ಚೇರ್ ಹೋಗಲು ಅಡೆತಡೆಗಳು ಇರುವುದು.
ಕೆಲವು ಶಾಲೆಗಳಲ್ಲಿ ವೀಲ್ ಚೇರ್ ಇಲ್ಲದೆ ಇರುವುದು ಕಂಡು ಬಂದಿದ್ದು, ಮತಗಟ್ಟೆ ಕೇಂದ್ರಗಳಿಗೆ ವಿಕಲಚೇತನರು ಬಂದು ಮತಚಲಾಯಿಸಲು. ತೊಂದರೆಯಾಗದಂತೆ ಎಲ್ಲಾ ರೀತಿಯ ಮೂಲ ಸೌಕರ್ಯಗಳನ್ನು ಒದಗಿಸುವುದು ಚುನಾವಣಾ ಆಯೋಗ ಮುಖ್ಯ ಜವಾಬ್ದಾರಿಯಾಗಿದ್ದು ಇದನ್ನು ಖಾತರಿ ಪಡಿಸುವ ನಿಟ್ಟಿನಲ್ಲಿ ಲಿಂಗಸುಗೂರು ತಾಲೂಕ ಚುನಾವಣಾ ಅಧಿಕಾರಗಳು ಲಿಂಗಸುಗೂರು ಮತಕ್ಷೇತ್ರದ ಎಲ್ಲಾ ಮತಗಟ್ಟೆ ಕೇಂದ್ರಗಳನ್ನು ಪರಿಶೀಲನೆ ಮಾಡುವ ಮೂಲಕ ಮತಗಟ್ಟೆ ಕೇಂದ್ರಗಳಲ್ಲಿ ವಿಕಲಚೇತನರಿಗೆ ಸ್ನೇಹಿ ವಾತಾವರಣವನ್ನು ನಿರ್ಮಿಸುವ ರೀತಿಯಲ್ಲಿ ಪೂರಕವಾದ ಎಲ್ಲಾ ಸೌಲಭ್ಯಗಳನ್ನು ಒದಗಿಸಲು ಬೇಕು ಚುನಾವಣೆ ಅಧಿಕಾರಿಳಿಗೆ ಸುರೇಶ ಭಂಡಾರಿ ಮುದಗಲ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕರ್ನಾಟಕ ರಾಜ್ಯ ಅಂಗವಿಕಲರ ಆರ್.ಪಿ.ಡಿ. ಟಾಸ್ಕ್ ಪೋರ್ಸ ಸಮಿತಿ ಒತ್ತಾಯ ಮಾಡಿದರು ಮಾಡಿದರು