ಚುನಾವಣಾ ಬಾಂಡ್ ಸುಪ್ರೀಂ ಸಮ್ಮತಿ

ನವದೆಹಲಿ,ಮಾ.೨೬- ಬರುವ ಏ. ೧ ರಿಂದ ರಾಜಕೀಯ ಪಕ್ಷಗಳು ಚುನಾವಣಾ ಬಾಂಡ್‌ಗಳನ್ನು ನೀಡಬಹುದೆಂದು ಸುಪ್ರೀಂಕೋರ್ಟ್ ಇಂದು ಹೇಳಿದೆ.
ಚುನಾವಣಾ ಬಾಂಡ್‌ಗಳಿಗೆ ಸಂಬಂಧಿಸಿದಂತೆ ಚುನಾವಣಾ ಆಯೋಗದ ವಾದವನ್ನು ಆಧರಿಸಿ ಸುಪ್ರೀಂಕೋರ್ಟ್ ಈ ತೀರ್ಮಾನ ಕೈಗೊಂಡಿದೆ.ರಾಜಕೀಯ ಪಕ್ಷಗಳು ತಮ್ಮ ಚಟುವಟಿಕೆಗಳಿಗಾಗಿ ಹಣದ ಮೂಲಕ ವ್ಯವಹರಿಸುತ್ತವೆ. ಆದರೆ, ಬಾಂಡ್‌ಗಳನ್ನು ಒಳಗೊಂಡ ವಹಿವಾಟಿನಲ್ಲಿ ಹೆಚ್ಚು ಪಾರದರ್ಶಕತೆ ತರಲು ಉತ್ಸುಕವಾಗಿವೆ ಎಂದು ಸಮೀಕ್ಷಾ ಸಮಿತಿ ವರದಿ ಹೇಳಿದೆ.
೨೦೧೮ ರಲ್ಲಿ ಪರಿಚಯಿಸಲಾದ ಚುನಾವಣಾ ಬಾಂಡ್ ಯೋಜನೆ ಮೂಲಕ ಬಾಂಡ್‌ಗಳನ್ನು ಯಾವುದೇ ಅಡೆತಡೆ ಇಲ್ಲದೆ ಮಾರಾಟ ಮಾಡಲಾಗಿದೆ. ಈ ಹಂತದಲ್ಲಿ ಬಾಂಡ್‌ಗಳ ವಿತರಣೆಯನ್ನು ತಡೆಯಲು ಯಾವುದಾ ಸೂಕ್ತ ಕಾರಣ ಇಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಚುನಾವಣೆ ಮತ್ತು ರಾಜಕೀಯ ಸುಧಾರಣೆಗಳ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರೇತರ ಸಂಸ್ಥೆ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರೀ ಫಾಂ (ಎಡಿಆರ್) ಏ. ೧ ಮತ್ತು ಏ. ೧೦ರ ನಡುವೆ ನಿಗದಿತ ಚುನಾವಣಾ ಬಾಂಡ್‌ಗಳ ಮಾರಾಟಕ್ಕೆ ಮಧ್ಯಂತರ ತಡೆ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು.
ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಏ. ೧ ರಿಂದ ಚುನಾವಣಾ ಪಕ್ಷಗಳು ಬಾಂಡ್ ಮಾರಾಟ ಮಾಡಬಹುದೆಂದು ಸೂಚಿಸಿದೆ.
ರಾಜಕೀಯ ಪಕ್ಷಗಳ ಧನ ಸಹಾಯ ಮತ್ತು ಅವರ ಖಾತೆಗಳ ಪರದರ್ಶಕತೆಗೆ ಸಂಬಂಧಿಸಿದ ವಿಷಯಗಳನ್ನು ವಿಂಗಡಿಸುವವರೆಗೆ ಬಾಂಡ್‌ಗಳ ಮಾರಾಟ ನಿರ್ಬಂಧಿಸಲಾಗುತ್ತದೆ. ಪಶ್ಚಿಮಬಂಗಾಳ, ಅಸ್ಸಾಂ ಮತ್ತು ಇತರೆ ರಾಜ್ಯಗಳಲ್ಲಿ ನಡೆಯುವ ವಿಧಾನಸಭಾ ಚುನಾವಣೆಗಳಿಗೆ ಮುಂಚಿತವಾಗಿ ಕಂಪನಿಗಳು ರಾಜಕೀಯ ಬೊಕ್ಕಸವನ್ನು ತುಂಬಲಿದೆ ಎಂಬ ಅನುಮಾನವನ್ನು ಹುಟ್ಟು ಹಾಕಲಾಗಿತ್ತು.
ಎಡಿಆರ್ ಪರ ಹಿರಿಯ ವಕೀಲರಾದ ಪ್ರಶಾಂತ್ ಭೂಷಣ್, ಆಡಳಿತ ಪಕ್ಷವು ದೇಣಿಗೆ ನೀಡುವ ನೆಪದಲ್ಲಿ ಲಂಚ ಪಡೆಯುವ ಸಾಧನವಾಗಿ ಬಾಂಡ್ ವ್ಯವಸ್ಥೆ ಬದಲಾಗಿದೆ ಎಂದು ವಾದ ಮಂಡಿಸಿದ್ದರು. ಈ ಬಾಂಡ್‌ಗಳ ವ್ಯವಸ್ಥೆ ಹಣಕಾಸಿನ ಹಗರಣಗಳಿಗೆ ಒಂದು ರೀತಿಯ ಆಯುಧ ಹಾಗೂ ಮಾಧ್ಯಮವಾಗಿದೆ ಎಂದು ಆರ್‌ಬಿಐ ಹೇಳಿರುವುದಾಗಿ ಭೂಷಣ್ ವಾದಿಸಿದರು.
ಬಾಂಡ್‌ಗಳು ಪಕ್ಷಗಳ ಅಧಿಕೃತ ನಿಲುವಿಗೆ ವಿರುದ್ಧವಾಗಿ ಕಪ್ಪು ಹಣದ ಬಗ್ಗೆ ಸರ್ಕಾರದ ನೈಜ ವಿಧಾನಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದ್ದರು. ಇಂತಹ ಅನುಮಾನಗಳಿಗೆ ಪ್ರತಿಕ್ರಿಯಿಸಿರುವ ಮುಖ್ಯ ನ್ಯಾಯಮೂರ್ತಿ ಶರತ್‌ಬೋಬ್ಡೆ ಅವರು ಭೂಷಣ್ ಅವರ ವಾದಗಳು ರಾಜಕೀಯ ನೈತೀಕತೆಗೆ ಹೆಚ್ಚು ಸಂಬಂಧಿಸಿವೆ ಎಂದು ಹೇಳಿದ್ದಾರೆ.