ಚುನಾವಣಾ ಬಾಂಡ್ ಮಾಹಿತಿ ನೀಡಲು ಎಸ್‌ಬಿಐ ತಯಾರಿ

ನವದೆಹಲಿ,ಮಾ.೧೨- ವಿವಿಧ ರಾಜಕೀಯ ಪಕ್ಷಗಳ ಹೆಸರಲ್ಲಿ ಚುನಾವಣಾ ದೇಣಿಗೆ ನೀಡಲು ಚುನಾವಣಾ ಬಾಂಡ್ ಖರೀದಿ ಮಾಡಿದವರ ವಿವರಗಳನ್ನು ಇಂದು ಸಂಜೆ ಒಳಗೆ ಸಲ್ಲಿಸಲು ಭಾರತೀಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಿದ್ಧತೆ ಮಾಡಿಕೊಂಡಿದೆ.
ಸುಪ್ರೀಂಕೋರ್ಟ್ ಗುಡುವು ಹಿನ್ನೆಲೆಯಲ್ಲಿ ಇಂದು ಸಂಜೆ ೫ ಗಂಟೆ ಒಳಗೆ ಖರೀದಿ ಮಾಡಿರುವ ಎಲ್ಲರ ವಿವರಗಳನ್ನು ಮುಚ್ಚಿದ ಲಕೋಟೆಯಲ್ಲಿ ಕೇಂದ್ರ ಚುನಾವಣಾ ಆಯೋಗಕ್ಕೆ ಸಲ್ಲಿಸಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ
ಸಂಜೆಯ ಗಡುವಿನ ಒಳಗೆ ಮಾಹಿತಿ ನೀಡಲು ಬ್ಯಾಂಕ್ ವಿಫಲವಾದರೆ ಎಸ್‌ಬಿಐ ಅಧ್ಯಕ್ಷ ದಿನೇಶ್ ಕುಮಾರ್ ಖಾರಾ ಅವರನ್ನು ನಿಂದನೆ ಪ್ರಕ್ರಿಯೆಗೆ ಒಳಪಡಿಸುವುದಾಗಿ ಸುಪ್ರೀಂಕೋರ್ಟ್ ನ್ಯಾಯಪೀಠ ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ನ್ಯಾಯಾಂಗ ನಿಂದನೆಗೆ ಅವಕಾಶ ಮಾಡಿಕೊಡಬಾರದು ಎನ್ನುವ ಉದ್ದೇಶದಿಂದ ಸಮಗ್ರ ಮಾಹಿತಿ ಸಲ್ಲಿಸಲು ಸಜ್ಜಾಗಿದೆ.
ನಿಗದಿತ ಗಡುವಿನ ಗಡುವಿನ ಒಳಗೆ ಚುನಾವಣಾ ಬಾಂಡ್ ವಿವರ ಸಲ್ಲಿಸಲು ಎಸ್ ಬಿಐ ವಿಫಲವಾದರೆ ನ್ಯಾಯಾಂಗ ನಿಂದನೆ ಪ್ರಕರಣ ಎದುರಿಸುವ ಅಡಕತ್ತರಿಗೆ ಸಿಲುಕಿದ್ದು ಅನಿವಾರ್ಯವಾಗಿ ಸಂಜೆ ೫ ಗಂಟೆ ಒಳಗೆ ಬಾಂಡ್ ಖರೀದಿ ಮಾಡಿದವರ ವಿವರ ಸಲ್ಲಿಸುವುದು ಕಡ್ಡಾಯವಾಗಿರುವ ಹಿನ್ನೆಲೆಯಲ್ಲಿ ಎಸ್ ಬಿಐ ಮಾಹಿತಿ ಸಂಗ್ರಹವನ್ನು ಆಯೋಗಕ್ಕೆ ನೀಡಲು ಅಂಕಿಅಂಶಗಳನ್ನು ಸಂಗ್ರಹಿಸಿ ವಿವರಗಳನ್ನು ನೀಡಲಿದೆ.
ಏಪ್ರಿಲ್ ೨೦೧೯ ಮತ್ತು ಫೆಬ್ರವರಿ ೨೦೨೪ ರ ನಡುವೆ ಚುನಾವಣಾ ಬಾಂಡ್‌ಗಳ ಮೂಲಕ ಯಾರು ಯಾವ ರಾಜಕೀಯ ಪಕ್ಷಕ್ಕೆ ಅನಾಮಧೇಯವಾಗಿ ಎಷ್ಟು ದೇಣಿಗೆ ನೀಡಿದ್ದಾರೆ ಎಂಬ ವಿವರಗಳನ್ನು ಸಂಜೆ ೫ ಗಂಟೆಯೊಳಗೆ ಭಾರತೀಯ ಚುನಾವಣಾ ಆಯೋಗಕ್ಕೆ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಎಸ್‌ಬಿಐಗೆ ಆದೇಶಿಸಿ ಎಸ್ ಬಿಐ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ನಿನ್ನೆ ವಜಾಗೊಳಿಸಿತ್ತು.
ಮುಖ್ಯನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ನೇತೃತ್ವದ ಐವರು ನ್ಯಾಯಾಧೀಶರ ಸಾಂವಿಧಾನಿಕ ಪೀಠ ಚುನಾವಣಾ ಬಾಂಡ್‌ಗಳ ಮೂಲಕ ಪಡೆದ ಹಣದ ಕುರಿತು ರಾಜಕೀಯ ಪಕ್ಷಗಳು ಈಗಾಗಲೇ ಒದಗಿಸಿದ ಮಾಹಿತಿಯನ್ನು ತಕ್ಷಣವೇ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸುವಂತೆ ಚುನಾವಣಾ ಆಯೋಗಕ್ಕೆ ಸೂಚಿಸಿದೆ.
೨೦೧೯ಡಿ ಏಪ್ರಿಲ್ ೧೨ ರಂದು ಸುಪ್ರೀಂಕೋರ್ಟ್ ಮಧ್ಯಂತರ ಆದೇಶದ ನಂತರ ಈ ಡೇಟಾ ಒದಗಿಸಲಾಗಿದೆ. ಮಾರ್ಚ್ ೧೫ ರಂದು ಸಂಜೆ ೫ ಗಂಟೆಯೊಳಗೆ ಎಸ್‌ಬಿಐ ತನ್ನ ವೆಬ್‌ಸೈಟ್‌ನಲ್ಲಿ ಸಲ್ಲಿಸಬೇಕಾದ ಎಲ್ಲಾ ಡೇಟಾವನ್ನು ಅಪ್‌ಲೋಡ್ ಮಾಡಲು ಚುನಾವಣಾ ಸಮಿತಿಗೆ ಸೂಚನೆ ನೀಡಲಾಗಿದೆ