ಚುನಾವಣಾ ಪ್ರಣಾಳಿಕೆಯಲ್ಲಿ ಬೀದರ ಜಿಲ್ಲೆಯ ಸವಾರ್ಂಗೀಣ ರಚನಾತ್ಮಕ ಪ್ರಗತಿಗೆ ಒತ್ತು ನೀಡಲಿ

ಬೀದರ,ಏ.6- ಬರುವ 2023ರ ವಿಧಾನ ಸಭಾ ಚುನಾವಣೆಗೆ ಸಂಬಂಧಿಸಿದಂತೆ, ರಾಷ್ಟ್ರೀಯ ಪಕ್ಷಗಳು ಮತ್ತು ಪ್ರಾದೇಶಿಕ ಪಕ್ಷಗಳು ತಮ್ಮ ತಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಬೀದರ ಜಿಲ್ಲೆಯ ಸವಾರ್ಂಗೀಣ ರಚನಾತ್ಮಕ ಪ್ರಗತಿಗೆ ಸಂಬಂಧಿಸಿದ ಮಹತ್ವದ ಜ್ವಲಂತ ಸಮಸ್ಯೆಗಳನ್ನು ಘೋಷಣಾ ಪತ್ರದಲ್ಲಿ ಸೇರಿಸಿ ಮತಯಾಚನೆ ಮಾಡಲು ಕಾರಂಜಾ ಮುಳುಗಡೆ ಸಂತ್ರಸ್ತರ ಹಿತರಕ್ಷಣಾ ಸಮಿತಿ ಮತ್ತು ಬೀದರ ಸಮಗ್ರ ಅಭಿವೃದ್ಧಿ ಜಂಟಿ ಕ್ರೀಯಾ ಸಮಿತಿ ರಾಜಕೀಯ ಪಕ್ಷಗಳಿಗೆ ಮನವಿ ಮಾಡಿಕೊಂಡಿವೆ.
ದಶಕಗಳ ಬೇಡಿಕೆಯಾದ ಬೀದರ ಜಿಲ್ಲೆಯ ಜ್ವಲಂತ ಸಮಸ್ಯೆಯಾದ ಕಾರಂಜಾ ನೀರಾವರಿ ಯೋಜನೆಗೆ ಜಮೀನು ನೀಡಿದ ರೈತ ಸಂತ್ರಸ್ತರಿಗೆ ವೈಜ್ಞಾನಿಕ ಮಾನದಂಡದಂತೆ, ಸಮರ್ಪಕ ಪರಿಹಾರ ಹಣ ನೀಡುವ ಬೇಡಿಕೆ. ಗೋದಾವರಿ ಜಲಾನಯನ ಪ್ರದೇಶದ ನಮ್ಮ ಪಾಲಿನ ಬಾಕಿ ಉಳಿದಿರುವ ನೀರು ಕಾಲಮಿತಿಯಲ್ಲಿ ಬಳಸಿಕೊಳ್ಳಲು ಯೋಜನೆ ರೂಪಿಸಬೇಕು.
ಕಾರಂಜಾ ಅನೆಕಟ್ಟಿನ ನೀರು ಬೀದರ ಜಿಲ್ಲೆಯ ಜನತೆಗೆ ಕುಡಿಯಲು ನೀರು ಪೂರೈಸಿರುವಂತೆ ಈ ಯೋಜನೆಯ ಉದ್ದೇಶದಂತೆ, ಕನಿಷ್ಟ 82 ಸಾವಿರ ಎಕರೆ ರೈತರ ಜಮೀನಿಗೆ ಕಾಲಮಿತಿಯಲ್ಲಿ ನೀರು ನೀಡಿ ರೈತರ ಕನಸು ನನಸು ಮಾಡಬೇಕು.371ನೇ(ಜೆ) ಕಲಂ ಸಂವಿಧಾನ ತಿದ್ದುಪಡಿಯ ಪರಿಣಾಮಕಾರಿ ಅನುಷ್ಠಾನಕ್ಕೆ ಪ್ರತ್ಯೇಕ ಸಚಿವಾಲಯ ಸ್ಥಾಪನೆ ಮಾಡುವುದು.
ಕೆ.ಕೆ.ಆರ್.ಡಿ.ಬಿ.ಯಿಂದ ಕಾಲಮಿತಿಯ ವೈಜ್ಞಾನಿಕ ಕ್ರೀಯಾ ಯೋಜನೆಯನ್ನು ರೂಪಿಸಿ ಪ್ರಾದೇಶಿಕ ಅಸಮತೋಲನೆ ನಿವಾರಣೆಗೆ ಕ್ರಮ ಕೈಗೊಳ್ಳುವುದು. ಬೀದರ ಜಿಲ್ಲೆಯ ಆಯಾ ತಾಲ್ಲೂಕಿನ ಫಲವತ್ತಾದ ಭೂಮಿಯಲ್ಲಿ ಕೃಷಿಗೆ ಉತ್ತೇಜನ ನೀಡಿ ನಿರುದ್ಯೋಗಿ ಯುವಕರಿಗೆ ಉದ್ಯೋಗಗಳು ಸೃಷ್ಟಿ ಮಾಡಬೇಕು. ಅದರಂತೆ ಕೃಷಿಯೇತರ ಕ್ಷೇತ್ರದಲ್ಲಿ ನೂರಾರು ಬಗೆಯ ವಸ್ತುಗಳ ತಯಾರಿಕಾ ಕಾರ್ಖಾನೆಗಳನ್ನು ಸ್ಥಾಪಿಸಿ ಕೃಷಿಯೇತರ ಉದ್ಯೋಗಗಳು ಸೃಷ್ಟಿ ಮಾಡಬೇಕು. ಈಗಾಗಲೇ ಕೇಂದ್ರ ಸರಕಾರ ಮಂಜೂರು ಮಾಡಿರುವಂತೆ ಬೀದರ-ಕಲಬುರಗಿಯಲ್ಲಿ ನೀಮ್ಝ್ ಸ್ಥಾಪನೆಗೆ ರಾಜ್ಯ ಸರಕಾರ ಇಚ್ಛಾಶಕ್ತಿ ವ್ಯಕ್ತಪಡಿಸಿ ಲಕ್ಷಾಂತರ ಉದ್ಯೋಗ ಸೃಷ್ಟಿಗೆ ಕ್ರಮ ಕೈಗೊಳ್ಳಬೇಕು. ಬೀದರ ಜಿಲ್ಲೆಯ ಬಸವಕಲ್ಯಾಣದಲ್ಲಿ ಆಟೋಪಾರ್ಕ ಸ್ಥಾಪನೆ ಮಾಡಿ ಸಹಸ್ರಾರು ಉದ್ಯೋಗಗಳ ಸೃಷ್ಟಿಗೆ ಕ್ರಮ ಕೈಗೊಳ್ಳಬೇಕು.ಬೀದರ ಜಿಲ್ಲೆಯಲ್ಲಿ ಸೋಲಾರ ಪಾರ್ಕ ಸ್ಥಾಪನೆ ಮಾಡಿ ಉದ್ಯೋಗ ಸೃಷ್ಟಿಗೆ ಕ್ರಮ ಕೈಗೊಳ್ಲಬೇಕು.
ಜಗತ್ತಿಗೆ ಬಸವಾದಿ ಶರಣರ ನೇತೃತ್ವದಲ್ಲಿ ಪಾರ್ಲಿಮೆಂಟ್ ನೀಡಿದ ಬಸವಕಲ್ಯಾಣನ್ನು ಜಿಲ್ಲೆಯನ್ನಾಗಿ ಘೋಷಣೆ ಮಾಡಬೇಕು. ಬೀದರ ಜಿಲ್ಲೆಯ ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸಿ ರಾಷ್ಟ್ರ ಮತ್ತು ಜಾಗತಿಕ ಮಟ್ಟಕ್ಕೇರಿಸಲು ಸಮರೋಪಾದಿಯ ಕ್ರಮಗಳು ಕೈಗೊಳ್ಳಬೇಕು.ಈಗಾಗಲೇ ಮಂಜೂರಾಗಿರುವ ಮಹಿಬೂಬನಗರ-ಕೊಡಂಗಲ್-ತಾಂಡೂರು-ಮನ್ನಎಖ್ಖೇಳಿ ಎನ್.ಎಚ್-165ಎನ್ ರಾಷ್ಟ್ರೀಯ ಹೆದ್ದಾರಿ ಬೀದರ ವರೆಗೆ ಮಂಜೂರಾತಿ ನೀಡಬೇಕು.
ಬೀದರ ಗ್ರಾಮೀಣ ಜನರಿಗೆ ಅನುಕೂಲವಾಗಲು ಮಂಗಲಗಿ, ಖೇಣಿ ರಂಜೋಳ್, ಹುಚಕನಳ್ಳಿ, ರೇಕುಳಗಿ, ಶಿರ್ಸಿ, ಔರಾದ, ಕಮಠಾಣವರೆಗೆ ಹೆದ್ದಾರಿ ನಿರ್ಮಾಣ ಮಾಡಿ ಜಿಲ್ಲಾ ಕೇಂದ್ರಕ್ಕೆ ಗ್ರಾಮೀಣ ಜನರಿಗೆ ಬರಲು ಅನುಕೂಲ ಮಾಡಿಕೊಡಬೇಕು. ಬಸವಕಲ್ಯಾಣ, ಹುಮನಾಬಾದ, ಚಿಟಗುಪ್ಪ, ಚಿಂಚೋಳಿ ಮಾರ್ಗವಾಗಿ ತಾಂಡೂರವರೆಗೆ ಹೊಸ ರೈಲ್ವೆ ಮಾರ್ಗ ಮಂಜೂರು ಮಾಡಬೇಕು. ಅದರಂತೆ ಬಸವಕಲ್ಯಾಣ, ಉಮರ್ಗಾ, ನಳದುರ್ಗ, ತುಳಜಾಪುರ ವರೆಗೆ ಹೊಸ ರೈಲು ಮಾರ್ಗ ಮಂಜೂರು ಮಾಡಿ, ಬೀದರ ಜಿಲ್ಲೆಯ ಜನತೆಗೆ ತುಳಜಾಪುರಕ್ಕೆ ಹೋಗಲು ಅನುಕೂಲ ಮಾಡಿಕೊಡಬೇಕು.
ಲಕ್ಷಾಂತರ ಭಕ್ತರಿಗೆ ದರ್ಶನ ಪಡೆಯಲು ಮತ್ತು ಸಹಸ್ರರು ಉದ್ಯೋಗಗಳನ್ನು ಸೃಷ್ಟಿಸಲು ಬೀದರ ನರಸಿಂಹ ಝರ್ನಾ ದೇವಸ್ಥಾನ, ಪಾಪನಾಕ್ ದೇವಸ್ಥಾನ, ಹುಮನಾಬಾದ ವೀರಭದ್ರೇಶ್ವರ ದೇವಸ್ಥಾನಗಳ ವಿಶೇಷ ಅಭಿವೃದ್ಧಿ, ಆಧುನಿಕರಣ ಮತ್ತು ಸೌಂದರ್ಯಿಕರಣ ಕಾಮಗಾರಿಗಳು ಸೇರಿದಂತೆ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳ ವ್ಯವಸ್ಥೆಗಳು ಕೈಗೊಳ್ಳಬೇಕು
ನಗರದ ಕರ್ನಾಟಕ ಸಾಹಿತ್ಯ ಸಂಘದ ಸಭಾಂಗಣದಲ್ಲಿ ಜಂಟಿ ಪತ್ರಿಕಾ ಗೋಷ್ಠಿ ನಡೆಸಿದ ಕಲ್ಯಾಣ ಕರ್ನಾಟಕ ಹಿರಿಯ ಹೋರಾಟಗಾರರಾದ ಲಕ್ಷ್ಮಣ ದಸ್ತಿ ಅವರು ಮನವಿ ಮಾಡಿದರು.
ಪತ್ರಿಕೆಗೋಷ್ಠಿಯಲ್ಲಿ ಶಾಂತಪ್ಪ ಕಾರ್ಬಸ್ಗೆ ಕಲ್ಬುರ್ಗಿ, ರೋಹನ್ ಕುಮಾರ್, ನಾಗ್ ಶೆಟ್ಟಿ ಹಚ್ಚಿ, ಭೀಮ್ ರೆಡ್ಡಿ, ಕೇದಾರನಾಥ್ ಪಾಟೀಲ್, ಮೋಹನ್ ರಾವ್, ರಾಜಪ್ಪ ಕಮಲ್ ಪುರ್, ರಾಜಶೇಖರ್, ಕಲ್ಯಾಣ್ ರಾವ್ ಚನ್ನಶೆಟ್ಟಿ, ಈಶ್ವರಯ್ಯ ಸ್ವಾಮಿ , ಸೂರ್ಯಕಾಂತ್ ಕುಲಕರ್ಣಿ ಉಪಸ್ಥಿತರಿದ್ದರು.
ಕಾರಂಜಾ ಮುಳುಗಡೆ ರೈತ ಹಿತರಕ್ಷನಾ ಸಮಿತಿ ಅಧ್ಯಕ್ಷ ಚಂದ್ರಶೇಖರ ಪಾಟೀಲ ಹುಚಕನಳ್ಳಿ, ರೈತ ಹಿತರಕ್ಷನಾ ಸಮಿತಿ ಅಧ್ಯಕ್ಷ ಚಂದ್ರಶೇಖರ ಪಾಟೀಲ ಹುಚಕನಳ್ಳಿ
ಅಧ್ಯಕ್ಷರು, ಕಾರಂಜಾ ಮುಳುಗಡೆ ರೈತ ಹಿತರಕ್ಷನಾ ಸಮಿತಿ ಮತ್ತು ಕ್ರೀಯಾ ಸದಸ್ಯರು ಬೀದರ ಸಮಗ್ರ ಅಭಿವೃದ್ಧಿ ಜಂಟಿ ಕ್ರೀಯಾ ಸಮಿತಿ, ಬೀದರ ಇದ್ದರು.