ಚುನಾವಣಾ ಪ್ರಚಾರಕ್ಕೆ ಕೊಡ್ತೀವಂತ ಕರೀತಾರೆ….ಅಲ್ಪಸ್ವಲ್ಪ ಕೊಟ್ಟು ಕಳಿಸುತ್ತಾರ


ಎನ್.‌ವೀರಭದ್ರಗೌಡ
ಬಳ್ಳಾರಿ: ಚುನಾವಣಾ ಆಯೋಗದ ಆಯುಕ್ತರೇ ಹೇಳಿರುವಂತೆ ಕರ್ನಾಟಕದಲ್ಲಿ ಚುನಾವಣೆ ನಡೆಸಲು ಭದ್ರತೆಯ ಗೊಂದಲ ಇಲ್ಲ. ಆದರೆ ಹಣದ ಹರಿದಾಟ ಮಾತ್ರ ಹೆಚ್ಚು ಇದಕ್ಕೆ ಕಡಿವಾಣ ಬೇಕು ಎಂದು ಹೇಳಿದ್ದರೂ, ಅದು‌ ನಿಯಂತ್ರಣಕ್ಕೆ  ಬಂದ ಯಾವ ಲಕ್ಷಣಗಳೂ ಇಲ್ಲ.
ಅದರಲ್ಲೂ ಗಣಿನಾಡು ಬಳ್ಳಾರಿ ನಗರ ಕ್ಷೇತ್ರದಲ್ಲಿ ಕೋಟ್ಯಾಧಿಪತಿಗಳೇ ಸ್ಪರ್ಧಾ ಕಣದಲ್ಲಿದ್ದು ಹಣದ ಹರಿದಾಟ ಮಾತ್ರ ಸರಾಗವಾಗಿ ನಡೆಯುತ್ತಿದೆ.
ಸಧ್ಯಕ್ಕೆ ಮತಕ್ಕಾಗಿ ಹಣ ಹರಿದಿಲ್ಲವಾದರೂ, ಪ್ರಚಾರಕ್ಕಾಗಿ ಹರಿಯುತ್ತಿದೆ.
ರಾಷ್ಟ್ರೀಯ ಪಕ್ಷದ ಪರವಾಗಿ ಓಣಿ ಓಣಿಗಳಲ್ಲಿ ಸಂಚರಿಸಿ ನಮ್ಮ ಅಭ್ಯರ್ಥಿಗೆ ಮತ ನೀಡಿ ಎಂದು ಪಕ್ಷದ ಬಾವುಟ ಹಿಡಿದು, ಘೋಷಣೆ ಕೂಗುತ್ತ ಸಾಗುವ ಮಹಿಳೆಯರಿಗೆ ಕೆಲ ವಾರ್ಡುಗಳಲ್ಲಿ ದಿನಕ್ಕೆ ಮೂರು‌ನೂರು, ಕೆಲ ವಾರ್ಡುಗಳಲ್ಲಿ ಎರೆಡು ನೂರು ನೀಡುತ್ತಿದೆಯಂತೆ.
ಬೆಳಿಗ್ಗೆ ಬಂದರೆ ಅರ್ಧ, ಸಂಜೆ ಬಂದರೆ ಉಳಿದ ಅರ್ಧ ಕೊಡುತ್ತಾರಂತೆ. ಅಭ್ಯರ್ಥಿ ಹಿಂದೆ ಹೋದರೂ ಸಹ ಅದೇ ರೀತಿಯಂತೆ. ಕೆಲ ವಾರ್ಡುಗಳಲ್ಲಿ ಬೆಳಗಿನ ತಿಂಡಿ ಸಹ ನೀಡಲಾಗಿದೆಯಂತೆ.
ಬೆಳಿಗ್ಗೆ 8 ರಿಂದ 11.30 , 12 ರ ವರಗೆ ಮತ್ತು ಸಂಜೆ 5 ರಿಂದ 8 ರ ವರಗೆ ಓಡಾಡಬೇಕು.
ಇದರಲ್ಲಿ ವೃದ್ದರು, ಯುವತಿಯರು, ಕೆಲ ಕಡೆ ಮಕ್ಕಳೂ ಇರುತ್ತಾರೆ.
ಹಣ ನೀಡುವ ಜವಾಬ್ದಾರಿ ಆಯಾ ವಾರ್ಡಿನ  ಮುಖಂಡರು, ಪಾಲಿಕೆ ಪ್ರತಿನಿಧಿಸುವರು ಎಂದು ಹೇಳಲಾಗಿದೆ.
ಇನ್ನು ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಪ್ರಾದೇಶಿಕ ಪಕ್ಷದವರು ದಿನಕ್ಕೆ ಎರೆಡು ನೂರು ರೂಪಾಯಿ ನೀಡುತ್ತಿರುವ ಬಗ್ಗೆ ಮಾಹಿತಿ‌ ಇದ್ದು. ಹಣ ಸರಿಯಾದ ರೀತಿಯಲ್ಲಿ ಮುಟ್ಟುತ್ತಿದೆಯಂತೆ. ಆದರೆ ರಾಷ್ಟ್ರೀಯ ಪಕ್ಷದಿಂದ ಕೆಲ ಕಡೆ ಲಿಉಡರ್ ಗಳು ವಂಚನೆ ಮಾಡುತ್ತಿರುವ ಬಗ್ಗೆ ದೂರುಗಳಿವೆ.
ಸಿದ್ದಾರ್ಥ ನಗರದ, ಕಾಲುವೆ ಮೇಲಿನ ನಿವಾಸಿಗಳಿಗೆ ನಿನ್ನೆ ಉಪಹಾರ ನೀಡಿ ಹಣ ಇಲ್ಲವೆಂದರಂತೆ. ಈ ಬಗ್ಗೆ ಸಂಜೆವಾಣಿ ಮುಂದೆ ತಮ್ಮ ಅಳಲು ತೋಡಿಕೊಂಡರಿ. ಈ ರೀತಿ ಅನೇಕ ಕಡೆ ಕೇಳಿ ಬರುತ್ತಿದೆ.
ಮತ್ತೊಂದು ರಾಷ್ಟ್ರೀಯ ಪಕ್ಷ ಮಾತ್ರ ನಾವು ಆಭಿವೃದ್ದಿ ಮಾಡಿದೆ, ಜನರಿಗೆ ಒಟ್ಟಾ ನೀಡಿದೆ. ದೇಶ ಸಂರಕ್ಷಣೆ ಮಾಡುತ್ತದೆಂದು ಈ ರೀತಿಯ ಹಣ ಹಂಚಿ‌ ಜನರಿಂದ ಘೋಣಣೆ ಕೂಗಿಸುವ ಪ್ರಯತ್ನ‌ ಮಾತ್ರ ಈ ಚುನಾವಣೆಯಲ್ಲಿ ಕಂಡು ಬಂದಿಲ್ಲ.
ಇನ್ನು ಕತ್ತಲ ರಾತ್ರಿ ಮತದಾನದ ಮುನ್ನಾದಿನ  ಮತದಾರನ ಬೆಲೆ ಆಯಾ ಪಕ್ಷಗಳಿಂದ ನಿರ್ಧಾರವಾಗುತ್ತಂತೆ. ಅದೂ ಇಈ ಬಾರಿ ಒಂದು ಸಾವಿರದ ಮೇಲೆಯೇ ಅಂತೆ. ಅದಕ್ಕಾಗಿ ಮನೆ ಮನೆಗೆ ಆಯಾ ಪಕ್ಷದ ಕಾರ್ಯಕರ್ತರು ಚೀಟಿ ನೀಡಿದ್ದಾರೆ. ಈ ಬಾರಿಯ ಮತ  ಮೌಲ್ಯ ಏಂಬುದನ್ನು ಮೇ 10 ಕ್ಕೆ ಅರಿಯಬಹುದಾಗಿದೆ.