ಚುನಾವಣಾ ನೀತಿ ಸಂಹಿತೆ ಮುಗಿದ ನಂತರ ರೇಣುಕಾ ಟಾಕೀಸ್ ರಸ್ತೆ ಅಗಲೀಕರಣ

ಕೊಟ್ಟೂರು ನ 09 :ಪಟ್ಟಣದ ರೇಣುಕಾ ಟಾಕೀಸ್ ರಸ್ತೆಯ ಅಗಲೀಕರಣಕ್ಕೆ ಕ್ಷಣಗಣನೆ ಆರಂಭವಾಗಿದೆ. ಶಿಕ್ಷಕರ ಕ್ಷೇತ್ರದ ಚುನಾವಣೆಯ ಫಲಿತಾಂಶ ಬಂದತಕ್ಷಣ ಈ ಕಾಮಗಾರಿ ಆರಂಭವಾಗಲಿದೆ. ಈಗಾಗಲೇ ಟೆಂಡರ್ ಪ್ರಕ್ರಿಯೇ ಮುಗಿದಿದ್ದು ಚುನಾವಣನೀತಿ ಸಂಹಿತೆ ಕಾರಣ ಕಾಮಗಾರಿ ಆರಂಭವಾಗಿಲ್ಲ. ಪಟ್ಟಣದ ಅಭಿವೃದ್ದಿಯ ದೃಷ್ಟಿಯಿಂದ ಸರ್ವಾಜನಿಕರು ಅಕ್ರಮಿಸಿಕೊಂಡಿದ್ದು ರಸ್ತೆಯನ್ನು ತೆರವುಗೊಳಿಸುವ ಕಾರ್ಯಶೀಘ್ರ ಆರಂಭಗೊಳ್ಳಲಿದೆ.ಈ ಮೂಲಕ ಬಹುವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ರಸ್ತೆ ಅಗಲೀಕರಣಕ್ಕೆ ಮರಜೀವ ಬಂದಿದೆ. ಈ ಕಾಮಗಾರಿಯನ್ನು ಯಾವದುಷ್ಟಶಕ್ತಿಗಳು ತಡೆಯಲು ಸಾಧ್ಯವಿಲ್ಲ.