ಚುನಾವಣಾ ನೀತಿ ಸಂಹಿತೆ ಪಾಲನೆ ಕಡ್ಡಾಯ: ಚುನಾವಣಾಧಿಕಾರಿ

ಟಿ.ನರಸೀಪುರ: ಏ.06:- ಇದೇ ಮೇ 13ರಂದು ವಿಧಾನ ಸಭಾ ಚುನಾವಣೆ ನಿಗದಿಯಾದ ಹಿನ್ನೆಲೆಯಲ್ಲಿ ಜಾರಿಯಲ್ಲಿರುವ ಮಾದರಿ ಚುನಾವಣಾ ನೀತಿ ಸಂಹಿತೆಯನ್ನು ಎಲ್ಲ ಪಕ್ಷದ ಅಭ್ಯರ್ಥಿಗಳು,ರಾಜಕೀಯ ಮುಖಂಡರು,ಪ್ರಿಂಟಿಂಗ್ ಪ್ರೆಸ್, ಕಲ್ಯಾಣ ಮಂಟಪದ ಮಾಲೀಕರು ಮತ್ತು ಸಂಹಿತೆಗೆ ಒಳಪಡುವ ಎಲ್ಲರು ಪಾಲನೆ ಮಾಡುವುದು ಕಡ್ಡಾಯ ಎಂದು ತಿ.ನರಸೀಪುರ ವಿಧಾನ ಸಭಾ ಕ್ಷೇತ್ರದ ಚುನಾವಣಾಧಿಕಾರಿ ಎಂ.ಎಸ್.ಸೋಮಶೇಖರ್ ತಿಳಿಸಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪ್ರಮುಖ ರಾಜಕೀಯ ಪಕ್ಷದ ಅಧ್ಯಕ್ಷರು, ಕಲ್ಯಾಣ ಮಂಟಪ ಮತ್ತು ಪ್ರಿಂಟಿಂಗ್ ಪ್ರೆಸ್ ಗಳ ಮಾಲೀಕರಿಗೆ ಮಾದರಿ ನೀತಿ ಸಂಹಿತೆ ಕುರಿತು ಮಾಹಿತಿ ನೀಡಿದರು.ಮಾದರಿ ಚುನಾವಣಾ ನೀತಿ ಸಂಹಿತೆ ಮಾರ್ಚ್ 29ರಿಂದಲೇ ಜಾರಿಯಾಗಿದ್ದು,ಚುನಾವಣಾ ಆಯೋಗದ ನಿರ್ದೇಶನಗಳನ್ನು ಕಡ್ಡಾಯವಾಗಿ ಪಾಲಿಸತಕ್ಕದ್ದು.ನಿಯಮ ಮೀರಿದರೆ ಕಾರಾಗೃಹ ಶಿಕ್ಷೆ ಮತ್ತು ದಂಡ ತೆರಬೇಕಾಗುತ್ತದೆ ಎಂದು ಮಾಹಿತಿ ನೀಡಿದರು.
ಚುನಾವಣೆಯನ್ನು ಸುಗಮ ,ಪಾರದರ್ಶಕ ಮತ್ತು ನಿರ್ಭಿತಿಯಿಂದ ನಡೆಸಲು ಆಯೋಗ ಕಾರ್ಯಪ್ರವೃತ್ತವಾಗಿದ್ದು,ರಾಜಕೀಯ ಪಕ್ಷಗಳ ಅಭ್ಯರ್ಥಿಗಳು,ನಾಯಕರು ನೀತಿ ಸಂಹಿತೆಯನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು.ಉಲ್ಲಂಘನೆ ಮಾಡಿದಲ್ಲಿ ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ತುರ್ತು ಕ್ರಮ ಜರುಗಿಸಲು ತಾವು ಸನ್ನದ್ಧರಾಗಿರುವುದಾಗಿ ತಿಳಿಸಿದರು.
ಚುನಾವಣಾ ಅಕ್ರಮಗಳನ್ನು ತಡೆಯುವ ನಿಟ್ಟಿನಲ್ಲಿ ಸೀವಿಜಿಯಲ್ ಅಪ್ ಹೊರತಂದಿದ್ದು, ಇದರ ಮುಖೇನ ಚುನಾವಣಾ ಅಕ್ರಮಗಳನ್ನು ರೆಕಾರ್ಡ್ ಮಾಡಿ ನೇರ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಕಳುಹಿಸಬಹುದು ಎಂದರು.
ರಾಜಕೀಯ ಪಕ್ಷಗಳ ಪ್ರಚಾರಕ್ಕೆ ಚುನಾವಣಾ ಆಯೋಗದ ಅನುಮತಿ ಕಡ್ಡಾಯ.’ಸುವಿಧ’ಅಪ್ ನಲ್ಲಿ ಪ್ರಚಾರ ನಡೆಸುವ ಸ್ಥಳ ,ದಿನಾಂಕ ನಮೂದಿಸಿ ಅನುಮತಿ ಪಡೆಯಬಹುದು.ಇಲ್ಲದೆ ಚುನಾವಣಾ ಅಧಿಕಾರಿಗಳಿಗೆ ಮಾಹಿತಿ ಸಲ್ಲಿಸಿ ಅನುಮತಿ ಪಡೆಯಬಹುದು.ನೀತಿ ಸಂಹಿತೆ ಸಮಯದಲ್ಲಿ ಕೋಮು ಸೌಹಾರ್ದತೆ ಬಹಳ ಮುಖ್ಯ.ಜಾತಿ ,ಧರ್ಮದ ಹೆಸರಲ್ಲಿ ಮತ ಕೇಳುವುದು ನಿಷಿದ್ಧ .ಹಣದ ಆಮಿಷ,ಉಡುಗೊರೆ, ಬಲವಂತದ ಮತದಾನ ಅವಕಾಶವಿಲ್ಲ. ಚುನಾವಣಾ ಅಕ್ರಮಗಳನ್ನು ತಡೆಯಲು ಅಂತರ ರಾಜ್ಯ ,ಅಂತರ ಜಿಲ್ಲೆಗಳನ್ನು ಸಂಪರ್ಕಿಸುವ ರಸ್ತೆಗಳಲ್ಲಿ 8 ಚೆಕ್ ಪೆÇೀಸ್ಟ್ ನಿರ್ಮಾಣ ಮಾಡಲಾಗಿದೆ.ಅಲ್ಲದೆ 18 ಸೆಕ್ಟರ್ ಆಫೀಸರ್ಸ್, 5ಫ್ಲೈಯಿಂಗ್ ಸ್ಕ್ವಾಡ್ ಸೇರಿದಂತೆ ಹಲವು ತನಿಖಾ ತಂಡಗಳನ್ನು ರಚಿಸಲಾಗಿದೆ.ಚುನಾವಣೆಯನ್ನು ಮುಕ್ತವಾಗಿ ನಡೆಯಲು ಆಯೋಗ ಸಿದ್ದವಿರುವುದಾಗಿ ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ತಹಶೀಲ್ದಾರ್ ಸಿ.ಜೆ.ಗೀತಾ, ಪೆÇ್ರಬೆಷನರಿ ತಹಶೀಲ್ದಾರ್ ಮಹೇಶ್, ಪೆÇಲೀಸ್ ವೃತ್ತ ನಿರೀಕ್ಷಕ ಬಿ.ಮಹೇಶ್, ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಸಿ.ಕೃಷ್ಣ , ಪುರಸಭೆ ಮುಖ್ಯಾಧಿಕಾರಿ ವಸಂತ ಕುಮಾರಿ ಇತರರು ಹಾಜರಿದ್ದರು.