ಚುನಾವಣಾ ನೀತಿ ಸಂಹಿತೆ ಜಾರಿ ಕಾರ್ಯಕ್ರಮಗಳಿಗೆ ಅನುಮತಿ ಕಡ್ಡಾಯ

ಅಥಣಿ:ಮಾ.31: ಮತಕ್ಷೇತ್ರದಲ್ಲಿ ಶಾಂತಿಯುತವಾಗಿ ಚುನಾವಣೆ ನಡೆಸಲು ಸಕಲ ಸಿದ್ಧತೆ
ಮಾಡಿಕೊಳ್ಳಲಾಗಿದೆ. ಈಗಾಗಲೇ ಚುನಾವಣೆ ವೇಳಾ ಪಟ್ಟಿ ಮತ್ತು ನೀತಿ ಸಂಹಿತೆ ಜಾರಿಯಾಗಿದ್ದು ರಾಜಕೀಯ ಪಕ್ಷಗಳು ಅನುಮತಿ ಇಲ್ಲದೆ ಯಾವುದೇ ಕಾರ್ಯಕ್ರಮ ಆಯೋಜಿಸಬಾರದೆಂದು ಚುನಾವಣಾಧಿಕಾರಿ ರಾಜಶೇಖರ ಬಿಜಾಪೂರ ತಿಳಿಸಿದರು.

ಅವರು ಸ್ಥಳೀಯ ಮಿನಿ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಮೇ 15ರವೆಗೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಎಲ್ಲರೂ ಚುನಾವಣಾ ನಿಯಮಗಳನ್ನು ಪಾಲಿಸಬೇಕು. 18 ವರ್ಷ ತುಂಬಿದ ಅರ್ಹ ಮತದಾರರಿಗೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು.ಏ.10ರವರೆಗೆ ಅವಕಾಶವಿದೆ ಅರ್ಹ ಮತದಾರರು ಇದರ ಸದುಪಯೋಗ ಪಡೆದುಕೊಳ್ಳಬೇಕು, ಅಥಣಿ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಕೆಲವೆಡೆ ಚೆಕ್ ಪೆÇೀಸ್ಟ್ ತೆರೆಯಲಾಗಿದೆ ಎಂದರು. ಸಹಾಯಕ ಚುನಾವಣಾಧಿಕಾರಿ ಅಥಣಿ ತಹಸೀಲ್ದಾರ ಬಿ.ಎಸ್.ಖಡಕಬಾವಿ ಮಾತನಾಡಿ, ಅಥಣಿ ಮತಕ್ಷೇತ್ರದಲ್ಲಿ ಒಟ್ಟು 2.24 ಲಕ್ಷ ಮತದಾರರಿದ್ದಾರೆ. 1.16 ಲಕ್ಷ ಪುರುಷ, 1.08 ಲಕ್ಷ ಮಹಿಳಾ ಮತದಾರರಿದ್ದಾರೆ. 190 ಸ್ಥಳಗಳಲ್ಲಿ ಒಟ್ಟು 260 ಮತಗಟ್ಟೆಗಳಿವೆ. 80 ವಯಸ್ಸಿನವರಿಗೆ ಮತದಾನಕ್ಕೆ ವಿಶೇಷ ವ್ಯವಸ್ಥೆ ಮಾಡಲಾಗಿದೆ ಎಂದರು.

ಈ ವೇಳೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ವೀರಣ್ಣ ವಾಲಿ, ಪಿಎಸ್ ಐ ಶಿವಶಂಕರ ಮುಕರಿ, ಅಬಕಾರಿ ನಿರೀಕ್ಷಕ ಶ್ರೀಕಾಂತ ಬಂಡಗರ, ಎಸ್.ಎಸ್ ಪವಾರ, ಉಪ ತಹಶೀಲ್ದಾರ ಎಂ ಎಸ್.ಯತ್ನಟ್ಟಿ, ಬಿ.ಎ.ಡಾಬಳ್ಳಿ, ಎಸ್.ಎಸ್.ಡೆಂಗಿ ಸೇರಿದಂತೆ ಹಲವರು ಉಪಸ್ಥಿತರಿದ್ದರು,