ಸಂಜೆವಾಣಿ ವಾರ್ತೆ
ಸಿರುಗುಪ್ಪ, ಮಾ.30: ಎಲ್ಲಾ ರಾಜಕೀಯ ಪಕ್ಷಗಳು ಚುನಾವಣೆ ನೀತಿ ಸಂಹಿತೆಯನ್ನು ಪಾಲಿಸುವ ಮೂಲಕ ನ್ಯಾಯಸಮ್ಮತ ಹಾಗೂ ಶಾಂತಿಯುತ ಚುನಾವಣೆ ನಡೆಸುವ ನಿಟ್ಟಿನಲ್ಲಿ ರಾಜಕೀಯ ಪಕ್ಷಗಳು ಸಹಕಾರ ನೀಡುವಂತೆ ಚುನಾವಣಾಧಿ ಕಾರಿ ಸತೀಶ್ ಕುಮಾರ್ ಹೇಳಿದರು.
ನಗರದ ತಾಲೂಕು ಕಚೇರಿಯಲ್ಲಿ ಬುಧವಾರ ಸಂಜೆ ನಡೆದ ರಾಜಕೀಯ ಪಕ್ಷಗಳ ಮುಖಂಡರ ಸಭೆಯಲ್ಲಿ ಮಾತನಾಡಿ, ಚುನಾವಣೆ ಆಯೋಗ ಚುನಾವಣೆ ಘೋಷಣೆ ಮೂಲಕ ಮಾದರಿ ಚುನಾವಣೆ ನೀತಿ ಸಂಹಿತೆ ಚಾಲನೆಯಲ್ಲಿದ್ದು, ಪ್ರತಿಯೊಂದು ಪಕ್ಷಗಳು ಚುನಾವಣೆ ನೀತಿ ಸಂಹಿತೆಯನ್ನು ಕಡ್ಡಾಯವಾಗಿ ಪಾಲಿಸಬೇಕು. ತಾಲೂಕಿನಲ್ಲಿ ನ್ಯಾಯಸಮ್ಮತ ಚುನಾವಣೆಗೆ ಪ್ರತಿಯೊಬ್ಬರು ಕೈಜೋಡಿಸಬೇಕು ಎಂದು ತಿಳಿಸಿದರು.
ತಾಲೂಕಿನಲ್ಲಿ ಒಟ್ಟು 2,15,458 ಮತದಾರರಿದ್ದು, ಈ ಪೈಕಿ 1,09,448 ಮಹಿಳೆಯರು ಇದ್ದರೆ, 1,05,971 ಪುರುಷ ಮತದಾರರಿದ್ದು, 39 ತೃತಿಯ ಲಿಂಗಿಗಳು ಇದ್ದರೆ. ತಾಲೂಕಿನಲ್ಲಿ ಮಹಿಳಾ ಮತದಾರರು ಹೆಚ್ಚು ಇರುವುದು ವಿಶೇಷವಾಗಿದೆ.
ಚುನಾವಣೆ ಆಯೋಗದಿಂದ ಜಾರಿಗೊಳಿಸಿರುವ ಹಿರಿಯ ನಾಗರಿಕರಿಗೆ ಮತ್ತು ವಿಕಲಚೇತನರಿಗೆ ಮನೆಯಿಂದ ಮತದಾನ ಮಾಡುವ ಅವಕಾಶ ಕಲ್ಪಿಸಿರುವ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ 80 ವರ್ಷಕ್ಕೆ ಮೇಲ್ಪಟ್ಟ ಒಟ್ಟು 3123 ಮತದಾರರಿದ್ದರೆ, 3813 ವಿಕಲಚೇತನ ಮತದಾರರು ಇದ್ದರೆ, ಆದರೆ ಮತದಾನ ಪ್ರಜಾಪ್ರಭುತ್ವದ ಪ್ರಮುಖ ಅಂಗವಾಗಿರುವ ಮತದಾನವನ್ನು ಮತಗಟ್ಟೆಯಲ್ಲೇ ಮತದಾನ ಮಾಡಲು ಪ್ರೇರಣೆ ನೀಡಬೇಕೆಂದು ಹೇಳಿದರು.
ಸಹಾಯಕ ಚುನಾವಣೆ ಅಧಿಕಾರಿ ತಹಶೀಲ್ದಾರ್ ಎನ.ಆರ್ ಮಂಜುನಾಥ ಸ್ವಾಮಿ, ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಮತ್ತು ಸಿಬ್ಬಂದಿಗಳು ಇದ್ದರು.