ಚುನಾವಣಾ ಗಿಮಿಕ್ ಬಜೆಟ್

ಕಲಬುರಗಿ:ಫೆ.1: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರದ 2024ರ ಕೇಂದ್ರ ಮಧ್ಯಾಂತರ ಬಜೆಟ್ ನಲ್ಲಿ ಎನೂ ಇಲ್ಲ, ಇಲ್ಲದ ಕಾರಣ ವಿತ್ತ ಸಚಿವರು ಕೇವಲ 59 ನಿಮಿಷದಲ್ಲಿ ಬಜೆಟ್ ಓದಿ ಮುಗಿಸಿಬಿಟ್ಟರು ಎಂದು ಯುವ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಶಿವಾನಂದ ಹೊನಗುಂಟಿ ಟೀಕಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಈ ಬಜೆಟ್ ನಲ್ಲಿ ಯುವಕರ ಶ್ರೇಯೋಭಿವೃದ್ದಿಗೆ ಯಾವುದೇ ಗಮನಾರ್ಹ ಯೋಜನೆ ಗಳ ಘೋಷಣೆ ಮಾಡಿಲ್ಲ. ಕೇವಲ ಚುನಾವಣಾ ತಂತ್ರಗಾರಿಕೆ ಇಟ್ಟುಕೊಂಡು ಚುನಾವಣಾ ಗಿಮಿಕ್, ಮಂತ್ರ, ಜಪಿಸುವುದಾಗಿದೆ ಹೊರತು ಹೊಸತನ ಇಲ್ಲ.
ಈ ಬಜೆಟ್ ನಲ್ಲಿ ಕರ್ನಾಟಕಕ್ಕೆ ಎಳ್ಳು ಕಾಳಿನಷ್ಟು ಉಪಯೋಗವಿಲ್ಲ,ಅದರಲ್ಲೂ ಕಲ್ಯಾಣ ಕರ್ನಾಟಕ ಭಾಗಕ್ಕೆ ನಿರ್ಲಕ್ಷ್ಯ ತೋರಿದೆ. ಕೇಂದ್ರ ಸರ್ಕಾರವು ಪ್ರಾದೇಶಿಕ ಅಸಮತೋಲನೆ ನಿವಾರಣೆ ಗೆ ದಿಟ್ಟ ಹೆಜ್ಜೆ ಇಡುವ ಯೋಜನೆಗಳು ಘೋಷಣೆ ಮಾಡಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಉದ್ಯಮಿ ಮತ್ತು ಗೆಳೆಯರ ಆದಾಯ ದುಪ್ಪಟ್ಟಾಗಿದ್ದನ್ನು ದೇಶದ ಜನರ ತಲಾದಾಯವೆನ್ನುತ್ತಿರುವುದು ಹಾಸ್ಯಸ್ಪದ ಎಂದು ದೂರಿದ್ದಾರೆ.