ಚುನಾವಣಾ ಕೆಲಸಗಳಿಗೆ ಅಂಗನವಾಡಿ ಕಾರ್ಯಕರ್ತೆಯರನ್ನು ಬಳಸದಿರಲು ಮನವಿ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜು.08: ಅಂಗನವಾಡಿ ಕಾರ್ಯಕರ್ತೆಯರನ್ನು ಚುನಾವಣೆ ಸೇರಿದಂತೆ ಸರ್ಕಾರದ ಇತರೇ ಕಾರ್ಯಗಳಿಗೆ ನೇಮಕ‌ ಮಾಡಬೇಡಿ ಎಂದು ಅಂಗನವಾಡಿ ನೌಕರರ ಸಂಘ ಸರ್ಕಾರಕ್ಕೆ ಮನವಿ ಮಾಡಿದೆ.
ಸಂಘದ ಅಧ್ಯಕ್ಷೆ ಬಿ.ಉಮಾದೇವಿ ಮತ್ತಿತರ ಮುಖಂಡರು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ.
ಚಿಕ್ಕ ಮಕ್ಕಳ ಬೌದ್ಧಿಕ ಮತ್ತು ದೈಹಿಕ ಬೆಳವಣಿಗೆ ದೃಷ್ಟಿಯಿಂದ   ಅಂಗನವಾಡಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ.
ಇದರಲ್ಲಿ ಕಾರ್ಯನಿರ್ವಹಿಸುವ ಕಾರ್ಯಕರ್ತೆಯನ್ನು ಕೇಂದ್ರ ಕಾರ್ಯಚಟುವಟಿಕೆ ಬಿಟ್ಟು ಚುನಾವಣೆ ಮತ್ತಿತರೇ ಕಾರ್ಯಗಳಿಗೆ ನೇಮಕ ಮಾಡಿದರೆ ಮಕ್ಕಳ ಬೆಳವಣಿಗೆಗೆ ಕುಂಠಿತವಾಗುತ್ತದೆ ಇದರಿಂದಾಗಿ ಈಗಾಗಲೇ ರಾಜ್ಯದಲ್ಲಿ 2022-23 ರಲ್ಲಿ 50 ಲಕ್ಷ ಇದ್ದ ಮಕ್ಕಳ ಸಂಖ್ಯೆ  2023-24 ರಲ್ಲಿ 40 ಲಕ್ಷಕ್ಕೆ
ಇಳಿದಿದೆಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಅಂಗನವಾಡಿ ನೌಕರರಿಗೆ ಹೆಚ್ಚುವರಿ ಕೆಲಸ ನೀಡದಂತೆ ಹೇಳಿದ್ದರೂ  ಯಾವುದೇ ಹೆಚ್ಚುವರಿ ಕೆಳನಗಳು ನಿಂತಿಲ್ಲ. 
ಬಿಎಲ್ಓ ಕೆಲಸ ನಿರ್ವಹಿಸಲು ಆಗುವುದಿಲ್ಲ ಎಂದು ಶಿಕ್ಷಕರ ಸಂಘನೆಯವರು ಪತ್ರಬರೆದು ಸರ್ಕಾರಕ್ಕೆ ತಿಳಿಸಿದೆ. ಅದೇ ರೀತಿ ನಮಗೂ ಸಹ‌ ನಮ್ಮ‌ ಕೇಂದ್ರದ ಕೆಲಸ ಬಿಟ್ಟು ಚುನಾವಣಾ ಕೆಲಸದಿಂದ ಹೊರಗಿಡಬೇಕು ಎಂದು ಚುನಾವಣಾ ಆಯೋಗ ಮತ್ತು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಸಂಘಟನೆಯ ಮುಖಂಡರುಗಳಾದ ಸತ್ಯಬಾಬು, ಈರಮ್ಮ, ನೀಲಾವತಿ, ಖಾಜಾಬಿನ್ನಿ ಮೊದಲಾದವರು ಸುದ್ದಿಗೋಷ್ಟಿಯಲ್ಲಿ ಇದ್ದರು.