ಚುನಾವಣಾ ಕಾರ್ಯವೀಕ್ಷಣೆ ಮಾಡಿದ ಎಸಿ

ಕೊಟ್ಟೂರು ಡಿ 19:ತಾಲೂಕಿನ 13 ಗ್ರಾಮ ಪಂಚಾಯಿತಿಗಳಿಗೆ ಇದೇ 27 ರಂದು ಚುನಾವಣೆ ನಡೆಯಲಿದ್ದು ಇದಕ್ಕಾಗಿ ತಾಲೂಕು ಆಡಳಿತ ಸಕಲ ಸಿದ್ದತೆ ಕೈಗೊಳ್ಳುತ್ತಿದೆ.ಇಂದು ಪಟ್ಟಣದ ತಾಲೂಕು ಕಚೇರಿಗೆ ಪ್ರಸನ್ ಕುಮಾರ್, ಸಹಾಯಕ ಆಯುಕ್ತರು, ಹರಪನಹಳ್ಳಿ ಇವರು ಆಗಮಿಸಿ ಚುನಾವಣಾ ಕಾರ್ಯದ ಸಿದ್ದತೆ ಬಗ್ಗೆ ಪರಿಶೀಲಿಸಿ ಅಗತ್ಯ ಸಲಹೆ, ಸೂಚನೆ ನೀಡಿದರು. ಚುನಾವಣೆ ವಿಭಾಗದ ಶಿವಕುಮಾರ, ಆರ್.ಐಹಾಲಸ್ವಾಮಿ, ಟೈಪಿಸ್ಟ ಗುರುಬಸವರಾಜ ಸೇರಿದಂತೆ ಆನೇಕರಿದ್ದರು.