
ಮೈಸೂರು: ಏ.03:- ರಾಜ್ಯದಲ್ಲಿ ವಿಧಾನ ಸಭಾ ಚುನಾವಣೆ ಸಮೀಪಿಸುತ್ತಿದ್ದು, ನೀತಿ ಸಂಹಿತೆ ಜಾರಿಯಲ್ಲಿದೆ. ಈಗಾಗಲೇ ಪೆÇಲೀಸ್ ಸಿಬ್ಬಂದಿಗಳನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಚುನಾವಣಾ ಕರ್ತವ್ಯವನ್ನು ದಕ್ಷತೆಯಿಂದ ನಿಭಾಯಿಸಬೇಕು ಎಂದು ನಿವೃತ್ತ ಐಜಿಪಿ ಕೆ.ಟಿ.ಬಾಲಕೃಷ್ಣ ಸಲಹೆ ನೀಡಿದರು.
ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ನಗರ ಸಶಸ್ತ್ರ ಮೀಸಲು ಪಡೆ(ಸಿಎಆರ್) ಮೈದಾನದಲ್ಲಿ ಭಾನುವಾರ ಮೈಸೂರು ನಗರ, ಜಿಲ್ಲಾ ಪೆÇಲೀಸ್ ಇಲಾಖೆ, ಕರ್ನಾಟಕ ಪೆÇಲೀಸ್ ಅಕಾಡೆಮಿ ಸೇರಿದಂತೆ ಇನ್ನಿತರ ವಿಭಾಗಗಳ ಪೆÇಲೀಸ್ ಘಟಕಗಳ ವತಿಯಿಂದ ಆಯೋಜಿಸಿದ್ದ ಪೆÇಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಹಿಂದೆ ಪೆÇಲೀಸ್ ಧ್ವಜ ದಿನಾಚರಣೆ ಎಂದರೆ ಸಂಭ್ರಮ ಇರುತ್ತಿತ್ತು. ದೇಣಿಗೆ ಸಂಗ್ರಹಿಸಲು ಪೆÇಲೀಸರು ಉತ್ಸುಕರಾಗಿರುತ್ತಿದ್ದರು. ಹಬ್ಬ ರೀತಿಯಲ್ಲಿ ಪೆÇಲೀಸ್ ಧ್ವಜ ದಿನಾಚರಣೆ ಆಚರಿಸಲಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಈ ಹಿಂದೆ ಇದ್ದ ವೈಭವ ಹಾಗೂ ಮಹತ್ವ ಕಳೆದುಕೊಳ್ಳುತ್ತಿದೆ. ಇದಕ್ಕೆ ಸರ್ಕಾರ ನೀಡುತ್ತಿರುವ ಸೌಲಭ್ಯವೂ ಒಂದು ಕಾರಣವಾದರೆ, ದೇಣಿಗೆ ಸಂಗ್ರಹಿಸಲು ಪೆÇಲೀಸರಿಗೆ ನಿರಾಸಕ್ತಿ ಹಾಗೂ ಭಯ, ದೇಣಿಗೆ ನೀಡಲು ಸಾರ್ವಜನಿಕರ ನಿರಾಕರಣೆಯೂ ಕಾರಣವಾಗಿದೆ ಎಂದರು.
ಮುಂದಿನ ದಿನಗಳಲ್ಲಿ ಧ್ವಜ ದಿನಾಚರಣೆಯ ಮಹತ್ವ ಮರುಳಿಸುವಂತಾಗಬೇಕು. ಪೆÇಲೀಸರು ದೇಣಿ ಸಂಗ್ರಹಿಸಿ, ಪೆÇಲೀಸರು ಹಾಗೂ ನಿವೃತ್ತ ಪೆÇಲೀಸರ ಕಲ್ಯಾಣ ನಿಧಿಯ ಮೊತ್ತವನ್ನು ಇನ್ನಷ್ಟು ಬೆಳೆಸುವತ್ತ ಗಮನ ಹರಿಸಬೇಕೆಂದು ಸಲಹೆ ನೀಡಿದರು.
ಈ ಹಿಂದೆ ಆಯಾ ಠಾಣಾ ವ್ಯಾಪ್ತಿಯಲ್ಲಿ ಕೆಲಸ ಮಾಡುವ ಪೆÇಲೀಸ್ ಸಿಬ್ಬಂದಿಗಳು ಸ್ಥಳೀಯ ಪ್ರದೇಶದ ಜನರೊಂದಿಗೆ ಹೊಂದಾಣಿಕೆಯಿಂದ ಕರ್ತವ್ಯ ನಿರ್ವಹಿಸಬೇಕಾಗಿತ್ತು. ಆದರೆ, ಇದೀಗ ಎಲ್ಲೆಡೆ ಒಂದೇ ಮಾದರಿಯಂತೆ ಕೆಲಸ ನಿರ್ವಹಿಸಬೇಕಾಗಿದೆ ಎಂದರು.
ನಿವೃತ್ತರಿಗೆ ಸನ್ಮಾನ: ಧ್ವಜ ದಿನದ ಅಂಗವಾಗಿ ನಿವೃತ್ತ ಪೆÇಲೀಸ್ ಸಿಬ್ಬಂದಿಗಳನ್ನು ಸನ್ಮಾನಿಸಲಾಯಿತು. ನಿವೃತ್ತ ಐಜಿಪಿ ಕೆ.ಟಿ.ಬಾಲಕೃಷ್ಣ, ನಿವೃತ್ತ ಪಿಎಸ್‍ಐಗಳಾದ ಪಿ.ಮಹದೇವ, ಛಾಯಾಪತಿ, ನಿ. ಸಹಾಯಕ ಆಡಳಿತಾಧಿಕಾರಿ ವೈ.ವೈ.ಬಗಲಿ, ನಿ. ಪ್ರ.ದರ್ಜೆ ಸಹಾಯಕ ಶ್ರೀನಿವಾಸ್ ರಾಜು, ನಿ. ಎಎಸ್‍ಐಗಳಾದ ಮಂಜಪ್ಪ, ಮುಕುಂದ್ ಸಿಂಗ್, ನಿ. ಸಿಹೆಚ್‍ಸಿ ವಿ.ನಾರಾಯಣ, ನಿ.ಆರ್‍ಎಸ್‍ಐ ಎನ್.ಮುರುಳಿಧರ ಮಾನೆ, ನಿ. ಎಆರ್‍ಎಸ್‍ಐ ಅಕ್ತರ್ ಷರೀಷ್(ಡಿಎಆರ್), ನಿ. ಎಹೆಚ್‍ಸಿ ಹೆಚ್.ಎಂ.ಪ್ರಕಾಶ್(ಮೌಂಟೆಡ್), ನಿ. ಎಹೆಚ್‍ಸಿ ತಿಬ್ಬಣ್ಣ(ಡಿಎಆರ್), ಕರ್ನಾಟಿಕ್ ವಾದ್ಯಾವೃಂದದ ನಿ. ವಾಧ್ಯಗಾರ ಎಂ.ಆರ್.ಉದಯ್‍ಕುಮಾರ್, ಆಂಗ್ಲ ವಾದ್ಯವೃಂದ ನಿ.ವಾದ್ಯಾಗಾರ ಆರ್.ಕೃಷ್ಣಮೂರ್ತಿ ಹಾಗೂ ಇನ್ನಿತರರನ್ನು ಸನ್ಮಾನಿಸಲಾಯಿತು.
ಆಕರ್ಷಕ ಪಥಸಂಚಲನ: ಕಾರ್ಯಕ್ರಮದ ಅಂಗವಾಗಿ ಆಕರ್ಷಕ ಪಥಸಂಚಲನ ಆಯೋಜಿಸಲಾಗಿತ್ತು. ಮೈಸೂರಿನ ವಿವಿಧ ತುಕಡಿಗಳ ಪೆÇಲೀಸರು ಪಥಸಂಚಲನ ನಡೆಸಿ, ಗೌರವ ವಂದನೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ನಗರ ಪೆÇಲೀಸ್ ಆಯುಕ್ತ ಬಿ.ರಮೇಶ್, ಎಸ್ಪಿ ಸೀಮಾ ಲಾಟ್ಕರ್, ಡಿಸಿಪಿಗಳಾದ ಮುತ್ತುರಾಜ್, ಎಸ್.ಜಾಹ್ನವಿ, ಸಿಎಆರ್ ಡಿಸಿಪಿ ಮಾರುತಿ, ಮೌಂಟೆಡ್ ಡಿಸಿಪಿ ಶಿವರಾಜು, ಮೌಂಟೆಡ್ ಕಮಾಂಡೆಂಟ್ ಜನಾರ್ಧನ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.